Breaking News

ನೆರೆಸಂತ್ರಸ್ತರಿಂದ ಜಿಲ್ಲಾಧಿಕಾರಿಯವರಿಗೆ ಮನವಿ.!

Spread the love

ನೆರೆಸಂತ್ರಸ್ತರಿಂದ ಜಿಲ್ಲಾಧಿಕಾರಿಯವರಿಗೆ ಮನವಿ.!

 

ಯುವ ಭಾರತ ಸುದ್ದಿ  ಗೋಕಾಕ್:     ಕಳೆದ ಬಾರಿಯ ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರು ಸೋಮವಾರ ಜಿಲ್ಲಾಧಿಕಾರಿ ಎ ಜಿ ಹಿರೇಮಠ ಅವರಿಗೆ ಪರಿಹಾರ ಧನ ಮಂಜೂರು ಮಾಡುವಂತೆ ಮನವಿ ಮಾಡಿದರು.
ಪ್ರವಾಹ ಪರಿಸ್ಥಿತಿ ವಿಕ್ಷಿಸಲು ನಗರಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿಯರನ್ನು ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿದ ಸಂತ್ರಸ್ತರು ಕಳೆದ ಒಂದು ವರ್ಷದಿಂದ ಮನೆಗಳನ್ನು ಕಳೆದುಕೊಂಡು ಅಪಾರ ಕಷ್ಟವನ್ನು ಅನುಭವಿಸಿದ್ದೆವೆ. ಸರಕಾರ ಮನೆ ನಿರ್ಮಾಣ ಮಾಡಿಕೊಳ್ಳಲು ಹಣ ಬಿಡುಗಡೆ ಮಾಡಿದ್ದು, ಅವುಗಳಲ್ಲಿ ಇನ್ನು ಅನೇಕರಿಗೆ ತಲುಪಿಲ್ಲ. ಕಷ್ಟದಲ್ಲಿ ಬದುಕನ್ನು ಸಾಗಿಸುತ್ತಿರುವ ನಮಗೆ ಪರಿಹಾರ ಮಂಜೂರು ಮಾಡಬೇಕು ಎಂದು ವಿನಂತಿಸಿದರು.
ಸಂತ್ರಸ್ತರು ಕಳೆದ ಒಂದು ವರ್ಷದಿಂದ ಮಾಡಲು ಕೆಲಸವಿಲ್ಲದೆ. ಮನೆ ನಿರ್ಮಾಣ ಮಾಡಲು ಸರಕಾರಿ ಕಚೇರಿಗಳಿಗೆ ಪರಿಹಾರಕ್ಕೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಫಲಾನುಭವಿಗಳ ಸಂಖ್ಯೆ ಡಿಲಿಟ್ ಆಗಿವೆ. ಮತ್ತು ಹೈಡ್ ಆಗಿವೆ ಎಂದು ಉತ್ತಿರಿಸುತ್ತಿದ್ದು, ತಾವಾದರೂ ನಮಗೆ ಮನೆ ಕಟ್ಟಿಸಿಕೊಳ್ಳಲು ಪರಿಹಾರ ಒದಗಿಸುವಂತೆ ಕೋರಿದರು.
ಸಂತ್ರಸ್ತರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಯವರು ತಮ್ಮ ಸಮಸ್ಯೆಯನ್ನು ೧೦ದಿನಗಳ ಒಳಗಾಗಿ ಬಗೆಹರಿಸುವದಾಗಿ ಹೇಳಿ, ಜಿಲ್ಲೆಯಲ್ಲಿ ೯ಸಾವಿರ ಪ್ರಕರಣಗಳಿದ್ದು ಕೂಡಲೇ ಇತ್ಯರ್ಥಮಾಡುವದಾಗಿ ಸಂತ್ರಸ್ತರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬೈಲಹೊಂಗಲ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ, ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ ಸೇರಿದಂತೆ ಅಧಿಕಾರಿಗಳು ಇದ್ದರು.


Spread the love

About Yuva Bharatha

Check Also

ಬೆಳಗಾವಿಯಲ್ಲಿ ನಡೆದ ಪ್ರಧಾನಿ ಮೋದಿಯವರ ಕಾರ್ಯಕ್ರಮ ಕಂಡು ಕಾಂಗ್ರೇಸ್‌ಗೆ ನಡುಕ.!

Spread the loveಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಗೋಕಾಕ ಮತಕ್ಷೇತ್ರದಲ್ಲಿ ಮತಯಾಚನೆ.! ಗೋಕಾಕ: ಬೆಳಗಾವಿಯಲ್ಲಿ ನಡೆದ ಪ್ರಧಾನಿ ಮೋದಿಯವರ ಕಾರ್ಯಕ್ರಮದಲ್ಲಿ …

Leave a Reply

Your email address will not be published. Required fields are marked *

8 − seven =