Breaking News

ಅಪರಾಧ

ಮಾವನೂರಲ್ಲಿ ಜೋಡಿ ಕೊಲೆ

ಮಾವನೂರಲ್ಲಿ ಜೋಡಿ ಕೊಲೆ ಬೆಳಗಾವಿ : ಯಮಕನಮರಡಿ ಬಳಿಯ ಮಾವನೂರಿನಲ್ಲಿ ಜೋಡಿ ಕೊಲೆ ನಡೆದಿದೆ. ಗಜೇಂದ್ರ ಈರಪ್ಪ ಹುನ್ನೂರಿ (60 ವರ್ಷ) ಮತ್ತು ದ್ರಾಕ್ಷಾಯಿಣಿ ಗಜೇಂದ್ರ ಹುನ್ನೂರಿ (45 ವರ್ಷ) ಕೊಲೆಯಾದ ದುರ್ದೈವಿಗಳು. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ತನಿಕೆ ನಡೆಸುತ್ತಿದ್ದಾರೆ.

Read More »

ಅಕ್ಕತಂಗೇರಹಾಳದಲ್ಲಿ ಜೋಡಿ ಕೊಲೆ

ಅಕ್ಕತಂಗೇರಹಾಳದಲ್ಲಿ ಜೋಡಿ ಕೊಲೆ ಬೆಳಗಾವಿ : ಅಂಕಲಗಿ ಪೊಲೀಸ್ ಠಾಣಾ ವ್ಯಾಪ್ತಿಯ ಅಕ್ಕತಂಗೇರಹಾಳದಲ್ಲಿ ಮಂಗಳವಾರ ಜೋಡಿ ಕೊಲೆ ನಡೆದಿದೆ. ಅಕ್ಕತಂಗೇರಹಾಳ ಗ್ರಾಮದ ಮಲ್ಲಿಕಾರ್ಜುನ ಜಗದಾರ(40) ಹಾಗೂ ರೇಣುಕಾ ಮಾಳಗಿ (42) ಹತ್ಯೆಗೀಡಾದವರು. ಕೊಲೆಗೈದ ವ್ಯಕ್ತಿ ಯಲ್ಲಪ್ಪ ಮಾಳಗಿ(45) ಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಲೆಗೆ ಅನೈತಿಕ ಸಂಬಂಧದ ಶಂಕೆ ವ್ಯಕ್ತವಾಗಿದೆ. ಅಕ್ರಮ ಸಂಬಂಧ ಶಂಕಿಸಿ ಪತಿ ಯಲ್ಲಪ್ಪ ಮನೆಯಲ್ಲಿದ್ದ ರೇಣುಕಾಳನ್ನು ಕೊಲೆ ಮಾಡಿದ್ದಾನೆ. ನಂತರ ಅಲ್ಲಿಂದ ಮಲ್ಲಿಕಾರ್ಜುನ ಮನೆಗೆ ಹೋಗಿದ್ದಾನೆ. …

Read More »

ಬೆಳಗಾವಿ ಕಡೆ ಹೊರಟ್ಟಿದ್ದ ಕಾರು ಅಪಘಾತ : ಮೂವರ ಸಾವು

ಬೆಳಗಾವಿ ಕಡೆ ಹೊರಟ್ಟಿದ್ದ ಕಾರು ಅಪಘಾತ : ಮೂವರ ಸಾವು ಧಾರವಾಡ: ಭಾನುವಾರ ಬೆಳಿಗಿನ ಜಾವ ಲಾರಿ ಹಾಗೂ ಕಾರ್ ಮಧ್ಯೆ ಸಂಭವಿಸಿದ ಡಿಕ್ಕಿಯಲ್ಲಿ ಮೂವರು ಸಾವಿಗೀಡಾಗಿರುವ ಘಟನೆ ಧಾರವಾಡದ ರಾಷ್ಟ್ರೀಯ ಹೆದ್ದಾರಿ 4ರ ಹಳಿಯಾಳ ಸೇತುವೆ ಬಳಿ ನಡೆದ ವರದಿಯಾಗಿದೆ. ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದು, ಇನ್ನೋರ್ವ ವ್ಯಕ್ತಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರಲ್ಲಿ ಒಬ್ಬರನ್ನು ಬಿಂದುಗೌಡ (35) ಹಾಗೂ ಮತ್ತೊಬ್ಬರನ್ನು ಬಾಪುಗೌಡ (36) ಎಂದು ಗುರುತಿಸಲಾಗಿದೆ. ಇನ್ನೋರ್ವ ವ್ಯಕ್ತಿಯ ಗುರುತು …

Read More »

