Breaking News

ಬಿಜೆಪಿಯ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; 52 ಮಂದಿ ಹೊಸಬರಿಗೆ ಮಣೆ, ಬೊಮ್ಮಾಯಿ, ಕಾಗೇರಿಗೆ ಟಿಕೆಟ್‌ ಘೋಷಣೆ

Spread the love

ಬಿಜೆಪಿಯ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; 52 ಮಂದಿ ಹೊಸಬರಿಗೆ ಮಣೆ, ಬೊಮ್ಮಾಯಿ, ಕಾಗೇರಿಗೆ ಟಿಕೆಟ್‌ ಘೋಷಣೆ

ಯುವ ಭಾರತ ಸುದ್ದಿ ದೆಹಲಿ:
ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ (BJP) ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, 189 ಮಂದಿ ಅಭ್ಯರ್ಥಿಗಳಿಗೆ ಟಿಕೆಟ್ ಪ್ರಕಟಿಸಲಾಗಿದೆ.
ಮಂಗಳವಾರ ರಾತ್ರಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಹೈಕಮಾಂಡ್ ಮೊದಲ ಪಟ್ಟಿ ಬಿಡುಗಡೆ ಮಾಡಿದೆ ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಗಳಾದ ಧರ್ಮೇಂದ್ರ ಪ್ರಧಾನ್, ಮನ್ಸುಖ್ ಮಾಂಡವೀಯ, ರಾಜ್ಯ ಬಿಜೆಪಿ ಸಹ ಚುನಾವಣಾ ಉಸ್ತುವಾರಿ ಕೆ.ಅಣ್ಣಾ ಮಲೈ, ಕೇಂದ್ರ ಗಣಿ ಇಲಾಖೆ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗೋಷ್ಠಿಯಲ್ಲಿದ್ದರು.
52 ಹೊಸ ಮುಖಗಳಿಗೆ ಮಣೆ
ಪ್ರಸಕ್ತ ಚುನಾವಣೆಯಲ್ಲಿ 52 ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್​ ನೀಡಿದೆ. ಒಬಿಸಿ 32, ಎಸ್​ಸಿ 30, ಎಸ್​ಟಿ 16 ಹಾಗೂ 9 ವೈದ್ಯರು, ಒಬ್ಬ ನಿವೃತ್ತ ಐಎಎಸ್, ಒಬ್ಬ ಐಪಿಎಸ್ ಅಧಿಕಾರಿಗಳಿಗೆ ಟಿಕೆಟ್ ನೀಡಲಾಗಿದೆ. 8 ಮಂದಿ ಮಹಿಳೆಯರು, ಐವರು ವಕೀಲರು, ಮೂವರು ಶಿಕ್ಷಕರು, 9 ಸ್ನಾತಕೋತ್ತರ ಪದವೀಧರರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಲಾಗಿದೆ.
ಯಾರಿಗೆಲ್ಲ ಟಿಕೆಟ್?
ಕ್ಷೇತ್ರ – ಅಭ್ಯರ್ಥಿ
ಶಿಗ್ಗಾಂವಿ -ಬಸವರಾಜ ಬೊಮ್ಮಾಯಿ
