Breaking News

ಇತ್ತೀಚಿನ ಸುದ್ದಿ

ಫುಟ್ಬಾಲ್ ದಿಗ್ಗಜ ಪೀಲೆ ನಿಧನ

ಫುಟ್ಬಾಲ್ ದಿಗ್ಗಜ ಪೀಲೆ ನಿಧನ ಯುವ ಭಾರತ ಸುದ್ದಿ ರಿಯೊ ಡಿ ಜನೈರೊ, ಬ್ರೆಜಿಲ್: ಮೂರು ವಿಶ್ವಕಪ್ ಟೂರ್ನಿಗಳಲ್ಲಿ ಬ್ರೆಜಿಲ್ ತಂಡವನ್ನು ಚಾಂಪಿಯನ್ ಆಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪೆಲೆ (82) ಗುರುವಾರ ಕ್ಯಾನ್ಸರ್‌ನಿಂದಾಗಿ ನಿಧನರಾದರು. ಬ್ರೆಜಿಲ್ ತಂಡವು ಮೂರು ಬಾರಿ ವಿಶ್ವಕಪ್ (1958, 1962 ಮತ್ತು 1970) ಜಯಿಸಲು ಪೆಲೆ ಅವರ ಆಟವು ಪ್ರಮುಖವಾಗಿತ್ತು. ಬ್ರೆಜಿಲ್ ಪರವಾಗಿ ಅತಿ ಹೆಚ್ಚು ಗೋಲು ಗಳಿಸಿದ (77) ಅವರ ದಾಖಲೆಯನ್ನು ಈಚೆಗೆ …

Read More »

ಪ್ರಧಾನಿ ಮೋದಿ ತಾಯಿ ನಿಧನ

ಪ್ರಧಾನಿ ಮೋದಿ ತಾಯಿ ನಿಧನ ಯುವ ಭಾರತ ಸುದ್ದಿ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್‌ (100) ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ. ಮೋದಿ ಅವರೇ ಟ್ವಿಟರ್‌ನಲ್ಲಿ ಈ ಮಾಹಿತಿಯನ್ನು ತಿಳಿಸಿದ್ದಾರೆ. ಅಮ್ಮನಲ್ಲಿ ನಾನು ತ್ರಿಮೂರ್ತಿಗಳನ್ನು ಕಂಡಿದ್ದೇನೆ. ಅವರ ಜೀವನವು ತಪಸ್ವಿಯ ಪ್ರಯಾಣವಾಗಿತ್ತು. ನಿಷ್ಕಾಮ ಕರ್ಮಯೋಗಿಯ ಜೀವನ ಮತ್ತು ಮೌಲ್ಯಗಳಿಗೆ ಬದ್ಧವಾದ ಬದುಕಿನ ಸಂಕೇತವಾಗಿದ್ದರು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಹೀರಾಬೆನ್‌ ಅವರನ್ನು ಅಹಮದಾಬಾದ್‌ನ ಯು.ಎನ್.ಮೆಹ್ತಾ ಇನ್‌ಸ್ಟಿಟ್ಯೂಟ್‌ …

Read More »

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಘೋಷಣೆ !

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಘೋಷಣೆ ! ಯುವ ಭಾರತ ಸುದ್ದಿ ಬೆಳಗಾವಿ : ರಾಜ್ಯ ಸರ್ಕಾರ ಕೊನೆಗೂ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ಮಹತ್ವದ ಘೋಷಣೆಯನ್ನು ಮಾಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತ್ರತ್ವದ ಸರಕಾರ ಗುರುವಾರ ಸಂಜೆ ಸುವರ್ಣ ವಿಧಾನಸೌಧದಲ್ಲಿ ಈ ಕುರಿತ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಪಂಚಮಸಾಲಿ ಸಮಾಜಕ್ಕೆ  ಮೀಸಲಾತಿ ನೀಡಲು ಸರಕಾರ ನಿರ್ಧರಿಸಿದೆ. 3B to 2Dಗೆ ಪಂಚಮಸಾಲಿಗಳು 3A to 2Cಗೆ ವಕ್ಕಲಿಗರು 2A& 2B …

Read More »

ಮುಗಿದ ಅಧಿವೇಶನ : ಗಡಿ ಹೊತ್ತಿ ಉರಿದರೂ ಮೌನಿಯಾದ ಕರ್ನಾಟಕ !

