ಕೆಎಲ್ ಇ ಡೀಮ್ಡ್ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ಡಾ.ನಿತಿನ್ ಗಂಗನೆ ಅಧಿಕಾರ ಸ್ವೀಕಾರ ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿಯ ಪ್ರತಿಷ್ಠಿತ ಕೆಎಲ್‌ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿಯಾಗಿ ಡಾ. ನಿತಿನ್ ಗಂಗನೆ ಅಧಿಕಾರ ವಹಿಸಿಕೊಂಡರು. ಡಾ. ನಿತಿನ್ ಗಂಗನೆ, MD, DNB, PGDHHM, PhD, FUICC, FICP, FAMS ಅವರು KLE ಅಕಾಡೆಮಿ ಆಫ್ ಹೈಯರ್ ಎಜುಕೇಶನ್ & ರಿಸರ್ಚ್, (KAHER) ಡೀಮ್ಡ್-ಟು-ಬಿ-ಯೂನಿವರ್ಸಿಟಿ, ಬೆಳಗಾವಿ ಇದರ ಕುಲಪತಿಯಾಗಿ 16ನೇ …
Read More »ಸುವರ್ಣ ವಿಧಾನಸೌಧ ಆವರಣದಲ್ಲಿ ಸಾವಿರಾರು ಜನರಿಂದ “ಯೋಗ”ಥಾನ್ : ಗಿನ್ನಿಸ್ ದಾಖಲೆ ನಿರ್ಮಾಣದ ಗುರಿ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ
ಸುವರ್ಣ ವಿಧಾನಸೌಧ ಆವರಣದಲ್ಲಿ ಸಾವಿರಾರು ಜನರಿಂದ “ಯೋಗ”ಥಾನ್ :ಗಿನ್ನಿಸ್ ದಾಖಲೆ ನಿರ್ಮಾಣದ ಗುರಿ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಯುವ ಭಾರತ ಸುದ್ದಿ ಬೆಳಗಾವಿ :ಸೂರ್ಯದೇವನು ಪಥ ಬದಲಾಯಿಸಿದ ಸಂಕ್ರಮಣದ ಶುಭ ದಿನದಂದು ರಾಜ್ಯವನ್ನು ದೇಶದ ಮೊದಲ “ಯೋಗ ಸಾಕ್ಷರತಾ ರಾಜ್ಯ”ವನ್ನಾಗಿಸುವುದರ ಜತೆಗೆ ಯೋಗ ಪ್ರದರ್ಶನದಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸುವ ಭಾಗವಾಗಿ ಇಲ್ಲಿನ ಸುವರ್ಣ ವಿಧಾನಸೌಧದ ಆವರಣದಲ್ಲಿ ಭಾನುವಾರ (ಜ.15) ಬೃಹತ್ ಯೋಗಥಾನ್-2023 ಕಾರ್ಯಕ್ರಮ ನಡೆಯಿತು. ಮುಂಜಾನೆಯ ಮಂಜು ಮುಸುಕಿದ ವಾತಾವರಣದಲ್ಲಿ …
Read More »ಬೆಳಗಾವಿಯಲ್ಲೂ ಬೆಂಕಿಗಾಹುತಿಯಾದ ಮತ್ತೊಂದು ಲಾರಿ
ಬೆಳಗಾವಿಯಲ್ಲೂ ಬೆಂಕಿಗಾಹುತಿಯಾದ ಮತ್ತೊಂದು ಲಾರಿ ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿ ಹೊರವಲಯದ ನ್ಯೂವೈಭವ ನಗರ ಬಳಿ ಶನಿವಾರ ರಾತ್ರಿ ಲಾರಿ ಬೆಂಕಿಗಾಹುತಿಯಾಗಿದೆ. ಲಾರಿಯಲ್ಲಿ ದುಬಾರಿ ಫರ್ನಿಚರ್ ಇದ್ದವು. ಬೆಂಕಿ ಹೊತ್ತುಕೊಂಡ ಸಂದರ್ಭದಲ್ಲಿ ಲಾರಿ ಚಾಲಕ ಕೆಲ ಪ್ರಮಾಣದಲ್ಲಿ ಫರ್ನಿಚರ್ ಇಳಿಸಿದ್ದಾನೆ. ನ್ಯೂ ವೈಭವ ನಗರ ಸಮೀಪದ ರಾಷ್ಟ್ರೀಯ ಹೆದ್ದಾರಿ ಮೇಲೆ ಸರಕು ತುಂಬಿಕೊಂಡಿದ್ದ ಈ ಲಾರಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಚಾಲಕ ಹೆದ್ದಾರಿ ಬಳಿ ಲಾರಿ ನಿಲ್ಲಿಸಿದ …
Read More »ಮಕರ ಸಂಕ್ರಾಂತಿ ಪ್ರಯುಕ್ತ ಎಮ್ಮೆ ಓಡಿಸುವ ಸ್ಪರ್ಧೆ ಯಶಸ್ವಿ !
