Breaking News

Uncategorized

ಮುಖ್ಯಮಂತ್ರಿ ಯಡಿಯೂರಪ್ಪ ದಿಢೀರ್‌ ರಾಜ್ಯಪಾಲ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ..!!

ಬೆಂಗಳೂರು: ರಾಜ್ಯ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಸಂಪುಟ ವಿಸ್ತರಣೆ ಸಿದ್ಧತೆಗಳು ಆರಂಭವಾಗಿವೆ ಎನ್ನಲಾಗುತ್ತಿದೆ. ಈ ನಡುವೆ ಇಂದು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ದಿಢೀರ್‌ ರಾಜಭವನಕ್ಕೆ ತೆರಳಿ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.   ಸಿಎಂ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಸಂಪುಟ ವಿಸ್ತರಣೆ ಕುರಿತು ಚರ್ಚೆ ಮಾಡುವ ನಿಟ್ಟಿನಲ್ಲಿಯೇ ಸಿಎಂ …

Read More »

ಉಪ್ಪಾರ ಸಮಾಜದ ನಾಯಕರನ್ನು ನಿಗಮಮಂಡಳಿಗೆ ನೇಮಕ ಮಾಡಬೇಕೆಂದು-ವಗ್ಗಣ್ಣವರ..!

ಉಪ್ಪಾರ ಸಮಾಜದ ನಾಯಕರನ್ನು ನಿಗಮಮಂಡಳಿಗೆ ನೇಮಕ ಮಾಡಬೇಕೆಂದು-ವಗ್ಗಣ್ಣವರ ಗೋಕಾಕ: ತಾಲ್ಲೂಕಿನಲ್ಲಿ ಉಪ್ಪಾರ ಸಮಾಜದ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಅರಬಾಂವಿ ಮತ್ತು ಗೋಕಾಕ ಕ್ಷೇತ್ರದಲ್ಲಿ ಸಮಾಜದ ಮುಖಂಡರು ಬಾಲಚಂದ್ರ ಜಾರಕೊಹೊಳಿ ಮತ್ತು ರಮೇಶ್ ಜಾರಕಿಹೊಳಿ ಅವರನ್ನು ಬೆಂಬಲಿಸುತ್ತಾ ಬಂದಿದ್ದು ಉಪ್ಪಾರ ಸಮಾಜದ ನಾಯಕರನ್ನು ನಿಗಮಮಂಡಳಿಗೆ ನೇಮಕ ಮಾಡಬೇಕೆಂದು ಉಪ್ಪಾರ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ. ಮೂಡಲಗಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಉಪ್ಪಾರ ಸಮಾಜದ ಯುವ ಮುಖಂಡ,ಚನ್ನಪ್ಪಾ ವಗ್ಗಣ್ಣವರ,ಉಪ್ಪಾರ ಸಮಾಜದ ಮುಖಂಡರನ್ನು ಕೇವಲ ಜಿಪಂ.ತಾಪಂ ಗೆ ಸೀಮೀತಗೊಳಿಸಬಾರದು …

Read More »

ಗೋಕಾಕ ಡಿವೈಎಸ್‌ಪಿ ಕಾರ್ಯಾಲಯ ಸೀಲ್‌ಡೌನ್….!

ಗೋಕಾಕ: ಇಲ್ಲಿನ ಗೋಕಾಕ ಗ್ರಾಮೀಣ ಪೋಲಿಸ್ ಠಾಣೆ ಹಾಗೂ ಡಿಎಸ್‌ಪಿ ಕಾರ್ಯಾಲಯ ಕೋವಿಡ್-೧೯ ಭೀತಿಯ ಹಿನ್ನೆಲೆಯಲ್ಲಿ ಎರಡು ದಿನಗಳ ಮಟ್ಟಿಗೆ ಸೀಲ್‌ಡೌನ್ ಮಾಡಲಾಗಿದೆ.ಗ್ರಾಮೀಣ ಪೋಲಿಸ್ ಠಾಣೆ ಹಾಗೂ ಡಿಎಸ್‌ಪಿ ಕಾರ್ಯಾಲಯದ ಒರ್ವ ಸಿಬ್ಬಂದಿಗೆ ಸೋಂಕು ‘ಪಾಸಿಟಿವ್’ ಎಂದು ದೃಢಪಟ್ಟ ವರದಿಯ ಹಿನ್ನೆಲೆಯಲ್ಲಿ ಕ್ರಮ ಜರುಗಿಸಲಾಗಿದೆ ಎಂದು ಮಾಹಿತಿಲಭ್ಯ ವಾಗಿದೆ.

Read More »

ಟೈರಗಳನ್ನು ಕಳ್ಳತನ ಮಾಡಿದ ಖದೀಮರು!!