ಜೋಡಿ ಕೊಲೆ : ಶಿಕ್ಷೆ ಪ್ರಕಟ

ಜೋಡಿ ಕೊಲೆ : ಶಿಕ್ಷೆ ಪ್ರಕಟ ಯುವ ಭಾರತ ಸುದ್ದಿ ಬೆಳಗಾವಿ : ಜಮೀನು ವಿವಾದದಿಂದ ದಾಯಾದಿಗಳನ್ನೇ ಕೊಲೆ ಮಾಡಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಅಪರಾಧಿಗೆ 2 ಲಕ್ಷ ರೂಪಾಯಿ ದಂಡದ ಜೊತೆಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಬೈಲಹೊಂಗಲ ತಾಲೂಕು ದೊಡವಾಡ ಗ್ರಾಮದ ಮಹಾದೇವ ಹಾಲನ್ನವರ ಶಿಕ್ಷೆಗೊಳಗಾದ ವ್ಯಕ್ತಿ. ಮಹಾದೇವ ಅವರ ತಂದೆ ಯಲ್ಲಪ್ಪ ಮತ್ತು ಸಹೋದರ ನಡುವೆ ಜಮೀನು ವಿವಾದ ಇತ್ತು. ಈ ವಿವಾದ …

Read More »

ಕಪ್ಪೆ ಚಿಪ್ಪು ಹೆಕ್ಕಲು ಹೋಗಿದ್ದ ನಾಲ್ವರು ಸಾವು

ಕಪ್ಪೆ ಚಿಪ್ಪು ಹೆಕ್ಕಲು ಹೋಗಿದ್ದ ನಾಲ್ವರು ಸಾವು ಯುವ ಭಾರತ ಸುದ್ದಿ ಉಡುಪಿ: ಬ್ರಹ್ಮಾವರ ಸಮೀಪದ ಹೂಡೆಯ ಕಿಣಿಯಾರ ಕುದ್ರುವಿನಲ್ಲಿ (ಹೊಳೆ) ಭಾನುವಾರ ಕಪ್ಪೆ ಚಿಪ್ಪು ಹೆಕ್ಕಲು ಹೋಗಿದ್ದ ನಾಲ್ವರು ನೀರು ಪಾಲಾಗಿದ್ದಾರೆ. 7 ಜನ ನದಿಗೆ ಇಳಿದಿದ್ದಾರೆ. ಅವರು ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ನಾಲ್ವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ. ಉಳಿದ ಮೂವರು ದಡ ಸೇರಿದ್ದಾರೆ. ಮೂವರ ಶವ ಪತ್ತೆಯಾಗಿದ್ದು ಒಬ್ಬರ ಶೋಧ ಕಾರ್ಯ …

Read More »

ಬೈರಾಪುರ ಚೆಕ್ ಪೋಸ್ಟ್ ನಲ್ಲಿ 3.88 ಲಕ್ಷ ರೂ. ಪತ್ತೆ

ಬೈರಾಪುರ ಚೆಕ್ ಪೋಸ್ಟ್ ನಲ್ಲಿ 3.88 ಲಕ್ಷ ರೂ. ಪತ್ತೆ ಯುವ ಭಾರತ ಸುದ್ದಿ ಬೆಳಗಾವಿ : ಹುಕ್ಕೇರಿ ತಾಲೂಕಿನ ಬೈರಾಪುರ ಚೆಕ್ ಪೋಸ್ಟ್ ನಲ್ಲಿ 3.88 ಲಕ್ಷ ರೂ. ಪತ್ತೆಯಾಗಿದೆ. ಕೊಲ್ಲಾಪುರ ಜಿಲ್ಲೆಯ ಜಮಾದಾರ್ ಎಂಬ ವ್ಯಕ್ತಿ ಹಣ ಒಯ್ಯುತ್ತಿದ್ದಾಗ ಎಫ್ ಎಸ್‌ಟಿ ಮತ್ತು ಪೊಲೀಸರು ತಪಾಸಣೆ ನಡೆಸಿ ಹಣ ವಶಪಡಿಸಿಕೊಂಡಿದ್ದಾರೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ದಾಖಲೆಯಿಲ್ಲದ 50 ಲಕ್ಷ ರೂ. ವಶ

ದಾಖಲೆಯಿಲ್ಲದ 50 ಲಕ್ಷ ರೂ. ವಶ ಯುವ ಭಾರತ ಸುದ್ದಿ ಬೆಳಗಾವಿ : ಸದಲಗಾ ದತ್ತವಾಡ ಚೆಕ್ ಪೋಸ್ಟ್ ನಲ್ಲಿ ಮಂಗಳವಾರ ದಾಖಲೆ ಇಲ್ಲದ 50 ಲಕ್ಷ ರೂಪಾಯಿ ಹಣವನ್ನು ಪೊಲೀಸರು, ಎಸ್ ಎಫ್ ಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ತಪಾಸಣೆ ವೇಳೆ ಯಾವುದೇ ದಾಖಲೆ ಇಲ್ಲದೆ ಹಣ ಒಯ್ಯುತ್ತಿದ್ದಾಗ ವ್ಯಕ್ತಿ ಸಿಕ್ಕಿಬಿದ್ದಿದ್ದು ಪೊಲೀಸರು ಹಣ ವಶಪಡಿಸಿಕೊಂಡಿರುವುದಾಗಿ ಎಸ್‌ಪಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.