ಮಕರ ಸಂಕ್ರಾಂತಿ ಪ್ರಯುಕ್ತ ಎಮ್ಮೆ ಓಡಿಸುವ ಸ್ಪರ್ಧೆ ಯಶಸ್ವಿ ! ರೈತರ ಖುಷಿಯೇ ದೇಶದ ಜನರ ಖುಷಿ. ರೈತರು ಖುಷಿಯಿಂದ ಇದ್ದರೆ ದೇಶ ಸುಭಿಕ್ಷವಾಗಿರಲು ಸಾಧ್ಯ. ರೈತರಿಗೆ ಬೆಳೆ ಹಾಗೂ ಅವರು ಸಾಕುವ ಜಾನುವಾರುಗಳು ಉತ್ತಮವಾಗಿದ್ದರೆ ಅವರ ಸಂತೋಷಕ್ಕೆ ಪಾರವೇ ಇರದು. ಈ ನಿಟ್ಟಿನಲ್ಲಿ ಅವರಿಗೆ ಸದಾ ಪ್ರೋತ್ಸಾಹ ನೀಡುವೆ : ಮುರಗೇಂದ್ರ ಗೌಡ ಪಾಟೀಲ ಯುವ ಭಾರತ ಸುದ್ದಿ ಬೆಳಗಾವಿ : ನಗರದ ಕುಲಕರ್ಣಿಗಲ್ಲಿಯ ಮಹಾವೀರ ಚೌಕದಲ್ಲಿ ಸಿರಿಗನ್ನಡ …
Read More »ಬೆಳಗಾವಿ ಮೇಯರ್ ಚುನಾವಣೆಗೆ ದಿನ ನಿಗದಿ
ಬೆಳಗಾವಿ ಮೇಯರ್ ಚುನಾವಣೆಗೆ ದಿನ ನಿಗದಿ ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಫೆಬ್ರವರಿ 6 ರಂದು ಚುನಾವಣೆ ನಿಗದಿಪಡಿಸಲಾಗಿದೆ ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
Read More »ಕಿರಣ ಜಾಧವ ಜನ್ಮದಿನ : ಹರಿದು ಬಂದ ಶುಭಾಶಯಗಳ ಮಹಾಪೂರ !
ಕಿರಣ ಜಾಧವ ಜನ್ಮದಿನ : ಹರಿದು ಬಂದ ಶುಭಾಶಯಗಳ ಮಹಾಪೂರ ! ಯುವ ಭಾರತ ಸುದ್ದಿ ಬೆಳಗಾವಿ : ಸಕಲ ಮರಾಠಾ ಸಮಾಜದ ಸಂಯೋಜಕ, ರಾಜ್ಯ ಬಿಜೆಪಿ ಒಬಿಸಿ ಕಾರ್ಯದರ್ಶಿ, ವಿಮಲ್ ಪೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಕಿರಣ ಜಾಧವ ಅವರ ಜನ್ಮ ದಿನವನ್ನು ಅವರ ಅಭಿಮಾನಿಗಳು ಹಾಗೂ ಕುಟುಂಬಸ್ಥರು ಕೇಕ್ ಕತ್ತರಿಸುವ ಮೂಲಕ ಅತ್ಯಂತ ಸರಳವಾಗಿ ಆಚರಿಸಲಾಯಿತು. ಗುರುವಾರ ಬೆಳಗ್ಗೆ ಕಿರಣ ಜಾಧವ ಅವರು ಜನ್ಮ ದಿನದ ಪ್ರಯುಕ್ತ ನಗರದ …
Read More »ಬೆಳಗಾವಿಗೆ ತೆರಳಿ ಕಿರಣ ಜಾಧವಗೆ ಶುಭ ಹಾರೈಸಿದ ಗೋಕಾಕ ಸಾಹುಕಾರ್ !
