Breaking News

ಗ್ಯಾರಂಟಿ ವಾರಂಟಿ ಇಲ್ಲದ ಕಾರ್ಡುಗಳನ್ನು ನಂಬಬೇಡಿ : ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ

Spread the love

ಗ್ಯಾರಂಟಿ ವಾರಂಟಿ ಇಲ್ಲದ ಕಾರ್ಡುಗಳನ್ನು ನಂಬಬೇಡಿ : ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ

ಯುವ ಭಾರತ ಸುದ್ದಿ ಗೋಕಾಕ :
ಸತತವಾಗಿ ಆರು ಬಾರಿ ರಮೇಶ ಜಾರಕಿಹೊಳಿ ಅವರಿಗೆ ಆಶೀರ್ಧಿಸುತ್ತಿರುವ ಮತದಾರರು ಈ ಬಾರಿಯೂ ತಮ್ಮ ಅಮೂಲ್ಯವಾದ ಮತವನ್ನು ನೀಡುವ ಮೂಲಕ ಅತಿ ಹೆಚ್ಚು ಮತಗಳ ಅಂತರದಿಂದ ಆಯ್ಕೆ ಮಾಡುವಂತೆ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹೇಳಿದರು.

ಅವರು, ಶುಕ್ರವಾರ ಸಂಜೆ ನಗರದ ಆದಿತ್ಯ ನಗರ, ಕುರುಬರ ದಡ್ಡಿ, ಆಶ್ರಯ ಬಡಾವಣೆ, ಜನತಾ ಕಾಲೋನಿ, ಮಹಾಲಿಂಗೇಶ್ವರ ನಗರಗಳಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರ ಪರವಾಗಿ ಮತಯಾಚನೆ ಮಾಡುತ್ತ ಮಾತನಾಡಿದರು.

ರಮೇಶ ಜಾರಕಿಹೊಳಿ ಅವರ ಅಧಿಕಾರವದಿಯಲ್ಲಿ ಕ್ಷೇತ್ರ ಅಭಿವೃದ್ಧಿಯೊಂದಿಗೆ ಶಾಂತಿ ನೆಮ್ಮದಿಯಿಂದಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಈ ಬಾರಿಯೂ ತಮ್ಮ ಮತಗಳನ್ನು ನೀಡಿ, ವಿರೋಧಿಗಳ ಅಪಪ್ರಚಾರಕ್ಕೆ ಕಿವಿಗೊಡದೆ ಗ್ಯಾರೆಂಟಿ ವಾರಂಟಿ ಇಲ್ಲದ ಕಾರ್ಡುಗಳನ್ನು ನಂಬಬೇಡಿ. ಪ್ರಧಾನಿ ಮೋದಿಯವರ ನೇತ್ರತ್ವದಲ್ಲಿ ದೇಶ ಬಲಿಷ್ಠಗೊಳ್ಳುತ್ತಿದ್ದು. ಬಿಜೆಪಿಯನ್ನು ಬೆಂಬಲಿಸಿ ಮೋದಿಯವರ ಕೈ ಬಲಪಡಿಸುವಂತೆ ಕರೆ ನೀಡಿದರು.

ಮಲ್ಲಿಕಸಾಬ ಜಮಾದಾರ ಮಾತನಾಡಿ, ರಮೇಶ ಜಾರಕಿಹೊಳಿ ಅವರು ಎಲ್ಲ ಧರ್ಮಿಯರನ್ನು ಗೌರವಿಸಿ, ಸಮಾನತೆಯಿಂದ ಕಾಣುತ್ತಿದ್ದಾರೆ. ಸಮನ್ವಯತೆಯ ಬದುಕಿಗಾಗಿ ನಾವೆಲ್ಲರೂ ರಮೇಶ ಜಾರಕಿಹೊಳಿ ಅವರಿಗೆ ನಮ್ಮ ಮತಗಳನ್ನು ನೀಡೋಣ ಎಂದು ಹೇಳಿದರು.

ನಗರಸಭೆ ಸ್ಥಾಯಿ ಸಮಿತಿಯ ಚೇರಮನ್ ಸಿದ್ದಪ್ಪ ಹುಚ್ಚರಾಮಗೋಳ, ಸದಸ್ಯರುಗಳಾದ ಜಯಶ್ರೀ ಮಾಳಗಿ, ಹರೀಶ ಬೂದಿಹಾಳ, ಜಯಶ್ರೀ ಸಾಯನ್ನವರ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಮಹಿಳಾ ಮೋರ್ಚ ಅಧ್ಯಕ್ಷೆ ರಾಜೇಶ್ವರಿ ಒಡೆಯರ, ಮುಖಂಡರುಗಳಾದ ಬಸವರಾಜ ಸಾಯನ್ನವರ, ಅಶೋಕ ಸಾಯನ್ನವರ, ಲಕ್ಷ್ಮಣ ಖಡಕಬಾಂವಿ, ಎಮ್ ಬಿ ಸಾಯನ್ನವರ, ತಾಹೀರ ಮುಲ್ಲಾ, ಜಕಾತಿ, ಕೆಂಚಪ್ಪ ಗೌಡರ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

15 + 19 =