ಕಂದಾಯ ಇಲಾಖೆಯಲ್ಲಿ ಕಾವೇರಿ ತಂತ್ರಾಂಶ 2.0 ಜಾರಿ, ಇನ್ಮುಂದೆ 10 ನಿಮಿಷದಲ್ಲಿ ಆಸ್ತಿ ನೋಂದಣಿ : ಸಚಿವ ಆರ್ ಅಶೋಕ ಕಾವೇರಿ ತಂತ್ರಜ್ಞಾನ 2.0 ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಲಿದೆ. ಇದನ್ನು ಬೆಳಗಾವಿ ದಕ್ಷಿಣ, ಚಿಂಚೋಳಿಯಲ್ಲಿ ಪ್ರಾಯೋಗಿಕವಾಗಿ ಮಾಡಲಾಗಿದೆ. ಯುವ ಭಾರತ ಸುದ್ದಿ ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಕಾವೇರಿ ತಂತ್ರಾಂಶ 2.0 ಜಾರಿಗೆ ತಂದಿದ್ದು, ಹತ್ತು ನಿಮಿಷಗಳಲ್ಲಿ ಆಸ್ತಿ ನೋಂದಣಿ ಕಾರ್ಯ ಮುಗಿಯಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ …
Read More »ಬಿಜೆಪಿ ಚುನಾವಣಾ ಪ್ರಚಾರ ಸಮಿತಿಗೆ ಕೇಳಿ ಬಂತು ಅಚ್ಚರಿ ಹೆಸರು
ಬಿಜೆಪಿ ಚುನಾವಣಾ ಪ್ರಚಾರ ಸಮಿತಿಗೆ ಕೇಳಿ ಬಂತು ಅಚ್ಚರಿ ಹೆಸರು ಯುವ ಭಾರತ ಸುದ್ದಿ ಬೆಂಗಳೂರು : ಬಿಜೆಪಿ ಚುನಾವಣಾ ಪ್ರಚಾರ ಸಮಿತಿಗೆ ಅಧ್ಯಕ್ಷರನ್ನು ನೇಮಕ ಮಾಡಲು ನಿರ್ಧರಿಸಿದ್ದು, ಈ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಅವರ ಹೆಸರು ಮುಂಚೂಣಿಯಲ್ಲಿ ಬಂದಿದೆ. ಇದೀಗ ಯಡಿಯೂರಪ್ಪ ಅವರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಕಾಂಗ್ರೆಸ್ ಈಗಾಗಲೇ ಲಿಂಗಾಯತ ಸಮುದಾಯದ ಎಂ.ಬಿ. ಪಾಟೀಲ ಅವರನ್ನು ತನ್ನ …
Read More »ತ್ರಿಪುರಾ, ನಾಗಾಲ್ಯಾಂಡ್ ನಲ್ಲಿ ಬಿಜೆಪಿ-ಮಿತ್ರಪಕ್ಷಕ್ಕೆ ಬಹುಮತ, ಮೇಘಾಲಯದಲ್ಲಿ ಅತಂತ್ರ !
ತ್ರಿಪುರಾ, ನಾಗಾಲ್ಯಾಂಡ್ ನಲ್ಲಿ ಬಿಜೆಪಿ-ಮಿತ್ರಪಕ್ಷಕ್ಕೆ ಬಹುಮತ, ಮೇಘಾಲಯದಲ್ಲಿ ಅತಂತ್ರ ! ಯುವ ಭಾರತ ಸುದ್ದಿ ನವದೆಹಲಿ: ಇಂದು ಗುರುವಾರ ಈಶಾನ್ಯ ಭಾರತದ ಮೂರು ರಾಜ್ಯಗಳ ಚುನಾವಣೆಯ ಮತ ಎಣಿಕೆ ನಡೆದಿದ್ದು, ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಬಹುಮತದತ್ತ ಮುನ್ನಡೆಯುತ್ತಿದ್ದರೆ ಮೇಘಾಲಯವು ಅತಂತ್ರ ವಿಧಾನಸಭೆ ಕಡೆಗೆ ಹೋಗುತ್ತಿದೆ. ಮೇಘಾಲಯದಲ್ಲಿ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರ ಎನ್‌ಪಿಪಿ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರಳ ಬಹುಮತಕ್ಕಿಂತ ಹಿಂದೆ …
Read More »ನುಡಿದಂತೆ ನಡೆಯುವ ಬಿಜೆಪಿಗೆ ಮತ್ತೆ ಆಡಳಿತ ಅವಕಾಶ ಕೊಡಿ: ರಾಜನಾಥ್ ಸಿಂಗ್
ನುಡಿದಂತೆ ನಡೆಯುವ ಬಿಜೆಪಿಗೆ ಮತ್ತೆ ಆಡಳಿತ ಅವಕಾಶ ಕೊಡಿ: ರಾಜನಾಥ್ ಸಿಂಗ್ ಯುವ ಭಾರತ ಸುದ್ದಿ ಬೆಂಗಳೂರು : ಬಿಜೆಪಿಯ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ನಾಯಕ ಯಡಿಯೂರಪ್ಪ ಅವರ ಆಶಯದಂತೆ ಬಿಜೆಪಿಗೆ ರಾಜ್ಯದಲ್ಲಿ ಮೂರನೇ ಎರಡು ಬಹುಮತ ಕೊಡಿ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮನವಿ ಮಾಡಿದರು. ಬೆಳಗಾವಿ ಜಿಲ್ಲೆಯ ನಂದಗಢದಲ್ಲಿ ಇಂದು ಡೊಳ್ಳು ಬಾರಿಸಿ ಬಿಜೆಪಿ ಎರಡನೇ ವಿಜಯ ಸಂಕಲ್ಪ ರಥ ಯಾತ್ರೆಗೆ …
