Breaking News

ಬಿಜೆಪಿ ಯುವ ಮೋರ್ಚಾದಿಂದ ಪಂಜಿನ ಮೆರವಣಿಗೆ.!

Spread the love

ಬಿಜೆಪಿ ಯುವ ಮೋರ್ಚಾದಿಂದ ಪಂಜಿನ ಮೆರವಣಿಗೆ.!

ಯುವ ಭಾರತ ಸುದ್ದಿ, ಗೋಕಾಕ: ಬ್ರೀಟಿಷ್ ಶಾಹಿಯ ವಿರುದ್ದ ಕಹಳೆಯೂದಿದ ಮಹಾತ್ಮರ ಸ್ಮರಣಾರ್ಥ ನಗರದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು.
ಮಂಗಳವಾರಂದು ಸಂಜೆ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಸುಮಾರು ನೂರಾರು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ತ್ಯಾಗ ಬಲಿದಾನದ ಸ್ಮರಣಾರ್ಥವಾಗಿ ಪಾದಯಾತ್ರೆ ಮಾಡುವ ಮೂಲಕ ಬಸವೇಶ್ವರ ವೃತ್ತದ ವರೆಗೆ ಪಂಜಿನ ಮೆರವಣಿಗೆ ನಡೆಸಿ, ಬಸವೇಶ್ವರ ವೃತ್ತದಲ್ಲಿ ಕಾರ್ಯಕರ್ತರೆಲ್ಲರೂ ಮೆಣದ ದೀಪ ಹಚ್ಚಿ ಮಹಾನ ವ್ಯಕ್ತಿಗಳಿಗೆ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷ ಭೀಮಶಿ ಭರಮಣ್ಣವರ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಲ, ಯುವ ಮೋರ್ಚಾ ಅಧ್ಯಕ್ಷ ಮಂಜು ಪ್ರಭುನಟ್ಟಿ, ವಿಶ್ವನಾಥ ಜೋಶಿ, ಸುರಜ ಗುಂಟೆ, ವಿರೇಂದ್ರ ಏಕ್ಕೇರಿಮಠ, ಅರ್ಜುನ ಜರತಾರಕರ, ಕಿರಣ ವಾಲಿ, ಪ್ರಕಾಶ ತಳ್ಳಿ, ಆನಂದ ಖಾನಪ್ಪನವರ, ಪ್ರದೀಪ ನಾಸಿ, ನಾಗರಾಜ ಗಣಾಚಾರಿ, ಪ್ರಶಾಂತ ಕಂಡೂರಿ, ಇಮ್ರಾನ್ ಖಾಲೀದ, ಕೇದಾರಿ ಸುಭಂಜಿ, ಮಂಜು ಕಲ್ಲೋಳ್ಳಿ, ಪವನ ಕಾಡನ್ನವರ, ವಿನೂತ ಜತ್ತಿ ಸೇರಿದಂತೆ ನೂರಾರು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಇದ್ದರು.


Spread the love

About Yuva Bharatha

Check Also

ವಿಬಿ- ಜೀ ರಾಮ್ ಜೀ ಯೋಜನೆಯನ್ನು ಜಾರಿ ಮಾಡಿದ್ದರಿಂದ ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡುತ್ತಿದ್ದಾರೆ.- ಸುಭಾಸ ಪಾಟೀಲ

Spread the love ಗೋಕಾಕ: ವಿಕಸಿತ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿಯವರು ವಿಬಿ- ಜೀ ರಾಮ್ …

Leave a Reply

Your email address will not be published. Required fields are marked *

fifteen − twelve =