ಗೋಕಾಕ: ಮನೆಯ ಹತ್ತಿರ ಪಾರ್ಕಿಂಗ್ ಮಾಡಿದ್ದ ೫ ವಾಹನಗಳ ಟೈರ್‌ಗಳನ್ನು ಕಳ್ಳರು ಕಳುವು ಮಾಡಿದ ಘಟನೆ ನಗರದ ಸಂಗಮ ನಗರದಲ್ಲಿ ನಡೆದಿದೆ.ಬುಧವಾರದಂದು ಮಧ್ಯರಾತ್ರಿ ಸಮಯದಲ್ಲಿ ಸುಮಾರು ಪಾರ್ಕಿಂಗ್ ಮಾಡಿದ್ದ ೫ ನಾಲ್ಕು ಚಕ್ರದ ವಾಹನಗಳ ಟೈರಗಳನ್ನು ಕಳ್ಳರು ಮಧ್ಯರಾತ್ರಿ ಎಗರಿಸಿದ್ದಾರೆ. ರಾತ್ರಿ ವೇಳೆ ಪೋಲಿಸರು ಗಸ್ತು ತಿರುಗದ ಹಿನ್ನಲೆ ಈ ಪ್ರಕರಣ ನಡೆದಿದೆ ಎಂದು ಸ್ಥಳಿಯರು ದೂರಿದ್ದಾರೆ.

Read More »

ಗೋಕಾಕ ನಗರದಲ್ಲಿ ಕರೋನಾ ಅಟ್ಟಹಾಸ!

ಗೋಕಾಕ: ಗೋಕಾಕ ನಗರ ಹಾಗೂ ತಾಲೂಕಿನಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಗುರುವಾರ ದಂದು ನಗರ ಸೇರಿ ತಾಲೂಕಿನಲ್ಲಿ ೩೪ ಜನರಿಗೆ ಕೊರೊನಾ ಸೋಂಕು ತಗುಲಿದೆ ಎಂದು ವೈದ್ಯಾಧಿಕಾರಿ ಡಾ.ಜಗದೀಶ್ ಜಿಂಗಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ಅವರು, ಗೋಕಾಕ ನಗರ ಸೇರಿ ತಾಲೂಕಿನಾಧ್ಯಂತ ಕರೋನಾ ಪ್ರಕರಣ ಸಂಖ್ಯೆ ಹೆಚ್ಚುತ್ತಿದ್ದು, ಒಂದೇ ದಿನ ೩೪ ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಅದರಲ್ಲೂ ಗೋಕಾಕ ನಗರದಲ್ಲಿ ಕರೋನಾ …

Read More »

ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶ ಅಗಸ್ಟ್ ನಲ್ಲಿ!

2019-20ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶ ಅಗಸ್ಟ್ 6 ಅಥವಾ 8ರಂದು ಪ್ರಕಟವಾಗಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರ ಸುರೇಶ್ ಕುಮಾರ್ ತಿಳಿಸಿದ್ದಾರೆ.

Read More »

ಕೊರೋನಾ ಸೋಂಕು ಗೋಕಾಕ ಪ್ರಥಮ ಬಾರಿಗೆ ಹಾಪ್ ಸೆಂಚುರಿ!!

ಗೋಕಾಕ: ಗೋಕಾಕ ತಾಲೂಕಿನಲ್ಲಿ ಮಾರಣಾಂತಿಕ ಕೊರೋನಾ ಸೋಂಕು ಪ್ರಥಮ ಬಾರಿಗೆ ಹಾಪ್ ಸೆಂಚುರಿ ಬಾರಿಸಿದ್ದು ಒಂದೇ ಕುಟುಂಬದ 10 ಜನರಿಗೆ ಕೊರೋನಾ ಧೃಡಪಟ್ಟಿದೆ ಎಂದು ತಾಲೂಕಾ ಆರೋಗ್ಯ ಅಧಿಕಾರಿ ಜಗದೀಶ ಜಿಂಗಿ ಮಾಹಿತಿ ನೀಡಿದ್ದಾರೆ. ಗೋಕಾಕ ತಾಲೂಕಿನಲ್ಲಿ ಇಂದು ಒಟ್ಟು 57 ಪ್ರಕರಣಗಳು ವರದಿಯಾಗಿದ್ದು ಗೋಕಾಕ ನಗರದಲ್ಲಿಯೆ 24 ಸೋಂಕಿತರು ಪತ್ತೆಯಾಗಿದ್ದಾರೆ. ನಗರದ ವಿದ್ಯಾನಗರದ ಒಂದೇ ಕುಟುಂಬದ 10 ಜನರಿಗೆ ಕೊರೋನಾ ತಗುಲಿದ್ದು ಆತಂಕ ಹೆಚ್ಚಿಸಿದೆ. ಉಳಿದಂತೆ ಗೋಕಾಕ ತಾಲೂಕು ಗ್ರಾಮಾಂತರ …