ಬೆಳಗಾವಿಗೆ ತೆರಳಿ ಕಿರಣ ಜಾಧವಗೆ ಶುಭ ಹಾರೈಸಿದ ಗೋಕಾಕ ಸಾಹುಕಾರ್ ! ಯುವ ಭಾರತ ಸುದ್ದಿ ಬೆಳಗಾವಿ : ಗೋಕಾಕ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಬೆಳಗಾವಿಯ ಬಿಜೆಪಿ ಯುವನಾಯಕ ಮತ್ತು ಸಕಲ ಮರಾಠಾ ಸಮಾಜದ ಧುರೀಣ ಕಿರಣ ಜಾಧವ ಅವರ ಜನ್ಮದಿನ ಪ್ರಯುಕ್ತ ಬೆಳಗಾವಿಗೆ ಆಗಮಿಸಿ ಶುಭ ಹಾರೈಸಿದರು. ಬೆಳಗಾವಿಯಲ್ಲಿ ಏರ್ಪಡಿಸಿದ್ದ ಕಿರಣ ಜಾಧವ ಅವರ ಜನ್ಮದಿನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗೋಕಾಕ ಸಾಹುಕಾರ್ …
Read More »ಬೆಳಗಾವಿ ಕಿರಣ ಜಾಧವ ಸಂಪರ್ಕ ಕಾರ್ಯಾಲಯದಲ್ಲಿ ಜೀಜಾಮಾತಾ, ವಿವೇಕಾನಂದ ಜಯಂತಿ ಸಂಪನ್ನ
ಬೆಳಗಾವಿ ಕಿರಣ ಜಾಧವ ಸಂಪರ್ಕ ಕಾರ್ಯಾಲಯದಲ್ಲಿ ಜೀಜಾಮಾತಾ, ವಿವೇಕಾನಂದ ಜಯಂತಿ ಸಂಪನ್ನ ಯುವ ಭಾರತ ಸುದ್ದಿ ಬೆಳಗಾವಿ : ಜೀಜಾಮಾತಾ ಜಯಂತಿ ಮತ್ತು ಸ್ವಾಮಿ ವಿವೇಕಾನಂದ ಜಯಂತಿಯನ್ನು ಗುರುವಾರ ನಗರದ ಕಿರಣ ಜಾಧವ ಅವರ ಸಂಪರ್ಕ ಕಾರ್ಯಾಲಯದಲ್ಲಿ ಅಚರಿಸಲಾಯಿತು. ಉಭಯ ರಾಷ್ಟ್ರ ನಾಯಕರ ಭಾವಚಿತ್ರಕ್ಕೆ ಕಿರಣ ಜಾಧವ ಅವರು ಪೂಜೆ ನೆರವೇರಿಸಿ ಮಾತನಾಡಿ, ಜೀಜಾಮಾತಾ ಮತ್ತು ಸ್ವಾಮಿ ವಿವೇಕಾನಂದರು ಸಮಾಜಕ್ಕೆ ನೀಡಿದ ಕೊಡುಗೆ ಅನುಪಮವಾಗಿದೆ ಮತ್ತು ಶಾಶ್ವತವಾಗಿ ಸ್ಮರಣೀಯವಾಗಿದೆ ಎಂದು …
Read More »ಬೆಳಗಾವಿ ವಲಯ ಮಟ್ಟದ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ ಸಂಪನ್ನ
ಬೆಳಗಾವಿ ವಲಯ ಮಟ್ಟದ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ ಸಂಪನ್ನ ಯುವ ಭಾರತ ಸುದ್ದಿ ಬೆಳಗಾವಿ : ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ, ಬೆಳಗಾವಿಯ ಕೆಎಲ್‌ಎಸ್ ರಾಜಾ ಲಖಮಗೌಡ ಕಾನೂನು ಕಾಲೇಜುಗಳ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬೆಳಗಾವಿ ವಲಯ ಮಟ್ಟದ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಬೆಂಗಳೂರಿನ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ನಿರ್ದೇಶಕ ಕೆ.ದ್ವಾರಕನಾಥ್ ಬಾಬು ಮುಖ್ಯ ಅತಿಥಿಯಾಗಿ ಆಗಮಿಸಿ …
Read More »ಬೆಳಗಾವಿ ಆರ್ ಎಲ್ ಎಸ್ 50 ವರ್ಷ ಹಿಂದಿನ ಹಳೆಯ ವಿದ್ಯಾರ್ಥಿಗಳ ಸಮಾಗಮ !
ಬೆಳಗಾವಿ ಆರ್ ಎಲ್ ಎಸ್ 50 ವರ್ಷ ಹಿಂದಿನ ಹಳೆಯ ವಿದ್ಯಾರ್ಥಿಗಳ ಸಮಾಗಮ ! ಯುವ ಭಾರತ ಸುದ್ದಿ ಬೆಳಗಾವಿ : ನಗರದ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದಲ್ಲಿ ಬುಧವಾರ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಭೆಯನ್ನು ಸರ್. ಸಿ.ವಿ. ರಾಮನ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. 1973 ರಲ್ಲಿ ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ಹಳೆಯ ವಿದ್ಯಾರ್ಥಿಗಳು ಸಭೆಯಲ್ಲಿ ಭಾಗವಹಿಸಿ ಮಹಾವಿದ್ಯಾಲಯದ ಜೊತೆಗಿನ ತಮ್ಮ ಬಾಂಧವ್ಯ ಮತ್ತು ವಿದ್ಯೆ ಕಲಿಸಿದ …
Read More »