Read More »500 ರೂ. ಕೊಟ್ಟು ಪ್ರಚಾರಕ್ಕೆ ಕರೆತನ್ನಿಎಂದು ಸಿದ್ಧರಾಮಯ್ಯ ಹೇಳಿರುವ ವೀಡಿಯೊ ಟ್ವೀಟ್ ಮಾಡಿದ ಬಿಜೆಪಿ
500 ರೂ. ಕೊಟ್ಟು ಪ್ರಚಾರಕ್ಕೆ ಕರೆತನ್ನಿಎಂದು ಸಿದ್ಧರಾಮಯ್ಯ ಹೇಳಿರುವ ವೀಡಿಯೊ ಟ್ವೀಟ್ ಮಾಡಿದ ಬಿಜೆಪಿ ಯುವ ಭಾರತ ಸುದ್ದಿ ಬೆಂಗಳೂರು / ಬೆಳಗಾವಿ : ರಾಜ್ಯ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯ ಚುರುಕುಗೊಂಡಿದೆ. ಮತದಾರರನ್ನು ಸೆಳೆಯಲು ಬೇರೆಬೇರೆ ಹೆಸರನ್ನಿಟ್ಟು ವಿವಿಧ ರಾಜಕೀಯ ಪಕ್ಷಗಳು ಪ್ರಚಾರ ನಡೆಸುತ್ತಿವೆ, ಪಕ್ಷಾಂತರಗಳು ಜೋರಾಗಿ ನಡೆಯುತ್ತಿದೆ. ಈ ಮಧ್ಯೆ ಪ್ರತಿಯೊಬ್ಬರಿಗೂ 500 ರೂ. ಕೊಟ್ಟು ಪ್ರಚಾರಕ್ಕೆ ಕರೆದುಕೊಂಡು ಬನ್ನಿ ಎಂದು …
Read More »ಹಿಂಡಲಗಾ ನಿಲ್ ಇಂಡಿಯನ್ ಬಾಯ್ಸ್ ಗೆ ಕಿರಣ್ ಜಾಧವ್ ಕಪ್ ಗೌರವ
ಹಿಂಡಲಗಾ ನಿಲ್ ಇಂಡಿಯನ್ ಬಾಯ್ಸ್ ಗೆ ಕಿರಣ್ ಜಾಧವ್ ಕಪ್ ಗೌರವ ಯುವ ಭಾರತ ಸುದ್ದಿ ಯಳ್ಳೂರು: ಶ್ರೀ ಚಂಗೇಶ್ವರಿ ಸ್ಪೋರ್ಟ್ಸ್ ಯಳ್ಳೂರು ಶ್ರೀ ಚಂಗೇಶ್ವರಿ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಗ್ರಾಮೀಣ ಕ್ರಿಕೆಟ್ ಪಂದ್ಯಾವಳಿಯಲ್ಲಿ ನೀಲ್ ಇಂಡಿಯನ್ ಬಾಯ್ಸ್ ಹಿಂಡಲಗಾ ತಂಡವು ಏಕದಂತ್ ಸ್ಪೋರ್ಟ್ಸ್ ಕಣಬರ್ಗಿ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ ಕಿರಣ ಜಾಧವ ಕಪ್ 2023 ಕ್ರಿಕೆಟ್ ಪಂದ್ಯಾವಳಿಯನ್ನು ಗೆದ್ದುಕೊಂಡಿತು. ಈ ಸ್ಪರ್ಧೆಯಲ್ಲಿ ಒಟ್ಟು 38 ತಂಡಗಳು ಭಾಗವಹಿಸಿದ್ದವು. …
Read More »ಆಂಧ್ರಪ್ರದೇಶ : ಧರ್ಮ ರಕ್ಷಣೆಗೆ ದೇವಾಲಯ ನಿರ್ಮಾಣಕ್ಕೆ ಮುಂದಾದ ಸರ್ಕಾರ
ಆಂಧ್ರಪ್ರದೇಶ : ಧರ್ಮ ರಕ್ಷಣೆಗೆ ದೇವಾಲಯ ನಿರ್ಮಾಣಕ್ಕೆ ಮುಂದಾದ ಸರ್ಕಾರ ಯುವ ಭಾರತ ಸುದ್ದಿ ಅಮರಾವತಿ: ಹಿಂದೂ ಧರ್ಮದ ರಕ್ಷಣೆಗಾಗಿ ಆಂಧ್ರಪ್ರದೇಶದಲ್ಲಿ ಹಳ್ಳಿಗೊಂದು ದೇವಾಲಯ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಸುಮಾರು ಮೂರು ಸಾವಿರ ದೇಗುಲಗಳನ್ನು ನಿರ್ಮಿಸುವ ಬಹುದೊಡ್ಡ ಯೋಜನೆ ಹಾಕಿಕೊಂಡಿದೆ. ಹಿಂದೂಗಳ ಧಾರ್ಮಿಕ ನಂಬಿಕೆಗಳ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಮುಖ್ಯಮಂತ್ರಿ ವೈ.ಎಸ್. ಜಗನ್‌ಮೋಹನ ರೆಡ್ಡಿ ಅವರ ನಿರ್ದೇಶನದಂತೆ ಈ ಉಪಕ್ರಮವನ್ನು ರಾಜ್ಯಸರ್ಕಾರ ಕೈಗೊಂಡಿದೆ ಎಂದು ಉಪಮುಖ್ಯಮಂತ್ರಿ ಕೊಟ್ಟು ಸತ್ಯನಾರಾಯಣ …
Read More »ದೇಸೂರಲ್ಲಿ ಕಾಡುಕೋಣಗಳು !