ಮುಗಿದ ಅಧಿವೇಶನ : ಗಡಿ ಹೊತ್ತಿ ಉರಿದರೂ ಮೌನಿಯಾದ ಕರ್ನಾಟಕ ! ಯುವ ಭಾರತ ಸುದ್ದಿ ಬೆಳಗಾವಿ : ಸುದೀರ್ಘ ಕಾಲದಿಂದ ಬಗೆಹರಿಯದೆ ಇರುವ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಇದೀಗ ಸುಪ್ರೀಂ ಕೋರ್ಟ್ ವಿಚಾರಣೆಯ ಹಂತದಲ್ಲಿದೆ. ಆದರೂ ಕಾಲ ಕಾಲಕ್ಕೆ ತಗಾದೆ ತೆಗೆಯುತ್ತ ಬಂದಿರುವ ಮಹಾರಾಷ್ಟ್ರ ಸುಮ್ಮನೆ ಕುಳಿತಿಲ್ಲ. ದಿನಕ್ಕೊಂದು ಕ್ಯಾತೆ ತೆಗೆಯುತ್ತಲೇ ಬರುತ್ತಿದೆ. ಈ ನಡುವೆ ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳ ಚಳಿಗಾಲದ ವಿಶೇಷ ಅಧಿವೇಶನ ಬೆಳಗಾವಿಯಲ್ಲಿ …

Read More »

ಕರ್ನಾಟಕದ ಅತ್ಯಂತ ಅಗತ್ಯದ ಕಳಸಾ-ಬಂಡೂರಿ ವಿಸ್ತೃತ ಯೋಜನೆಗೆ ಅನುಮತಿ ನೀಡಿದ ಕೇಂದ್ರ ಸರ್ಕಾರ- ಪ್ರಹ್ಲಾದ ಜೋಶಿ

ಕರ್ನಾಟಕದ ಅತ್ಯಂತ ಅಗತ್ಯದ ಕಳಸಾ-ಬಂಡೂರಿ ವಿಸ್ತೃತ ಯೋಜನೆಗೆ ಅನುಮತಿ ನೀಡಿದ ಕೇಂದ್ರ ಸರ್ಕಾರ- ಪ್ರಹ್ಲಾದ ಜೋಶಿ   ಯುವ ಭಾರತ ಸುದ್ದಿ ಹುಬ್ಬಳ್ಳಿ:  ಕೇಂದ್ರ ಜಲ ಆಯೋಗ ಇಂದು ಕರ್ನಾಟಕದ ಕಳಸಾ -ಬಂಡೂರಿ ವಿಸ್ತೃತ ಯೋಜನಾ ವರದಿಗೆ ಅನುಮತಿ ನೀಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟರಿನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಕರ್ನಾಟಕಕ್ಕೆ ಅತ್ಯಂತ ಅವಶ್ಯಕವಾಗಿದ್ದ ಈ ಯೋಜನೆಗೆ ಅನುಮೋದನೆ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ …

Read More »

ಮಹಾ ಕಿರಿಕಿರಿ : ಗಡಿ ವಿವಾದದ ನಂತರ ಈಗ ಆಲಮಟ್ಟಿ ಜಲಾಶಯದ ಎತ್ತರಕ್ಕೆ ಮಹಾರಾಷ್ಟ್ರ ತಕರಾರು?

