ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ : ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ; ಮಹಿಳೆಯರಿಗೆ ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಿಸಲು ಕ್ರಮ ಬೆಂಗಳೂರು : ರಾಜ್ಯ ಸರ್ಕಾರದ ‘ಶಕ್ತಿ ಯೋಜನೆ’ಯಡಿ ರಾಜ್ಯದ ಎಲ್ಲ ಮಹಿಳಾ ಪ್ರಯಾಣಿಕರಿಗೆ ನಾಲ್ಕು ಸಾರಿಗೆ ಸಂಸ್ಥೆಗಳಾದ ಕೆಎಸ್ಆರ್ಟಿಸಿ, ಬಿಎಂಟಿಸಿ, ವಾ.ಕ.ರ.ಸಾ.ಸಂಸ್ಥೆ ಹಾಗೂ ಕ.ಕ.ರ.ಸಾ.ನಿಗಮಗಳ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಬಗ್ಗೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ‘ಶಕ್ತಿ ಯೋಜನೆ’ಯಡಿ ರಾಜ್ಯಾದ್ಯಂತ ನಗರ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಎಲ್ಲ ಮಹಿಳೆಯರು (ವಿದ್ಯಾರ್ಥಿನಿಯರು …
Read More »ಮಹಾಭಾರತದ ಶಕುನಿ ಮಾಮಾ ಖ್ಯಾತಿಯ ಗುಫಿ ಪೈಂಟಲ್ ವಿಧಿವಶ
ಮಹಾಭಾರತದ ಶಕುನಿ ಮಾಮಾ ಖ್ಯಾತಿಯ ಗುಫಿ ಪೈಂಟಲ್ ವಿಧಿವಶ ಯುವ ಭಾರತ ಸುದ್ದಿ ಮುಂಬೈ: ಹಿರಿಯ ನಟ ಗುಫಿ ಪೈಂಟಲ್ ಅವರು ಸೋಮವಾರ ಬೆಳಿಗ್ಗೆ 79 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ದೃಢಪಡಿಸಿದೆ. 1980ರ ದಶಕದ ಬಿ.ಆರ್. ಚೋಪ್ರಾ ಅವರ ಮಹಾಭಾರತ ಟಿವಿ ಧಾರಾವಾಹಿಯಲ್ಲಿ ಶಕುನಿ ಮಾಮಾ ಪಾತ್ರದಲ್ಲಿನ ನಟನೆಗೆ ದೇಶಾದ್ಯಂತ ಮನೆಮಾತಾಗಿದ್ದ ಗುಫಿ ಪೈಂಟಲ್ ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದಾಗಿ ಸೋಮವಾರ ಮುಂಬೈನಲ್ಲಿ ನಿಧನರಾದರು. “ದುರದೃಷ್ಟವಶಾತ್, …
Read More »ಮುಂಗಾರು ಆಗಮನಕ್ಕೆ ಕ್ಷಣಗಣನೆ
ಮುಂಗಾರು ಆಗಮನಕ್ಕೆ ಕ್ಷಣಗಣನೆ ಯುವ ಭಾರತ ಸುದ್ದಿ ಮಂಗಳೂರು: ರಾಜ್ಯದಲ್ಲಿ ಮುಂಗಾರು ಆಗಮನಕ್ಕೆ ಕ್ಷಣಗಣನೆ ಶುರುವಾಗಿದ್ದು, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಜೂನ್ 7 ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಮಂಡ್ಯ, ಮೈಸೂರು,ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೋದಕವಿದ ವಾತಾವರಣ …
Read More »ಗಣಿಕೊಪ್ಪದಲ್ಲಿ ಎನ್ನೆಸ್ಸೆಸ್ ಶಿಬಿರ