Read More »

ಹನಿ ಟ್ರ್ಯಾಪ್ : ಬ್ಲ್ಯಾಕಮೇಲ ಮಾಡಲು ಹೋಗಿ ಜೈಲಿಗೆ ಸೇರಿದ ದುರುಳರು

ಹನಿ ಟ್ರ್ಯಾಪ್ : ಬ್ಲ್ಯಾಕಮೇಲ ಮಾಡಲು ಹೋಗಿ ಜೈಲಿಗೆ ಸೇರಿದ ದುರುಳರು ಬೆಳಗಾವಿ .ಜು.30: ಜಮಖಂಡಿ ಮೂಲದ ವ್ಯಕ್ಯಿಯೋರ್ವನನ್ನು ಹನಿ ಟ್ರ್ಯಾಪ್ ಬಲೆಗೆ ಕೆಡವಿ ,ಆತನಿಂದ 10 ಲಕ್ಷ ರೂ ನೀಡುವಂತೆ ಹೇಳಿ ವ್ಯಕ್ತಿಯನ್ನು ಬ್ಲ್ಯಾಕ್ ಮೇಲ ಮಾಡಲು ಹೊರಟಿದ್ದ ಐದು ಜನರ ದುರುಳರು ಇದೀಗ ಬೆಳಗಾವಿ ಹಿಂಡಲಗಾ ಜೈಲಿನ ಅತಿಥಿಗಳಾಗಿದ್ದಾರೆ. ಹಲವು ದಿನಗಳಿಂದ ಜಮಖಂಡಿ ಮೂಲದ ವ್ಯಕ್ಯಿಯ ಜೊತೆ ನಯವಾದ ಮತ್ತು ಸುಮಧುರ ಮಾತುಗಳಿಂದ ಸ್ನೇಹ ಬೆಳೆಸಿದ ಮೂವರು …

Read More »

ರಾಜ್ಯದಲ್ಲಿ 5503 ಬೆಳಗಾವಿಯಲ್ಲಿ 279 ಜನರಿಗೆ ಕೊರೊನಾ ಸೊಂಕು

ರಾಜ್ಯದಲ್ಲಿ 5503 ಬೆಳಗಾವಿಯಲ್ಲಿ 279 ಜನರಿಗೆ ಕೊರೊನಾ ಸೊಂಕು ಬೆಳಗಾವಿ. ಜು.29: ರಾಜ್ಯದಲ್ಲಿ ಕೊರೊನಾ ಸೊಂಕು ತನ್ನ ಅಟ್ಟಹಾಸ ಮುಂದುವರೆಸಿದ್ದು, ಇಂದು ರಾಜ್ಯದಲ್ಲಿ 5503 ಜನರಿಗೆ ಕೊರೊನಾ ಸೊಂಕು ತಗುಲಿದೆ. ‌ರಾಜ್ಯದಲ್ಲಿ ಇಂದು 92 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 279 ಜನರಿಗೆ ಕೊರೊನಾ ಸೊಂಕು ತಗುಲಿದ್ದು, 3 ಜನ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇಂದುಬ2397 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ‌ . ಬೆಂಗಳೂರು ನಗರ -2270, …

Read More »

ಸರ್ಕಾರದ ಮಾರ್ಗಸೂಚಿ ಪ್ರಕಾರ ಬಕ್ರೀದ್ ಹಬ್ಬ ಆಚರಿಸಲು ಅವಕಾಶ: ಜಿಲ್ಲಾಧಿಕಾರಿ ಹಿರೇಮಠ

ಸರ್ಕಾರದ ಮಾರ್ಗಸೂಚಿ ಪ್ರಕಾರ ಬಕ್ರೀದ್ ಹಬ್ಬ ಆಚರಿಸಲು ಅವಕಾಶ: ಜಿಲ್ಲಾಧಿಕಾರಿ ಹಿರೇಮಠ ಬೆಳಗಾವಿ, ಜು.೨೯: ಕೋವಿಡ್-೧೯ ಹಿನ್ನೆಲೆಯಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿ ಪ್ರಕಾರ ಬಕ್ರೀದ್ ಹಬ್ಬ ಆಚರಣೆ ಮಾಡಬೇಕು. ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಮ್.ಜಿ. ಹಿರೇಮಠ ಅವರು ತಿಳಿಸಿದ್ದಾರೆ. ಅಗಸ್ಟ್ ೧ ರಂದು ಆಚರಿಸಲಾಗುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಶಾಂತಿ ಹಾಗೂ ಕಾನೂನು‌ ಸುವ್ಯವಸ್ಥೆ ಕಾಪಾಡುವ ನಿಮಿತ್ತ ಬುಧವಾರ (ಜು.೨೯) …

Read More »