ಪ್ರವಾಹ ಎದುರಿಸಲು ಜಿಲ್ಲಾಡಳಿತ ಸನ್ನದ್ಧ- ಜಿಲ್ಲಾಧಿಕಾರಿ ಎ ಜಿ ಹಿರೇಮಠ.!
ಯುವ ಭಾರತ ಸುದ್ದಿ ಗೋಕಾಕ್: ಪ್ರಹಾವ ಎದುರಿಸಲು ಜಿಲ್ಲಾಡಳಿತದಿಂದ ಸಾಕಷ್ಟು ಸಿದ್ಧತೆ ಮಾಡಿಕೊಂಡಿರುವದಾಗಿ ಜಿಲ್ಲಾಧಿಕಾರಿ ಎ ಜಿ ಹಿರೇಮಠ ತಿಳಿಸಿದರು.
ಅವರು, ನಗರದ ಲೋಳಸೂರ ಸೇತುವೆ ಹಾಗೂ ಮಟನ್ ಮಾರ್ಕೇಟ್‌ನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪತ್ರಕರ್ತರೊಂದಿಗೆ ಮಾತನಾಡಿ, ಗೋಕಾಕ ತಾಲೂಕಿನಲ್ಲಿ ೨೫ಜನ ನ್ಯೂಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಪ್ರವಾಹ ಪೀಡಿತ ಪ್ರದೇಶದ ಜನರನ್ನು ರಕ್ಷಣೆ ಮಾಡಲು ಗೋಕಾಕ ಹಾಗೂ ರಾಮದುರ್ಗ ತಾಲೂಕುಗಳಿಗೆ ೧೫ಜನರನ್ನು ಒಳಗೊಂಡ ಒಂದು ಎನ್‌ಡಿಆರ್‌ಎಫ್ ತಂಡವನ್ನು ನೇಮಿಸಲಾಗಿದೆ ಎಂದರು.
ಗೋಕಾಕ ತಾಲೂಕಿನಲ್ಲಿ ಈಗಾಗಲೇ ೬ಬೋಟಗಳನ್ನು ರಕ್ಷಣೆಯಲ್ಲಿ ಬಳಸಿಕೊಳ್ಳಲು ಕರೆತರಲಾಗಿದ್ದು, ಸಂತ್ರಸ್ತರಿಗಾಗಿ ೩೦ ಗಂಜಿ ಕೇಂದ್ರ ಕಟ್ಟಡಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೈಲಹೊಂಗಲ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ, ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.