Breaking News

ಅಂತರಾಜ್ಯ ಕಳ್ಳರನ್ನು ಬಂಧಿಸಲು ಸಫಲರಾದ ಗೋಕಾಕ ಪೋಲಿಸರು, 55.60ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ.!

Spread the love

ಅಂತರಾಜ್ಯ ಕಳ್ಳರನ್ನು ಬಂಧಿಸಲು ಸಫಲರಾದ ಪೋಲಿಸರು, 55.60ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ.!


ಗೋಕಾಕ: ಕಳೆದ ವರ್ಷ ನಡೆದ ಗೋಕಾಕ ತಾಲೂಕಿನ ಹಲವೆಡೆ ನಡದ ಕಳ್ಳತನ ಪ್ರಕರಣ ಭೇದಿಸುವಲ್ಲಿ ಗೋಕಾಕ ವೃತ್ತ ಪೋಲಿಸರು ಸಫಲರಾಗಿದ್ದು, ಅಂತರಾಜ್ಯ ಕಳ್ಳರನ್ನು ಬಂಧಿಸಿ 55.60ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ 11-11-2022ರಂದು ವಿವೇಕಾನಂದ ನಗರದ ಪ್ರಕಾಶ ಲಕ್ಷö್ಮಣ ತೋಳಿನವರ ಹಾಗೂ 23-05-2023ರಂದು ತವಗ ಗ್ರಾಮದ ಶ್ರೀ ಬೀರೇಶ್ವರ ದೇವಸ್ಥಾನದಲ್ಲಿ ಚಿನ್ನಾಭರಣ ಕಳ್ಳತನ ನಡೆದಿತ್ತು. ಬೆಳಗಾವಿ ಎಸ್‌ಪಿ ಸಚಿಜೀವ ಪಾಟೀಲ ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ ಗೋಕಾಕ ಸಿಪಿಐ ಗೋಪಾಲ ರಾಠೋಡ ನೇತ್ರತ್ವದ ತಂಡವನ್ನು ರಚನೆ ಮಾಡಿದ್ದರು.
ಬೆಳಗಾವಿ ಜಿಲ್ಲಾ ಹೆಚ್ಚುವರಿ ಎಸ್‌ಪಿ ಎಮ್ ವೇಣುಗೋಪಾಲ ಮತ್ತು ಡಿವೈಎಸ್‌ಪಿ ಡಿ ಎಚ್ ಮುಲ್ಲಾ ಮಾರ್ಗದರ್ಶನದಲ್ಲಿ ಗೋಕಾಕ ಸಿಪಿಐ ಗೋಪಾಲ ರಾಠೋಡ ನೇತ್ರತ್ವದ ತಂಡ ತನಿಖೆ ನಡೆಸಿ ಮಹಾರಾಷ್ಟç ಮೂಲದ ೮ಜನ ಆರೋಪಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಹಿನ್ನಲೆ ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಬಂಧಿತರಿAದ ಒಟ್ಟು ೫೫.೬೦ಲಕ್ಷ ರೂಪಾಯಿ ಮೌಲ್ಯದ ೮೧೦ ಗ್ರಾಂ ತೂಕದ ಚಿನ್ನಾಭರಣ ಮತ್ತು ೮.೫ ಕೆ.