ಸಂತಿಬಸ್ತವಾಡ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಸಂತಿ ಬಸ್ತವಾಡ : ಸಂತಿಬಸ್ತವಾಡ ಗ್ರಾಮ ಪಂಚಾಯತ್ ಎರಡನೆಯ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಚುನಾವಣಾಧಿಕಾರಿಯಾಗಿ ಸುಭಾಷ ನಾಯಕ ಲೋಕೊಪಯೋಗಿ ಇಲಾಖೆಯ ಇಂಜಿನಿಯರ್ ಕಾರ್ಯ ನಿರ್ವಹಿಸಿದರು.
ಅಧ್ಯಕ್ಷರಾಗಿ ಲಕ್ಷ್ಮೀ ಪರಶುರಾಮ ಚನ್ನಿಕುಪ್ಪಿ ಮತ್ತು ಮಲ್ಪೂರಿ ಕಲ್ಲಪ್ಪ ಜಿಡ್ಡಿಮನಿ ಉಪಾಧ್ಯಕ್ಷರಾಗಿ ಜಯ ಗಳಿಸಿದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಭಾರತೀಯ ಜನತಾ ಪಾರ್ಟಿಯ ಪ್ಯಾನಲ್ ನವರು ಆಯ್ಕೆ ಆದರು.
ರಮೇಶ ಜಾರಕಿಹೊಳಿರವರ ಬೆಂಬಲದಿಂದ ಸಂತಿಬಸ್ತವಾಡ ಗ್ರಾಮ ಪಂಚಾಯಿತ ಬಿಜೆಪಿಯ ತೆಕ್ಕೆಗೆ ಬಂದಿದೆ. ಈ ಚುನಾವಣೆಯ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನ 15 ಸದಸ್ಯರು ಹಾಜರಿದ್ದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮಲಾ ಪೂಜೇರಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.
YuvaBharataha Latest Kannada News