ಮಹಾ ಕಿರಿಕಿರಿ ; ಗಡಿ ವಿವಾದದ ನಂತರ ಈಗ ಆಲಮಟ್ಟಿ ಜಲಾಶಯದ ಎತ್ತರಕ್ಕೆ ಮಹಾರಾಷ್ಟ್ರ ತಕರಾರು?   ಯುವ ಭಾರತ ಸುದ್ದಿ ನಾಗ್ಪುರ :  ಕರ್ನಾಟಕದ ಜೊತೆಗೆ ಗಡಿ ಕ್ಯಾತೆ ತೆಗೆದಿರುವ ಮಹಾರಾಷ್ಟ್ರ ಸರ್ಕಾರ, ಈಗ ಕೃಷ್ಣಾ ನದಿಗೆ ಕಟ್ಟಲಾಗಿರುವ ಆಲಮಟ್ಟಿ ಆಣೆಕಟ್ಟ ವಿಷಯವನ್ನೂ ಸುಪ್ರೀಂಕೋರ್ಟ್‌ಗೆ ಕೊಂಡೊಯ್ಯುವ ಬೆದರಿಕೆ ಹಾಕಿದೆ. ಈ ಕುರಿತು ಬುಧವಾರ ವಿಧಾನಸಭೆಯಲ್ಲಿ ಮಾತನಾಡಿದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ಮಹಾರಾಷ್ಟ್ರವು ಪ್ರವಾಹದ ಪರಿಣಾಮದ ಕುರಿತು ನಡೆಸಲಾಗುತ್ತಿರುವ …

Read More »

ಮುಂಬೈ ಮಹಾರಾಷ್ಟ್ರಕ್ಕೆ ಸೇರಿದ್ದು, ಯಾರ ತಂದೆಯದ್ದಲ್ಲ : ಕರ್ನಾಟಕ ನಾಯಕರ ಹೇಳಿಕೆಗೆ ಫಡ್ನವೀಸ್ ಗರಂ

ಮುಂಬೈ ಮಹಾರಾಷ್ಟ್ರಕ್ಕೆ ಸೇರಿದ್ದು, ಯಾರ ತಂದೆಯದ್ದಲ್ಲ : ಕರ್ನಾಟಕ ನಾಯಕರ ಹೇಳಿಕೆಗೆ ಫಡ್ನವೀಸ್ ಗರಂ ಯುವ ಭಾರತ ಸುದ್ದಿ ನಾಗಪುರ : ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂದು ಮಹಾರಾಷ್ಟ್ರ ನಾಯಕರು ಆಗ್ರಹಿಸಿದ್ದರು. ಇದಕ್ಕೆ ಕರ್ನಾಟಕದ ರಾಜಕೀಯ ನಾಯಕರು ತಿರುಗೇಟು ನೀಡಿ ಮೊದಲು ಮುಂಬೈಯನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂದು ಹೇಳಿದ್ದರು. ಕರ್ನಾಟಕದ ನಾಯಕರ ಹೇಳಿಕೆಗೆ ಇದೀಗ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಿಡಿಮಿಡಿಕೊಂಡಿದ್ದಾರೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ …

Read More »

ದೇವರ ಹಿಪ್ಪರಗಿ : ಬೇಡಿಕೆ ಈಡೇರಿಕೆಗೆ ಅಂಗನವಾಡಿ ಕಾರ್ಯಕರ್ತೆರಿಂದ ಮನವಿ

ದೇವರ ಹಿಪ್ಪರಗಿ : ಬೇಡಿಕೆ ಈಡೇರಿಕೆಗೆ ಅಂಗನವಾಡಿ ಕಾರ್ಯಕರ್ತೆರಿಂದ ಮನವಿ ಯುವ ಭಾರತ ಸುದ್ದಿ ದೇವರ ಹಿಪ್ಪರಗಿ:  ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು ಹಾಗೂ ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ವತಿಯಿಂದ ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಸಿ ಎ ಗುಡದಿನ್ನಿ ಅವರ ಮೂಲಕ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು. ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ …

Read More »

