Breaking News

Uncategorized

30 ವರ್ಷಗಳ ಕಾಲ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವ ಕಡಾಡಿ ಅವರಿಗೆ ರಾಜ್ಯಸಭಾ ಜೊತೆಗೆ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಪಟ್ಟ

ಮೂಡಲಗಿ: ಕರ್ನಾಟಕ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರನ್ನಾಗಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನಕುಮಾರ ಕಟೀಲು ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಕಳೆದ 30 ವರ್ಷಗಳ ಕಾಲ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ಮುಖಂಡರಾಗಿ ಪಕ್ಷದ ಸಂಘಟನೆಗೆ ನಿರಂತರ ಶ್ರಮಿಸುತ್ತಾ ಬಂದಿರುವ ನೂತನ ರಾಜ್ಯಸಭಾ ಸದಸ್ಯರಾಗಿ ಆಯ್ಕೆಗೊಂಡ ಈರಣ್ಣ ಕಡಾಡಿ ಅವರು, ಈ ಮೊದಲು ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ, 2 ಸಲ …

Read More »

ಸರಕಾರದ ಮಾರ್ಗಸೂಚಿಯಂತೆ ಬಕ್ರೀದ್ ಆಚರಣೆ.!

ಗೋಕಾಕ: ದಿನದಿಂದ ದಿನಕ್ಕೆ ತೀವ್ರವಾಗಿ ಹಬ್ಬುತ್ತಿರುವ ಮಹಾಮಾರಿ ಕೊರೋನಾ ಮಧ್ಯದಲ್ಲಿ ಇಲ್ಲಿಯ ಮುಸ್ಲಿಂ ಬಾಂಧವರು ತ್ಯಾಗ, ಬಲಿದಾನಗಳ ಪ್ರತೀಕವಾದ ಈದುಲ್ಲ್ ಅಝ್ಹಾ (ಬಕ್ರೀದ್) ಹಬ್ಬದ ಪ್ರಯುಕ್ತ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ ಧರಿಸಿ ತಮ್ಮ ತಮ್ಮ ಗಲ್ಲಿಯಲ್ಲಿರುವ ಮಸೀದಗಳಲ್ಲಿ ಶನಿವಾರದಂದು ಸಾಮೂಹಿಕ ಪ್ರಾರ್ಥನೆ ಮಾಡಿ ಈದ್ ಆಚರಿಸಿದರು. ಬಕ್ರೀದ್ ಹಬ್ಬದ ಸಲುವಾಗಿ ಸರಕಾರ ಹೊರಡಿಸಿದ ಮಾರ್ಗಸೂಚಿಯಂತೆ ನಗರದ ಹೊಸಪೇಟೆ ಗಲ್ಲಿಯ ನೂರಾನಿ ಮಸೀದ, ಅಂಬೇಡ್ಕರ್ ನಗರದ ಮದೀನಾ, ಈದ್ಗಾ ಮತ್ತು …

Read More »

ಬಿಜೆಪಿ ಸರಕಾರದ ಒಂದು ವರ್ಷದ ಸಾಧನೆಯ ಕರಪತ್ರ ಹಂಚಿಕೆ.!

ಗೋಕಾಕ: ಬಿ.ಎಸ್ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರದ ಒಂದು ವರುಷದ ಸಂಕಷ್ಟ ಸವಾಲುಗಳ ನಡುವೆ ಸಂವೇದನೆ ಸ್ಪಂದನೆ ಸಾಧÀನೆಯ ಕರಪತ್ರನ್ನು ಮನೆ ಮನೆಗೆ ತಲಪಿಸುವ ಕಾರ್ಯಕ್ಕೆ ಶನಿವಾರದಂದು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷರಾದ ಭೀಮಶಿ ಭರಮಣ್ಣವರ, ಪ್ರಧಾನ ಕಾರ್ಯದರ್ಶಿಯಾದ ಜಯಾನಂದ ಹುಣಚ್ಯಾಳಿ, ನಗರಸಭೆ ಸದಸ್ಯರಾದ ಸಿದ್ದಪ್ಪ ಹುಚ್ಚರಾಯಪ್ಪಗೋಳ, ಬಸವರಾಜ ಆರ್ಯನವರ, ಶ್ರೀಶೈಲ ಯಕ್ಕುಂಡಿ, ಶಿವಪ್ಪ ಗುಡ್ಡಾಕಾಯು, ಹರೀಶ ಬೂದಿಹಾಳ, ಹನುಮಂತ ಕಾಳಮ್ಮನಗುಡಿ, ಕಾಶಿಂ ಕಲಿಫ್, …

Read More »

ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಊಟೋಪಚಾರ ಮಾಡಿದ್ದ ಸಿದ್ಧವ್ವ ಮೇತ್ರಿ ನಿಧನಕ್ಕೆ  ಸಂತಾಪ-ಸಚಿವ ರಮೇಶ್ ಜಾರಕಿಹೊಳಿ‌..|| ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಬೆಳಗಾವಿಗೆ ಬಂದಾಗ ಅವರನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡು ಉಟೋಪಚಾರ ಮಾಡಿದ್ದ  ಸಿದ್ಧವ್ವ ಮೇತ್ರಿ  ಅವರ ನಿಧನಕ್ಕೆ ಜಲಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ‌* ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿದ್ಧವ್ವ ಮೇತ್ರಿ ಅವರು 95 ವರ್ಷಗಳ ಸುದೀರ್ಘ ಜೀವನ ನಡೆಸಿದ್ದರು‌.1939ರಲ್ಲಿ ಬೆಳಗಾವಿಗೆ ಆಗಮಿಸಿದ್ದ …

Read More »

ನಂದಿನಿ ಹಾಲು ನೌಕರರಿಗೆ ಕೊರೋನಾ ವಿಮೆ ಮಾಡಿಸಲು ನಿರ್ಧರಿಸಲಾಗಿದೆ-  ಮಹಾಮಂಡಳಿ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ …!!  

  ನಂದಿನಿ ಹಾಲು ನೌಕರರಿಗೆ ಕೊರೋನಾ ವಿಮೆ ಮಾಡಿಸಲು ನಿರ್ಧರಿಸಲಾಗಿದೆ-  ಮಹಾಮಂಡಳಿ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ …!!    ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ಸಂದರ್ಭದಲ್ಲಿ ತಮ್ಮ ಜೀವದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಕಹಾಮ ನೌಕರರಿಗೆ ಕೊರೋನಾ ವಿಮೆ ಮಾಡಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಶುಕ್ರವಾರದಂದು ಈ ಹೇಳಿಕೆ ನೀಡಿರುವ ಅವರು, …

Read More »

ಹೆಣ್ಣು ಕೇವಲ ಭೋಗದ ವಸ್ತು ವಲ್ಲ, ಅದೂ ಒಂದು ಸ್ವತಂತ್ರವಾದ ಜೀವ-ಭಾರತಿ ಮದಭಾವಿ.!

ಗೋಕಾಕ: ಹಲ್ಯೆಗಳು ನಡೆದಿರುವ ಕಾರಣ ಅಹಲ್ಯೆಯಾದಳು ಎಂಬಂತೆ ಹೆಣ್ಣು ಕೇವಲ ಭೋಗದ ವಸ್ತು ವಲ್ಲ, ಅದೂ ಒಂದು ಸ್ವತಂತ್ರವಾದ ಜೀವ. ಅವಳ ಅಶ್ಮಿತೆಯೇ ಪುರುಷರ ಬದುಕಿಗೆ ಆಧಾರವಾಗಿದೆ ಹೀಗಾಗಿ ಹೆಣ್ಣಿಗೆ ಬೆಲೆ-ನೆಲೆಯಿದೆ ಎಂದು ಗೋಕಾದ ಭಾವಯಾನ ಸಾಹಿತ್ಯ ಸಂಘಟನೆ ಅಧ್ಯಕ್ಷೆ ಭಾರತಿ ಮದಭಾವಿ ಅಭಿಪ್ರಾಯ ಪಟ್ಟರು.   ಅವರು ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡ ಕೋವಿಡ್ -19 ಲಾಕ್ ಡೌನ್ ನಿಮಿತ್ಯ ಗೂಗಲ್ ಮೀಟ್ ಸೆಮಿನಾರ್ ಅಲ್ಲ ವೇಬಿನರ್ ವಿಶೇಷ …

Read More »

ಮುಖ್ಯಮಂತ್ರಿ ಯಡಿಯೂರಪ್ಪ ದಿಢೀರ್‌ ರಾಜ್ಯಪಾಲ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ..!!

ಬೆಂಗಳೂರು: ರಾಜ್ಯ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಸಂಪುಟ ವಿಸ್ತರಣೆ ಸಿದ್ಧತೆಗಳು ಆರಂಭವಾಗಿವೆ ಎನ್ನಲಾಗುತ್ತಿದೆ. ಈ ನಡುವೆ ಇಂದು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ದಿಢೀರ್‌ ರಾಜಭವನಕ್ಕೆ ತೆರಳಿ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.   ಸಿಎಂ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಸಂಪುಟ ವಿಸ್ತರಣೆ ಕುರಿತು ಚರ್ಚೆ ಮಾಡುವ ನಿಟ್ಟಿನಲ್ಲಿಯೇ ಸಿಎಂ …

Read More »

ಉಪ್ಪಾರ ಸಮಾಜದ ನಾಯಕರನ್ನು ನಿಗಮಮಂಡಳಿಗೆ ನೇಮಕ ಮಾಡಬೇಕೆಂದು-ವಗ್ಗಣ್ಣವರ..!

