Breaking News

ಬಸವ ಜಯಂತಿ ಅಂಗವಾಗಿ ಪ್ರಬಂಧ ಸ್ಪರ್ಧೆ : ಮಹತ್ವದ ಸೂಚನೆ

Spread the love

ಬಸವ ಜಯಂತಿ ಅಂಗವಾಗಿ ಪ್ರಬಂಧ ಸ್ಪರ್ಧೆ : ಮಹತ್ವದ ಸೂಚನೆ

ಯುವ ಭಾರತ ಸುದ್ದಿ ಬೆಳಗಾವಿ :
ಅಖಿಲ ಭಾರತ ಲಿಂಗಾಯತ ಮಹಾಸಭೆಯು ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ ಆಚರಣೆ ನಿಮಿತ್ತ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಮತ್ತು ಎಲ್ಲ ವಯೋಮಿತ ಹಿರಿಯ ನಾಗರಿಕರಿಗೆ ಐದು ವಿಭಾಗಗಳಲ್ಲಿ ಪ್ರಬಂಧ ಸ್ಪರ್ಧೆಯನ್ನು ಏಪ್ರಿಲ್ 5 ರಂದು ಬೆಳಗ್ಗೆ 10.30 ಗಂಟೆಗೆ ಕೆಎಲ್‌ಇ ಸಂಸ್ಥೆಯ ಬೆಳಗಾವಿಯ ಜಿ. ಎ. ಪ್ರೌಢಶಾಲೆಯಲ್ಲಿ ಆಯೋಜಿಸಿದೆ.
ಪ್ರಾಥಮಿಕ ವಿಭಾಗದಲ್ಲಿ ‘ಬಸವಣ್ಣನವರ ಬಾಲ್ಯ ಜೀವನ’, ಮಾಧ್ಯಮಿಕ ವಿಭಾಗಕ್ಕೆ ‘ಕಲ್ಯಾಣ ಪಟ್ಟಣದ ಅನುಭವ ಮಂಟಪ ಮತ್ತು ಮಹಾಮನೆ’, ಪದವಿಪೂರ್ವ ವಿಭಾಗಕ್ಕೆ ‘ಮಹಾತ್ಮ ಬಸವಣ್ಣನವರ ವೈಚಾರಿಕತೆ’, ಪದವಿ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ‘ಕಲ್ಯಾಣಕ್ರಾಂತಿಯ ಪ್ರಾಮುಖ್ಯತೆ’, ಹಾಗೂ ಎಲ್ಲ ವಯೋಮಾನದವರಿಗೆ ‘ಯುಗದ ಉತ್ಸಾಹ ಬಸವಣ್ಣ’ ವಿಭಾಗವಾರು ವಿಷಯಗಳನ್ನು ನೀಡಲಾಗಿದೆ. ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ಬಸವ ಜಯಂತಿಯಂದು ವಿತರಿಸಲಾಗುವುದು.
ಆಸಕ್ತ ಸ್ಪರ್ಧಾಳುಗಳು ದಿನಾಂಕ ಏ.4 ರ ಒಳಗಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ, ಲಿಂಗಾಯತ ಭವನದಲ್ಲಿ ಹೆಸರನ್ನು ನೋಂದಾಯಿಸಬಹುದು ಅಥವಾ ಕಾರ್ಯಾಲಯದ ಪ್ರವೀಣ ತೆವರಿ ಮೊ.ನಂ. 9164345208 ಇವರನ್ನು ಸಂಪರ್ಕಿಸುವಂತೆ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

3 × three =