ದೇಸೂರಲ್ಲಿ ಕಾಡುಕೋಣಗಳು ! ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿ ಸಮೀಪದ ದೇಸೂರು ಗ್ರಾಮದಲ್ಲಿ ಕಾಡುಕೋಣಗಳು ಕಂಡುಬಂದಿವೆ. ಕಾಡಿನಿಂದ ಅವೃತವಾಗಿರುವ ಈ ಪ್ರದೇಶದಲ್ಲಿ ಕಾಡುಕೋಣಗಳು ಆಕಸ್ಮಿಕವಾಗಿ ಗ್ರಾಮ ಪ್ರವೇಶಿಸಿವೆ. ನಂತರ ಗ್ರಾಮಸ್ಥರು ಬೊಬ್ಬೆ ಹೊಡೆದ ನಂತರ ಅವು ಅಲ್ಲಿಂದ ತೆರಳಿವೆ.
Read More »ವೇತನ ಹೆಚ್ಚಳ ಆದೇಶ ಹೊರಡಿಸಿದ ಸರಕಾರ !
ವೇತನ ಹೆಚ್ಚಳ ಆದೇಶ ಹೊರಡಿಸಿದ ಸರಕಾರ ! ಯುವ ಭಾರತ ಸುದ್ದಿ ಬೆಂಗಳೂರು : ವೇತನ ಸಂಬಂಧ ಮುಷ್ಕರ ನಡೆಸುತ್ತಿರುವ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತ್ರತ್ವದ ರಾಜ್ಯ ಸರಕಾರ ಇದೀಗ ಮೂಲವೇತನದಲ್ಲಿ ಶೇಕಡಾ 17ರಷ್ಟು ಏರಿಕೆ ಮಾಡಿ ಆದೇಶ ಹೊರಡಿಸಿದೆ. ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ ಈ ಆದೇಶ ಜಾರಿಯಲ್ಲಿ ಜಾರಿಯಾಗಲಿದೆ. ಮುಷ್ಕರ ನಿರತ ನೌಕರರು ತಕ್ಷಣ ಪ್ರತಿಭಟನೆ ವಾಪಸ್ ಪಡೆಯುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ. …
Read More »ಶಿವಮೊಗ್ಗಕ್ಕೆ ಬಂತು ಈ ವಿವಿ
ಶಿವಮೊಗ್ಗಕ್ಕೆ ಬಂತು ಈ ವಿವಿ ಯುವ ಭಾರತ ಸುದ್ದಿ ಶಿವಮೊಗ್ಗ : ರಾಷ್ಟ್ರೀಯ ಹಾಗೂ ಆಂತರಿಕ ಭದ್ರತೆಗೆ ಸಂಬಂಧಿಸಿದ ಶಿಕ್ಷಣ ನೀಡುವ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಶಿವಮೊಗ್ಗಕ್ಕೆ ಮಂಜೂರಾಗಿದೆ. ಈ ವರ್ಷದಿಂದಲೇ ತರಗತಿಗಳು ಆರಂಭವಾಗಲಿವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗುಜರಾತಿನ ಅಹಮದಾಬಾದ್‌ನಲ್ಲಿ ಏಕೈಕ ರಕ್ಷಾ ವಿವಿ ಇದೆ. ಶಿವಮೊಗ್ಗದಲ್ಲಿ ಆರಂಭವಾಗುತ್ತಿರುವುದು ದೇಶದ 2ನೇ ವಿವಿ. ಈ ಸಂಸ್ಥೆಗಾಗಿ ಶಿವಮೊಗ್ಗದ ನವುಲೆಯಲ್ಲಿ 8 ಎಕರೆ …
Read More »