Breaking News

ಲೈಫ್ ಜಾಕೆಟ್ ಧರಿಸಿ ಬೋಟ್ ಮೂಲಕ ಪ್ರವಾಹ ಪರಿಸ್ಥಿತಿ|| ಅವಲೋಕಿಸಿದ ಜಲಸಂಪನ್ಮೂಲ ಸಚಿವ -ರಮೇಶ್ ಜಾರಕಿಹೊಳಿ..!!

Spread the love

 

ಲೈಫ್ ಜಾಕೆಟ್ ಧರಿಸಿ ಬೋಟ್ ಮೂಲಕ ಪ್ರವಾಹ ಪರಿಸ್ಥಿತಿ|| ಅವಲೋಕಿಸಿದ ಜಲಸಂಪನ್ಮೂಲ ಸಚಿವ -ರಮೇಶ್ ಜಾರಕಿಹೊಳಿ..!!

 ಯುವ ಭಾರತ ಸುದ್ದಿ ಚಿಕ್ಕೋಡಿ:  ಕೃಷ್ಣಾನದಿ ತೀರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಬೋಟ್ ಮೂಲಕ ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿದರು.
ಚಿಕ್ಕೋಡಿ ತಾಲೂಕಿನ ಅಂಕಲಿ, ಮಾಂಜರಿ, ಯಡೂರ ಗ್ರಾಮದ ಕೃಷ್ಣಾನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಯವರು ನೆರೆ ಪರಿಸ್ಥಿತಿಯನ್ನು ಅವಲೋಕಿಸಿದರು. ನಂತರ ಯಡೂರ ಗ್ರಾಮದ ನದಿತೀರದಲ್ಲಿ ಲೈಫ್ ಜಾಕೆಟ್ ಧರಿಸಿ ಬೋಟ್ ಮೂಲಕ ಪ್ರವಾಹ ಪರಿಸ್ಥಿತಿಯನ್ನು ರಮೇಶ್ ಜಾರಕಿಹೊಳಿ ಅವಲೋಕಿಸಿದರು.

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಜಾರಕಿಹೊಳಿ‌, ಕಳೆದ ಬಾರಿಗಿಂತ ಈ ಬಾರಿ ಪ್ರವಾಹ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕೋಯ್ನಾ ಜಲಾಶಯಗಳಿಂದ ನೀರು ಬಿಡುಗಡೆ ಮಾಡಿಲ್ಲ. ಇದರಿಂದ ನದಿತೀರದ ಜನರು ಹೇದರುವ ಅವಶ್ಯಕತೆಯಿಲ್ಲ. ಪ್ರವಾಹ ನಿಯಂತ್ರಣಕ್ಕೆ ಸರ್ಕಾರ ಬದ್ದವಾಗಿದ್ದು ಪ್ರವಾಹಕ್ಕೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾಡಳಿತದ ಅಧಿಕಾರಿಗಳು ಸಹ ಪ್ರವಾಹ ನಿಯಂತ್ರಣದ ವಿಷಯದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನು ಕಳೆದ ವರ್ಷ ಪ್ರವಾಹದಲ್ಲಿ ಹಾನಿಗೊಳಗಾದ ಮನೆಗಳಿಗೆ ಪರಿಹಾರದ ಹಣ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದೆ. ಶೀಘ್ರವೇ ಆ ಸಮಸ್ಯೆಗಳನ್ನು ಪರಿಹರಿಸಿ ಪರಿಹಾರದ ಹಣವನ್ನು ಒದಗಿಸಲಾಗುವುದು ಎಂದು ರಮೇಶ್ ಜಾರಕಿಹೋಳಿ ಭರವಸೆ ನೀಡಿದರು.
ಒಟ್ಟಾರೆ ಕೃಷ್ಣಾ ನದಿ ತೀರದ ಪ್ರವಾಹ ಸ್ಥಳಗಳಿಗೆ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಭೇಟಿ ನೀಡಿ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.


Spread the love

About Yuva Bharatha

Check Also

ನಗರದ ಆರೋಗ್ಯ ಆಧಾರ ಆಸ್ಪತ್ರೆಯಲ್ಲಿ ಪ್ರತಿಭಟನೆ!!

Spread the loveನಗರದ ಆರೋಗ್ಯ ಆಧಾರ ಆಸ್ಪತ್ರೆಯಲ್ಲಿ ಪ್ರತಿಭಟನೆ!! ಗೋಕಾಕ: ನಗರದ ಖಾಸಗಿ ಆರೋಗ್ಯ ಆಧಾರ ಆಸ್ಪತ್ರೆಯಲ್ಲಿ ನವಜಾತ ಶಿಶು …

Leave a Reply

Your email address will not be published. Required fields are marked *

2 + 7 =