ಗಣಿಕೊಪ್ಪದಲ್ಲಿ ಎನ್ನೆಸ್ಸೆಸ್ ಶಿಬಿರ ಯುವ ಭಾರತ ಸುದ್ದಿ ಬೆಳಗಾವಿ : ನಗರದ ಕೆ.ಎಲ್.ಇ ಸಂಸ್ಥೆಯ ರಾಜಾ ಲಖಮಗೌಡ ಸ್ವಾಯತ್ತ ವಿಜ್ಞಾನ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ದತ್ತು ಗ್ರಾಮವಾದ ಗಣಿಕೊಪ್ಪ ಗ್ರಾಮದಲ್ಲಿ ದಿನಾಂಕ 02/06/2023 ರಂದು ಸಾಯಂಕಾಲ 4:00ಗಂಟೆಗೆ ಉದ್ಘಾಟಿಸಲಾಯಿತು. ಈ ಶಿಬಿರದ ಮುಖ್ಯ ಅತಿಥಿ ಸ್ಥಾನವನ್ನು ಮರಿಕಟ್ಟಿ ಗ್ರಾಮ ಪಂಚಾಯತ ಮಾಜಿ ಸದಸ್ಯ ಮಹಂತೇಶ ಚಿಕ್ಕಮಠ ಅವರು ವಹಿಸಿದ್ದರು. ಗೌರವಾನ್ವಿತ ಅತಿಥಿಗಳಾಗಿ ಮಡಿವಾಳೇಶ್ವರ ಮಠದ …
Read More »ನಾಲ್ವರು ಐಎಎಸ್ ಅಧಿಕಾರಿಗಳ ವರ್ಗಾವಣೆ
ನಾಲ್ವರು ಐಎಎಸ್ ಅಧಿಕಾರಿಗಳ ವರ್ಗಾವಣೆ ಬೆಂಗಳೂರು: ರಾಜ್ಯ ಸರ್ಕಾರ ನಾಲ್ವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಸಂಬಂಧ ಅಧಿಸೂಚನೆ ಹೊರಡಿಸಿದ್ದು, ಹೊರ್ಟಿಕಲ್ಚರ್ ಮತ್ತು ಸೆರಿಕಲ್ಟರ್ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿದ್ದ ರಾಜೇಂದ್ರಕುಮಾರ ಕಠಾರಿಯ ಅವರನ್ನು ವರ್ಗಾವಣೆ ಮಾಡಿದ್ದು, ಅವರನ್ನು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದೆ. ಐಎಎಸ್ ಅಧಿಕಾರಿ ಪಂಕಜಕುಮಾರ ಪಾಂಡೆ ಅವರನ್ನು ಎಂಎಸ್ಎಂಇ ಮತ್ತು ಮೈನ್ಸ್ ಕಾರ್ಯದರ್ಶಿಯ ಹುದ್ದೆಯಿಂದ ವರ್ಗಾವಣೆ ಮಾಡಿ, ಕೆಪಿಟಿಸಿಎಲ್ ವ್ಯವಸ್ಥಾಪಕ …
Read More »ಸುಳೇಭಾವಿಯಲ್ಲಿ ಸಂಭ್ರಮದ ಶ್ರೀ ಮಹಾರಾಣಿ ದೇವಿ ಜಾತ್ರೆ
ಸುಳೇಭಾವಿಯಲ್ಲಿ ಸಂಭ್ರಮದ ಶ್ರೀ ಮಹಾರಾಣಿ ದೇವಿ ಜಾತ್ರೆ ಬೆಳಗಾವಿ: ತಾಲೂಕಿನ ಸುಳೇಭಾವಿ ಗ್ರಾಮದ ಶ್ರೀ ಮಹಾರಾಣಿ ದೇವಿಯ ಜಾತ್ರಾ ಮಹೋತ್ಸವ ಮಂಗಳವಾರ ಪಲ್ಲಕ್ಕಿ ಉತ್ಸವದೊಂದಿಗೆ ಅತ್ಯಂತ ಸಡಗರ-ಸಂಭ್ರಮದಿಂದ ನೆರವೇರಿತು. ಗ್ರಾಮದ ಶ್ರೀ ಮಹಾರಾಣಿಯ ಪಲ್ಲಕ್ಕಿ ಉತ್ಸವ ಅತ್ಯಂತ ಸಂಭ್ರಮದಿಂದ ನಡೆಯಿತು. ಬೆಳಗ್ಗೆ 6 ಗಂಟೆಗೆ ಶ್ರೀ ಮಹಾರಾಣಿ ದೇವಿಗೆ ಅಭಿಷೇಕ, ವಿಶೇಷ ಅಲಂಕಾರ, ಆರತಿ ಬೆಳಗಿ, ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಗ್ರಾಮಸ್ಥರು ಸುಳೇಭಾವಿ ಗ್ರಾಮದ ಲಕ್ಷ್ಮೀ ಗಲ್ಲಿಯ ಶ್ರೀ …
Read More »ಬೆಳಗಾವಿಯಲ್ಲಿ ತರಬೇತಿ ವಿಮಾನ ಭೂಸ್ಪರ್ಶ
ಬೆಳಗಾವಿಯಲ್ಲಿ ತರಬೇತಿ ವಿಮಾನ ಭೂಸ್ಪರ್ಶ ಬೆಳಗಾವಿ : ಬೆಳಗಾವಿ ಬಳಿಯ ಸಾಂಬ್ರಾ ಗ್ರಾಮದ ಹತ್ತಿರ ಇರುವ ವಿಮಾನ ನಿಲ್ದಾಣದಿಂದ ತರಬೇತಿ ನಡೆಸುತ್ತಿದ್ದ ಪುಟ್ಟ ವಿಮಾನ ಹೊನ್ನಿಹಾಳ ಬಳಿಯ ಮೋದಗಾ-ಬಾಗೇವಾಡಿ ರಸ್ತೆ ಮಧ್ಯೆ ತುರ್ತು ಭೂಸ್ಪರ್ಶವಾಗಿದೆ. ಘಟನೆಯಲ್ಲಿ ತರಬೇತುದಾರನ ಕಾಲಿಗೆ ಗಾಯವಾಗಿದೆ. ಇದು ಕೆಲ ಹೊತ್ತು ಆತಂಕಕ್ಕೆ ಕಾರಣವಾಯಿತು.