ಉಪ್ಪಾರ ಸಮಾಜದ ನಾಯಕರನ್ನು ನಿಗಮಮಂಡಳಿಗೆ ನೇಮಕ ಮಾಡಬೇಕೆಂದು-ವಗ್ಗಣ್ಣವರ ಗೋಕಾಕ: ತಾಲ್ಲೂಕಿನಲ್ಲಿ ಉಪ್ಪಾರ ಸಮಾಜದ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಅರಬಾಂವಿ ಮತ್ತು ಗೋಕಾಕ ಕ್ಷೇತ್ರದಲ್ಲಿ ಸಮಾಜದ ಮುಖಂಡರು ಬಾಲಚಂದ್ರ ಜಾರಕೊಹೊಳಿ ಮತ್ತು ರಮೇಶ್ ಜಾರಕಿಹೊಳಿ ಅವರನ್ನು ಬೆಂಬಲಿಸುತ್ತಾ ಬಂದಿದ್ದು ಉಪ್ಪಾರ ಸಮಾಜದ ನಾಯಕರನ್ನು ನಿಗಮಮಂಡಳಿಗೆ ನೇಮಕ ಮಾಡಬೇಕೆಂದು ಉಪ್ಪಾರ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ. ಮೂಡಲಗಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಉಪ್ಪಾರ ಸಮಾಜದ ಯುವ ಮುಖಂಡ,ಚನ್ನಪ್ಪಾ ವಗ್ಗಣ್ಣವರ,ಉಪ್ಪಾರ ಸಮಾಜದ ಮುಖಂಡರನ್ನು ಕೇವಲ ಜಿಪಂ.ತಾಪಂ ಗೆ ಸೀಮೀತಗೊಳಿಸಬಾರದು …

Read More »

ಗೋಕಾಕ ಡಿವೈಎಸ್‌ಪಿ ಕಾರ್ಯಾಲಯ ಸೀಲ್‌ಡೌನ್….!

ಗೋಕಾಕ: ಇಲ್ಲಿನ ಗೋಕಾಕ ಗ್ರಾಮೀಣ ಪೋಲಿಸ್ ಠಾಣೆ ಹಾಗೂ ಡಿಎಸ್‌ಪಿ ಕಾರ್ಯಾಲಯ ಕೋವಿಡ್-೧೯ ಭೀತಿಯ ಹಿನ್ನೆಲೆಯಲ್ಲಿ ಎರಡು ದಿನಗಳ ಮಟ್ಟಿಗೆ ಸೀಲ್‌ಡೌನ್ ಮಾಡಲಾಗಿದೆ.ಗ್ರಾಮೀಣ ಪೋಲಿಸ್ ಠಾಣೆ ಹಾಗೂ ಡಿಎಸ್‌ಪಿ ಕಾರ್ಯಾಲಯದ ಒರ್ವ ಸಿಬ್ಬಂದಿಗೆ ಸೋಂಕು ‘ಪಾಸಿಟಿವ್’ ಎಂದು ದೃಢಪಟ್ಟ ವರದಿಯ ಹಿನ್ನೆಲೆಯಲ್ಲಿ ಕ್ರಮ ಜರುಗಿಸಲಾಗಿದೆ ಎಂದು ಮಾಹಿತಿಲಭ್ಯ ವಾಗಿದೆ.

Read More »

ಟೈರಗಳನ್ನು ಕಳ್ಳತನ ಮಾಡಿದ ಖದೀಮರು!!

ಗೋಕಾಕ: ಮನೆಯ ಹತ್ತಿರ ಪಾರ್ಕಿಂಗ್ ಮಾಡಿದ್ದ ೫ ವಾಹನಗಳ ಟೈರ್‌ಗಳನ್ನು ಕಳ್ಳರು ಕಳುವು ಮಾಡಿದ ಘಟನೆ ನಗರದ ಸಂಗಮ ನಗರದಲ್ಲಿ ನಡೆದಿದೆ.ಬುಧವಾರದಂದು ಮಧ್ಯರಾತ್ರಿ ಸಮಯದಲ್ಲಿ ಸುಮಾರು ಪಾರ್ಕಿಂಗ್ ಮಾಡಿದ್ದ ೫ ನಾಲ್ಕು ಚಕ್ರದ ವಾಹನಗಳ ಟೈರಗಳನ್ನು ಕಳ್ಳರು ಮಧ್ಯರಾತ್ರಿ ಎಗರಿಸಿದ್ದಾರೆ. ರಾತ್ರಿ ವೇಳೆ ಪೋಲಿಸರು ಗಸ್ತು ತಿರುಗದ ಹಿನ್ನಲೆ ಈ ಪ್ರಕರಣ ನಡೆದಿದೆ ಎಂದು ಸ್ಥಳಿಯರು ದೂರಿದ್ದಾರೆ.

Read More »