ಜಿ ತೂಕದ ಬೆಳ್ಳಿಯ ಆಭರಣ ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಪಿಐ ಗೋಪಾಲ ರಾಠೋಡ, ಬೆಳಗಾವಿ ಸಿಇಎನ್ ಪಿಎಸ್‌ಐ ಬಿ ಆರ್ ಗಡ್ಡೇಕಾರ, ಹುಕ್ಕೇರಿ ಪಿಎಸ್‌ಐ ಎಮ್ ಆರ್ ತಹಶೀಲದಾರ, ಗೋಕಾಕ ಗ್ರಾಮೀಣ ಠಾಣೆ ಪಿಎಸ್‌ಐ ಕಿರಣ ಮೊಹಿತೆ, ಗೋಕಾಕ ಶಹರ ಠಾಣೆ ಪಿಎಸ್‌ಐ ಎಮ್ ಡಿ ಘೋರಿ, ಅಂಕಲಗಿ ಠಾಣೆ ಪಿಎಸ್‌ಐ ಎಚ್ ಡಿ ಯರಝರ್ವಿ ಹಾಗೂ ಸಿಬ್ಬಂಧಿಗಳಾದ ಬಿ ವಿ ನೇರ್ಲಿ, ವಿ ಆರ್ ನಾಯಕ, ಡಿ ಜಿ ಕೊಣ್ಣೂರ, ಎಸ್ ವಿ ಕಸ್ತೂರಿ, ಎಸ್ ಬಿ ಮಾನೆಪ್ಪಗೋಳ, ಎಸ್ ಎಚ್ ಈರಗಾರ, ಎಮ್ ಬಿ ಗಿಡ್ಡಗಾರಿ, ಎಮ್ ಎಮ್ ಹಾಲೋಳ್ಳಿ, ಎಸ್ ಎಸ್ ದೇವರ, ಜಿ ಎಚ್ ಗುಡ್ಲಿ, ಎಮ್ ಬಿ ತಳವಾರ, ಎಸ್ ಬಿ ಪೂಜೇರಿ, ಶ್ರೀಮತಿ ಆರ್ ಎಮ್ ತುಬಾಕಿ, ಟೇಕ್ನಿಕಲ್ ಸೇಲ್‌ನ ಸಚೀನ ಪಾಟೀಲ, ಆರ್ ಎಮ್ ತುಬಾಕಿ ಪಾಲ್ಗೊಂಡಿದ್ದರು.
ಬೆಳಗಾವಿ ಜಿಲ್ಲಾ ಹೆಚ್ಚುವರಿ ಎಸ್‌ಪಿ ಎಮ್ ವೇಣುಗೋಪಾಲ ಸಿಪಿಐ ಗೋಪಾಲ ರಾಠೋಡ ನೇತ್ರತ್ವದ ತಂಡವನ್ನು ಮುಕ್ತ ಕಂಠದಿAದ ಶ್ಲಾಘಿಸಿ, ಅಭಿನಂಧಿಸಿ ಮಾತನಾಡಿ, ಬೆಲೆ ಬಾಳುವ ಚಿನ್ನಾಭರಣಗಳನ್ನು ಬ್ಯಾಂಕ ಲಾಕರಗಳಲ್ಲಿ ಇಡುವಂತೆ ಮತ್ತು ಮನೆಯಿಂದ ಹೊರಗಡೆ ಹೋದಾಗ ಲಾಕ್ಡ ಹೌಸಗಳ ಬಗ್ಗೆ ಸರಹದ್ದಿನ ಪೋಲಿಸ್ ಠಾಣೆಗೆ ಮಾಹಿತಿ ನೀಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.


Spread the love

About Yuva Bharatha

Check Also

ಭಗೀರಥರ ಜೀವನವು ಭಕ್ತಿ, ಬದ್ಧತೆ, ಸಾಧನೆ ಮತ್ತು ಶ್ರದ್ಧೆಯಿಂದ ಕೂಡಿದ್ದು ನಾವೆಲ್ಲರೂ ತಪ್ಪದೇ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.- ಡಾ.ಮೋಹನ ಭಸ್ಮೆ.!

Spread the loveಭಗೀರಥರ ಜೀವನವು ಭಕ್ತಿ, ಬದ್ಧತೆ, ಸಾಧನೆ ಮತ್ತು ಶ್ರದ್ಧೆಯಿಂದ ಕೂಡಿದ್ದು ನಾವೆಲ್ಲರೂ ತಪ್ಪದೇ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.- …

Leave a Reply

Your email address will not be published. Required fields are marked *

one + seven =