Read More »ಕುಷ್ಟಗಿ ಬಳಿ ಅಪಘಾತ : ಸಿಎಂ ಪರಿಹಾರ ಘೋಷಣೆ
ಕುಷ್ಟಗಿ ಬಳಿ ಅಪಘಾತ : ಸಿಎಂ ಪರಿಹಾರ ಘೋಷಣೆ ಬೆಂಗಳೂರು: ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ವ್ಯಾಪ್ತಿಯಲ್ಲಿನ ರಾಷ್ಟ್ರೀಯ ಹೆದ್ದಾರಿಯ ಕಲಕೇರಿ ಬಳಿ ಭಾನುವಾರ ಸಂಜೆ ಲಾರಿ ಮತ್ತು ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ತಲಾ ₹2ಲಕ್ಷ ಪರಿಹಾರ ಘೋಷಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಕೊಪ್ಪಳ ಜಿಲ್ಲೆಯ ಕುಷ್ಟಗಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಎಳೆಯ ಮಕ್ಕಳು ಸೇರಿದಂತೆ 6 …
Read More »ಸಚಿವ ಖಾತೆ ಹಂಚಿಕೆ
ಸಚಿವ ಖಾತೆ ಹಂಚಿಕೆ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದ ಸಚಿವರಿಗೆ ಭಾನುವಾರ ರಾತ್ರಿ ಖಾತೆ ಹಂಚಿಕೆ ಮಾಡಲಾಗಿದೆ. ಸಾರಿಗೆ ಖಾತೆ ಹಂಚಿಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ರಾಮಲಿಂಗಾರೆಡ್ಡಿ ಅವರಿಗೆ ಸಾರಿಗೆ ಖಾತೆಯ ಜೊತೆಗೆ ಹೆಚ್ಚುವರಿಯಾಗಿ ಮುಜರಾಯಿ ಖಾತೆಯನ್ನೂ ನೀಡಲಾಗಿದೆ. ಯಾರಿಗೆ, ಯಾವ ಖಾತೆ? ಸಿದ್ದರಾಮಯ್ಯ (ಮುಖ್ಯಮಂತ್ರಿ); ಹಣಕಾಸು, ಆಡಳಿತ ಸುಧಾರಣೆ, ಗುಪ್ತಚರ, ವಾರ್ತಾ ಇಲಾಖೆ ಮತ್ತು ಹಂಚಿಕೆಯಾಗದೆ ಉಳಿಿರುವ ಖಾತೆಗಳು ಡಿ.ಕೆ. ಶಿವಕುಮಾರ್ (ಉಪ ಮುಖ್ಯಮಂತ್ರಿ); ಜಲಸಂಪನ್ಮೂಲ, …
Read More »ಸಂಪುಟದಲ್ಲಿ ಹತ್ತಿರದ ಸಂಬಂಧಿಗಳು
ಸಂಪುಟದಲ್ಲಿ ಹತ್ತಿರದ ಸಂಬಂಧಿಗಳು ಬೆಂಗಳೂರು : ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಹತ್ತಿರದ ಸಂಬಂಧಿಗಳು ಸ್ಥಾನ ಪಡೆದುಕೊಂಡಿದ್ದಾರೆ. ಚಿಂತಾಮಣಿ ಕ್ಷೇತ್ರದಲ್ಲಿ ಮೂರನೇ ಸಲ ಗೆದ್ದಿರುವ ಎಂ.ಪಿ.ಸುಧಾಕರ ಹಾಗೂ ಬ್ಯಾಟರಾಯನಪುರ ಕ್ಷೇತ್ರ ಪ್ರತಿನಿಧಿಸಿರುವ ಕೃಷ್ಣ ಬೈರೇಗೌಡ ಸಂಬಂಧಿಗಳು. ಕೃಷ್ಣ ಬೈರೇಗೌಡ ಅವರ ತಂದೆ ಮಾಜಿ ಸಚಿವ ಸಿ.ಬೈರೇಗೌಡ ಅವರ ಅಕ್ಕ ಶಾಂತಮ್ಮ ಅವರು ಸುಧಾಕರ್ ಅವರ ತಾಯಿ. ಹೀಗಾಗಿ ಇಬ್ಬರು ಹತ್ತಿರದ ಸಂಬಂಧಿಗಳಾಗಿದ್ದಾರೆ.
Read More »