Read More »

ಬೆಳಗಾವಿ ನಗರ ಸಿಸಿಬಿ ಪೊಲೀಸರರಿಂದ ದಾಳಿ : ಮಾದಕ ವಸ್ತು ( ಪನ್ನಿ ) ಮಾರಾಟಗಾರನ ಬಂಧನ

ಬೆಳಗಾವಿ ನಗರ ಸಿಸಿಬಿ ಪೊಲೀಸರರಿಂದ ದಾಳಿ : ಮಾದಕ ವಸ್ತು ( ಪನ್ನಿ ) ಮಾರಾಟಗಾರನ ಬಂಧನ ಯುವ ಭಾರತ ಸುದ್ದಿ ಬೆಳಗಾವಿ : ದಿನಾಂಕ : 08/04/2023 ರಂದು ಖಚಿತ ಮಾಹಿತಿಯನ್ನಾಧರಿಸಿ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಅಲ್ತಾಫ್ ಎಮ್ . ನೇತೃತ್ವದ ತಂಡ ಬೆಳಗಾವಿ ನಗರದ ಸಮರ್ಥ ನಗರ ಹತ್ತಿರ ನಿಷೇದಿತ ಪನ್ನಿ ಎಂಬ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಆರೋಪಿತ ಸಂಜಯ …

Read More »

ಹಿಟ್ನಿಯಲ್ಲಿ ನಗದು, ಹಳ್ಳೂರಲ್ಲಿ ಚಿನ್ನಾಭರಣ ವಶ

ಹಿಟ್ನಿಯಲ್ಲಿ ನಗದು, ಹಳ್ಳೂರಲ್ಲಿ ಚಿನ್ನಾಭರಣ ವಶ ಯುವ ಭಾರತ ಸುದ್ದಿ ಬೆಳಗಾವಿ : ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 11.49 ಲಕ್ಷ ರೂ. ನಗದು ಹಣವನ್ನು ಪೊಲೀಸರು ಹಾಗೂ ಎಫ್ ಎಸ್ ಟಿ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಹುಕ್ಕೇರಿ ತಾಲೂಕಿನ ಹಿಟ್ನಿ ಕ್ರಾಸ್ ಬಳಿ ನಡೆದಿದೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಹುಕ್ಕೇರಿ ತಾಲೂಕಿನ ಹಿಟ್ನಿ ಕ್ರಾಸ್ ಹತ್ತಿರ ತಪಾಸಣೆ ನಡೆಸುತ್ತಿರುವ ಅಧಿಕಾರಿಗಳು ಬುಧವಾರ ಮತ್ತಷ್ಟು ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. …

Read More »

ನಂದಗಡದಲ್ಲಿ 40 ಲಕ್ಷ ರೂ. ಚಿನ್ನಾಭರಣ ವಶ

ನಂದಗಡದಲ್ಲಿ 40 ಲಕ್ಷ ರೂ. ಚಿನ್ನಾಭರಣ ವಶ ಯುವ ಭಾರತ ಸುದ್ದಿ ಬೆಳಗಾವಿ : ಖಾನಾಪುರ ತಾಲೂಕು ನಂದಗಡ ಚೆಕ್ ಪೋಸ್ಟ್ ನಲ್ಲಿ ಮಂಗಳವಾರ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 40 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಳಿಯಾಳದಿಂದ ಕಕ್ಕೇರಿಗೆ ಕಾರಿನಲ್ಲಿ ಚಿನ್ನಾಭರಣ ಮತ್ತು ಬೆಳ್ಳಿ ಆಭರಣ ಸಾಗಿಸಲಾಗುತ್ತಿತ್ತು. 21.25 ಲಕ್ಷ ರೂ.395ಗ್ರಾಂ ಚಿನ್ನಾಭರಣ, 19 ಲಕ್ಷ ರೂಪಾಯಿ ಮೌಲ್ಯದ 28 ಕೆಜಿ ಬೆಳ್ಳಿ ಆಭರಣ ಮತ್ತು ಕಾರನ್ನು …

Read More »