Breaking News

ರಾಜ್ಯಾದ್ಯಂತ ದಾಖಲೆ ಪ್ರಮಾಣದ ಮತದಾನದ ಜಿಲ್ಲಾವಾರು ಮಾಹಿತಿ

Spread the love

ರಾಜ್ಯಾದ್ಯಂತ ದಾಖಲೆ ಪ್ರಮಾಣದ ಮತದಾನದ ಜಿಲ್ಲಾವಾರು ಮಾಹಿತಿ

ಬೆಂಗಳೂರು :
ರಾಜ್ಯ ವಿಧಾನಸಭೆ ಚುನಾವಣೆಗೆ ದಾಖಲೆಯ ಮತದಾನವಾಗಿದೆ. ಕಳೆದ ಬಾರಿಗಿಂತಲೂ ಶೇಕಡಾವಾರು ಪ್ರಮಾಣ ಈ ಬಾರಿ ಹೆಚ್ಚಾಗಿದೆ. ಈ ಬಾರಿ 72.67%ರಷ್ಟು ಮತದಾನವಾಗಿದೆ.

2018 ರ ಚುನಾವಣೆಯಲ್ಲಿ 72.44%ರಷ್ಟು ಮತದಾನವಾಗಿತ್ತು. 2013ರ ಚುನಾವಣೆಯಲ್ಲಿ 71.83ರಷ್ಟು ಮತದಾನವಾಗಿತ್ತು. ಆರಂಭದಲ್ಲಿ ಮತದಾರರಲ್ಲಿ ಮಾಡಲು ನಿರುತ್ಸಾಹ ಕಂಡು ಬಂದಿತ್ತು, ಆದರೆ ಸಮಯ ಕಳೆದಂತೆ ಮತದಾರರು ಮತದಾನ ಕೇಂದ್ರಗಳತ್ತ ಆಗಮಿಸಿ, ಮತದಾನವನ್ನು ಮಾಡಿದ್ದಾರೆ. ಆದರೆ ಬೆಂಗಳೂರು ನಗರ ಮತದಾರರು ಮಾತ್ರ ಈ ಬಾರಿಯೂ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ಈ ಬಾರಿಯೂ ಬೃಹನ್‌ ಬೆಂಗಳೂರು ನಗರದಲ್ಲಿ ಮತದಾನ ಶೇ.60 ದಾಟಿಲ್ಲ. ಬುಧವಾರ ನಡೆದ ಮತದಾನದ ವೇಳೆ ಅಲ್ಲಲ್ಲಿ ಸಣ್ಣ ಪುಟ್ಟ ಗಲಾಟೆ, ಹಾಗೂ ಮತ ಯಂತ್ರಗಳ ದೋಷವನ್ನು ಹೊರತು ಪಡಿಸಿ ಮತದಾನ ಬಹುತೇಕವಾಗಿ ಶಾಂತಿಯುತವಾಗಿತ್ತು.
ಜಿಲ್ಲಾವಾರು ಮತದಾನದ ಪ್ರಮಾಣದ ವಿವರಗಳು ಈ ಕೆಳಗಿನಂತಿವೆ.

1 ಬೆಳಗಾವಿ-76.33
2 ಬಾಗಲಕೋಟೆ-74.63
3 ವಿಜಯಪುರ-70.78
4 ಕಲಬುರ್ಗಿ-65.22
5 ಯಾದಗಿರಿ-66.66
6 ಬೀದರ-71.66
7 ರಾಯಚೂರು-69.79
8 ಕೊಪ್ಪಳ-77.25
9 ಗದಗ 75.21
10 ಧಾರವಾಡ-71.02
11 ಉತ್ತರ ಕನ್ನಡ -76.72
12 ಹಾವೇರಿ- 81.17
13 ವಿಜಯನಗರ-77.62
14 ಬಳ್ಳಾರಿ-76.13
15 ಚಿತ್ರದುರ್ಗ-80.37
16 ದಾವಣಗೆರೆ-77.47
17 ಶಿವಮೊಗ್ಗ -77.22
18 ಉಡುಪಿ -78.46
19 ಚಿಕ್ಕಮಗಳೂರು-77.89
20 ತುಮಕೂರು-83.46
21 ಚಿಕ್ಕಬಳ್ಳಾಪುರ-85.83
22 ಕೋಲಾರ-81.22
23 ಬೆಂಗಳೂರು ನಗರ-56.98
24 ಬೆಂಗಳೂರು ಗ್ರಾಮಾಂತರ-83.76
25 ಬಿಬಿಎಂಪಿ (ಉತ್ತರ)-52.88
26 ಬಿಬಿಎಂಪಿ (ಕೇಂದ್ರ)-55.39
27 ಬಿಬಿಎಂಪಿ (ದಕ್ಷಿಣ)-52.80
28 ರಾಮನಗರ-84.98
29 ಮಂಡ್ಯ-84.36
30 ಹಾಸನ-81.59
31 ದಕ್ಷಿಣ ಕನ್ನಡ -76.15
32 ಕೊಡಗು-74.74
33 ಮೈಸೂರು-75.04
34 ಚಾಮರಾಜನಗರ-80.81
ಒಟ್ಟು 72.67


Spread the love

About Yuva Bharatha

Check Also

ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ

Spread the love ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ …

Leave a Reply

Your email address will not be published. Required fields are marked *

three × 4 =