ಹಿಟ್ನಿಯಲ್ಲಿ ನಗದು, ಹಳ್ಳೂರಲ್ಲಿ ಚಿನ್ನಾಭರಣ ವಶ
ಯುವ ಭಾರತ ಸುದ್ದಿ ಬೆಳಗಾವಿ :
ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 11.49 ಲಕ್ಷ ರೂ. ನಗದು ಹಣವನ್ನು ಪೊಲೀಸರು ಹಾಗೂ ಎಫ್ ಎಸ್ ಟಿ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಹುಕ್ಕೇರಿ ತಾಲೂಕಿನ ಹಿಟ್ನಿ ಕ್ರಾಸ್ ಬಳಿ ನಡೆದಿದೆ.
ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಹುಕ್ಕೇರಿ ತಾಲೂಕಿನ ಹಿಟ್ನಿ ಕ್ರಾಸ್ ಹತ್ತಿರ ತಪಾಸಣೆ ನಡೆಸುತ್ತಿರುವ ಅಧಿಕಾರಿಗಳು ಬುಧವಾರ ಮತ್ತಷ್ಟು ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಚೆಕ್ ಪೋಸ್ಟ್ ನಲ್ಲಿ ದಾಖಲೆಗಳಿಲ್ಲದ ರೂ.11,49,000 ನಗದನ್ನು ಎಸ್‌ಎಸ್‌ಟಿ, ಎಫ್‌ಎಸ್‌ಟಿ, ಎಂಸಿಸಿ ನೋಡಲ್ ಅಧಿಕಾರಿಗಳು ಹುಕ್ಕೇರಿ ಸಿಪಿಐ, ಎಂ.ಎಂ ತಹಶೀಲ್ದಾರ, ಸಂಕೇಶ್ವರ ಸಿಪಿಐ ಪ್ರಲ್ಹಾದ ಚನ್ನಗೇರಿ, ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದರು. ಮುಂದಿನ ಕ್ರಮಕ್ಕಾಗಿ ಆದಾಯ ತೆರಿಗೆ ಇಲಾಖೆಗೆ ತಿಳಿಸಲಾಗಿದೆ.
ಚಿನ್ನಾಭರಣ ವಶ ಮೂಡಲಗಿ :
ಅರಭಾವಿ ವಿಧಾನಸಭಾ ಮತಕ್ಷೇತ್ರದ ಹಳ್ಳೂರ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 60.47 ಲಕ್ಷ ಮೌಲ್ಯದ 1,025 ಗ್ರಾಂ ಚಿನ್ನಾಭರಣವನ್ನು ಚುನಾವಣೆ ಅಧಿಕಾರಿಗಳು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕಾರು ಚಾಲಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಮಹಾಲಿಂಗಪುರದಿಂದ ಬೆಳಗಾವಿಗೆ ಹೊರಟಿದ್ದ ವಾಹನ ತಪಾಸಣೆ ಮಾಡುವ ವೇಳೆ, ಚಿನ್ನಾಭರಣ ಪತ್ತೆಯಾಗಿದೆ.