ಹದಗೆಟ್ಟ ವೇದಾಂತನ ಆರೋಗ್ಯ : ಸಹಾಯ ಮಾಡಲು ಪೋಷಕರ ಮೊರೆ
ಬೆಳಗಾವಿ :
ಸವದತ್ತಿ ತಾಲೂಕು ಮಬನೂರ ಗ್ರಾಮದ ಫಕೀರಪ್ಪ ಈರಪ್ಪ ನರಿ ಅವರ ಪುತ್ರ ವೇದಾಂತ್ ಫಕೀರಪ್ಪ ನರಿ ಅವರ ಆರೋಗ್ಯ ಹದಗೆಟ್ಟಿದೆ. ಇವರ ವೈದ್ಯಕೀಯ ಚಿಕಿತ್ಸಾ ವೆಚ್ಚಕ್ಕೆ ಧನಸಹಾಯ ಮಾಡುವಂತೆ ಪೋಷಕರು ಮನವಿ ಮಾಡಿದ್ದಾರೆ.
ವೇದಾಂತ ಆರೋಗ್ಯದಲ್ಲಿ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ತೊಂದರೆಯಾಗಿದೆ. ಮಗು ಬೆಂಗಳೂರಿನ ನಾರಾಯಣ ಹೃದಯಾಲಯ ಹೆಲ್ತ್ ಸಿಟಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಗು ಸಂಪೂರ್ಣ ಗುಣಮುಖವಾಗಲು ಆಪರೇಷನ್ ಮಾಡಬೇಕು ಎಂದು ವೈದ್ಯರು ತಿಳಿಸಿದ್ದಾರೆ.
ಆಪರೇಷನ್ ವೆಚ್ಚ 22 ಲಕ್ಷ ರೂ. ಹಾಗೂ ಬಿಳಿ ರಕ್ತ ತರಿಸಲು ಎಂಟು ಲಕ್ಷ ಸೇರಿ ಒಟ್ಟು 30 ಲಕ್ಷ ರೂ. ವೆಚ್ಚ ಭರಿಸಲು ವೈದ್ಯರು ತಿಳಿಸಿದ್ದಾರೆ.
ಇದರಿಂದ ನಮ್ಮ ಕುಟುಂಬಕ್ಕೆ ಆರ್ಥಿಕ ತೊಂದರೆಯಾಗಿದೆ. ಈಗಾಗಲೇ ಸಾಲ ಮಾಡಿ ಸುಮಾರು 5 ಲಕ್ಷ ಖರ್ಚು ಮಾಡಿರುತ್ತೇವೆ. ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ಸರಿ ಇರುವುದಿಲ್ಲ. ಆದ್ದರಿಂದ ಮಗುವಿನ ಚಿಕಿತ್ಸೆಗೆ ಸಾರ್ವಜನಿಕರು ಸಹಾಯಧನ ನೀಡಬೇಕು ಎಂದು ಫಕೀರಪ್ಪ ಈರಪ್ಪ ನರಿ ಅವರು ಮನವಿ ಮಾಡಿಕೊಂಡಿದ್ದಾರೆ. ಫಕೀರಪ್ಪ ಈರಪ್ಪ ನರಿ ಅವರ ಬ್ಯಾಂಕ್ ಖಾತೆ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಶಾಖೆ ಮುನವಳ್ಳಿ ಎಸ್ ಬಿ ನಂಬರ್ : 322601000000406 ISFC CODE NO: IOBA0003226 ಆಗಿದ್ದು ಈ ಖಾತೆಗೆ ಹಣ ಜಮಾ ಮಾಡಲು ಅವರು ಕೋರಿದ್ದಾರೆ..