ಕರ್ನಾಟಕದ ಪ್ರದೇಶದ ಮೇಲೆ ಮಹಾ ಕಣ್ಣು : ಕೊನೆಗೂ ಗಡಿ ಠರಾವ್ ಅಂಗೀಕರಿಸಿದ ಮಹಾರಾಷ್ಟ್ರ

ಕರ್ನಾಟಕದ ಪ್ರದೇಶದ ಮೇಲೆ ಮಹಾ ಕಣ್ಣು : ಕೊನೆಗೂ ಗಡಿ ಠರಾವ್ ಅಂಗೀಕರಿಸಿದ ಮಹಾರಾಷ್ಟ್ರ ಯುವ ಭಾರತ ಸುದ್ದಿ ನಾಗಪುರ : ಬೆಳಗಾವಿ,ಕಾರವಾರ,ನಿಪ್ಪಾಣಿ, ಬೀದರ,ಭಾಲ್ಕಿ ಸಹಿತ ಕರ್ನಾಟಕದ 865 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು”ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸುವ ಸರ್ವಾನುಮತದ ನಿರ್ಣಯವನ್ನು ಇಂದು ಮಂಗಳವಾರ ಮಧ್ಯಾನ್ಹ ಮಹಾರಾಷ್ಟ್ರದ ನಾಗ್ಪೂರದಲ್ಲಿ ನಡೆದಿರುವ ವಿಧಾನಸಭೆ ಅಧಿವೇಶನದಲ್ಲಿ ಅಂಗೀಕರಿಸಲಾಯಿತು. ಅಧಿವೇಶನದಲ್ಲಿ ಗಡಿವಿವಾದ ಕುರುತು ವ್ಯಾಪಕ ಚರ್ಚೆ ನಡೆಯಿತು. ಮಹತ್ವದ ಅಂಶಗಳು ಇಲ್ಲಿವೆ; 1) ಚರ್ಚೆಗೆ ಉತ್ತರಿಸಿದ …

Read More »

ಶ್ರೀ ಅಯ್ಯಪ್ಪ ಸ್ವಾಮಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಗುರುಸ್ವಾಮಿಗಳು, ಮಾಲಾಧಾರಿಗಳು

ಶ್ರೀ ಅಯ್ಯಪ್ಪ ಸ್ವಾಮಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಗುರುಸ್ವಾಮಿಗಳು, ಮಾಲಾಧಾರಿಗಳು ಯುವ ಭಾರತ ಸುದ್ದಿ ಚನ್ನಮ್ಮನ ಕಿತ್ತೂರು : ಶ್ರೀ ಅಯ್ಯಪ್ಪ ಸ್ವಾಮಿಯ ಮಂಡಲ ವ್ರತ ಮಂಗಳವಾರ ಸಂಪೂರ್ಣಗೊಂಡಿರುವದರಿಂದ ಇಲ್ಲಿಯ ಮಾಲಾಧಾರಿಗಳು ಶ್ರೀ ಅಯ್ಯಪ್ಪ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಟ್ಟಣದಲ್ಲಿ ಅದ್ದೂರಿಯಿಂದ ಮೆರವಣಿಗೆ ನಡೆಸಿದರು. ಅರ್ಚಕರಾದ ಶರಣ ಸ್ವಾಮೀ, ಗುರುಸ್ವಾಮೀಗಳಾದ ಮಲ್ಲಿಕಾರ್ಜುನ ಹಣಜಿ ಹಾಗೂ ಅಶೋಕ ಲಗಮಾಪೂರ, ರೆಡ್ಡಿ ಸ್ವಾಮೀಗಳ ನೇತೃತ್ವದಲ್ಲಿ ನಡೆದ ಮೆರವಣಿಗೆಯೂ ನೋಡುಗರರನ್ನು ಭಕ್ತಿ ಇಮ್ಮಡಿಗೊಳಿಸಿತು. ವಿವಿಧ ವಾಧ್ಯ …

Read More »