Breaking News

ಇಟಗಿಯಲ್ಲಿ ಶ್ರೀ ಸಾಯಿನಾಥ ಮಂದಿರದ ಲೋಕಾರ್ಪಣೆ ಅಂಗವಾಗಿ ಧರ್ಮಸಭೆ

Spread the love

ಇಟಗಿಯಲ್ಲಿ ಶ್ರೀ ಸಾಯಿನಾಥ ಮಂದಿರದ ಲೋಕಾರ್ಪಣೆ ಅಂಗವಾಗಿ ಧರ್ಮಸಭೆ

 

ಇಟಗಿ :
ಗ್ರಾಮದಲ್ಲಿ ನೂತನ ಶ್ರೀ ಸಾಯಿನಾಥ ಮಂದಿರದ ಲೋಕಾರ್ಪಣೆ ಅಂಗವಾಗಿ ಧರ್ಮ ಸಭೆ ನಡೆಯಿತು.
ಧರ್ಮ ಸಭೆಯನ್ನು ಶ್ರೀ ಮಹಾಲಕ್ಷ್ಮೀ ಗ್ರುಪ್‌ನ ಅಧ್ಯಕ್ಷ ವಿಠ್ಠಲ ಹಲಗೇಕರ ಧರ್ಮ ಸಭೆ ಉದ್ಘಾಟಿಸಿ ಮಾತನಾಡಿ, ಶಿರಡಿ ಸಾಯಿಬಾಬಾ ಅವರು ಸಮಾಜದ ಭಾವೈಕ್ಯದ ಸಂದೇಶವನ್ನು ಜಗತ್ತಿಗೆ ಸಾರಿದ್ದರು. ಅವರ ತತ್ವಾದರ್ಶಗಳು ಇಂದಿನ ಸಮಾಜಕ್ಕೆ ಬೇಕಾಗಿವೆ ಎಂದರು.
ಪಾರಿಶ್ವಾಡದ ವೇದಮೂರ್ತಿ ಶ್ರೀ ಗುರುಸಿದ್ದಯ್ಯ ಕಲ್ಮಠ ಸ್ವಾಮೀಜಿಯವರಿಂದ 5 ದಿನಗಳ ಕಾಲ ಶ್ರೀ ಸಾಯಿಬಾಬಾರವರ ಜೀವನ ಚರಿತಾಮೃತ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಹಿಡಕಲ್‌ನ ಶ್ರೀ ಪ್ರಭು ಅಡವಿಸಿದ್ದೇಶ್ವರ ಮಹಾಸ್ವಾಮೀಜಿ, ಅವರೊಳ್ಳಿ-ಬೀಳಕಿಯ ಶ್ರೀ ಚೆನ್ನಬಸವ ದೇವರು, ಚಿಕ್ಕಮುನವಳ್ಳಿಯ ಶ್ರೀ ಶಿವಪುತ್ರ ಶ್ರೀಗಳು, ಗದ್ದಿಕರವಿನಕೊಪ್ಪದ ಶ್ರೀ ಚಿದಾನಂದ ಅವಧೂತರು, ಯರಜರ್ವಿ ಶ್ರೀಗಳು ಮಾತನಾಡಿದರು.
ಬಿಜೆಪಿ ಮುಖಂಡ ಬಸವರಾಜ ಸಾಣಿಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಮೋದ ಕೋಚೇರಿ, ಹನಿವೆಲ್ ಇಂಟರ್ ನ್ಯಾಶನಲ್ ಸ್ಕೂಲ್ ಅಧ್ಯಕ್ಷ ಸುಭಾಷ ಗುಳಶೆಟ್ಟಿ, ಪ್ರವಾಸೋದ್ಯಮ ನಿರ್ದೇಶಕ ಶ್ರೀಕಾಂತ ಇಟಗಿ, ಬಿಜೆಪಿ ಮುಖಂಡರಾದ ಜ್ಯೋತಿಬಾ ರೇಮಾಣಿ, ಸುಂದರ ಕುಲಕರ್ಣಿ, ಸಂತೋಷ ಕಿಳೋಜಿ, ಆಕಾಶ ಅಥಣಿಕರ, ಅಭಿಜೀತ ಶಾಂಡಿಲ್ಕರ್, ಬಿಷ್ಠಪ್ಪ ಬನೋಶಿ ಹಾಗೂ ಇತರರು ಉಪಸ್ಥಿತರಿದ್ದರು.
ಈರಣ್ಣ ಕಾದ್ರೋಳ್ಳಿ ನಿರೂಪಿಸಿ, ವಂದಿಸಿದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

3 + eighteen =