ನಿಪ್ಪಾಣಿ – ಶಶಿಕಲಾ ಜೊಲ್ಲೆ
ಚಿಕ್ಕೋಡಿ – ರಮೇಶ್ ಕತ್ತಿ
ಅಥಣಿ – ಮಹೇಶ್ ಕುಮಟಳ್ಳಿ
ಕಾಗವಾಡ –ಶ್ರೀಮಂತ ಪಾಟೀಲ
ಕುಡಚಿ – ಪಿ.ರಾಜೀವ್
ರಾಯಬಾಗ – ದುರ್ಯೋಧನ ಐಹೊಳೆ
ಹುಕ್ಕೇರಿ – ನಿಖಿಲ್ ಕತ್ತಿ
ಅರಬಾವಿ – ಬಾಲಚಂದ್ರ ಜಾರಕಿಹೊಳಿ
ಗೋಕಾಕ – ರಮೇಶ್ ಜಾರಕಿಹೊಳಿ
ಕಿತ್ತೂರು -ಮಹಾಂತೇಶ ದೊಡಗೌಡರ
ಬೈಲಹೊಂಗಲ – ಜಗದೀಶ ಮೆಟಗುಡ್ಡ
ಸವದತ್ತಿ ಯಲ್ಲಮ್ಮ – ರತ್ನಾ ಮಾಮನಿ
ರಾಮದುರ್ಗ – ಚಿಕ್ಕರೇವಣ್ಣ
ಮುಧೋಳ – ಗೋವಿಂದ ಕಾರಜೋಳ
ಬೆಳಗಾವಿ ಉತ್ತರ – ರವಿ ಪಾಟೀಲ
ಬೆಳಗಾವಿ ದಕ್ಷಿಣ – ಅಭಯ ಪಾಟೀಲ
ಬೆಳಗಾವಿ ಗ್ರಾಮೀಣ – ನಾಗೇಶ ಮನ್ನೊಳ್ಕರ,
ವಿಜಯನಗರ – ಸಿದ್ದಾರ್ಥ ಸಿಂಗ್​
ಬಳ್ಳಾರಿ ಗ್ರಾಮಾಂತರ – ಬಿ.ಶ್ರೀರಾಮುಲು
ಬಳ್ಳಾರಿ ನಗರ – ಸೋಮಶೇಖರ ರೆಡ್ಡಿ
ಹೊನ್ನಾಳಿ – ಎಂ.ಪಿ.ರೇಣುಕಾಚಾರ್ಯ
ಶಿಕಾರಿಪುರ –ಬಿ.ವೈ.ವಿಜಯೇಂದ್ರ
ಉಡುಪಿ – ಯಶ್​ಪಾಲ್​​ ಸುವರ್ಣ
ಕಾರ್ಕಳ – ವಿ.ಸುನೀಲಕುಮಾರ
ಚಿಕ್ಕಮಗಳೂರು – ಸಿ.ಟಿ.ರವಿ
ಚಿಕ್ಕನಾಯಕಹಳ್ಳಿ – ಜೆ.ಸಿ.ಮಾಧುಸ್ವಾಮಿ
ತಿಪಟೂರು – ಬಿ.ಸಿ.ನಾಗೇಶ
ತುಮಕೂರು – ಜ್ಯೋತಿ ಗಣೇಶ
ಕೊರಟಗೆರೆ – ಅನಿಲಕುಮಾರ(ನಿವೃತ್ತ ಐಎಎಸ್ ಅಧಿಕಾರಿ)
ಅಫಜಲಪುರ-ಮಾಲೀಕಯ್ಯ ಗುತ್ತೇದಾರ್​
ಕಲಬುರಗಿ.ಗ್ರಾ – ಬಸವರಾಜ
ಕಲಬುರಗಿ ದಕ್ಷಿಣ – ದತ್ತಾತೇಯ ಪಾಟೀಲ
ಕಲಬುರಗಿ ಉತ್ತರ – ಚಂದ್ರಕಾಂತ ಪಾಟೀಲ
ಅಳಂದ-ಸುಭಾಷ ಗುತ್ತೇದಾರ್
ಔರಾದ್ – ಪ್ರಭು ಚೌಹಾಣ್​
ರಾಯಚೂರು ಗ್ರಾಮಾಂತರ – ತಿಪ್ಪರಾಜು ಹವಲ್ದಾರ
ರಾಯಚೂರು-ಶಿವರಾಜ ಪಾಟೀಲ
ಸಿಂಧನೂರು – ಕೆ.ಕರಿಯಪ್ಪ
ಮಸ್ಕಿ – ಪ್ರತಾಪಗೌಡ ಪಾಟೀಲ
ಕನಕಗಿರಿ – ಬಸವರಾಜ ದಡೇಸುಗೂರು
ನರಗುಂದ – ಶಂಕರ ಪಾಟೀಲ
ಧಾರವಾಡ – ಅಮೃತ ದೇಸಾಯಿ
ಹಳಿಯಾಳ – ಸುನೀಲ ಹೆಗಡೆ
ಕಾರವಾರ -ರೂಪಾಲಿ ನಾಯ್ಕ್​
ಶಿರಸಿ – ವಿಶ್ವೇಶ್ವರ ಹೆಗಡೆ ಕಾಗೇರಿ
ವಿಜಯಪುರ – ಬಸನಗೌಡ ಪಾಟೀಲ ಯತ್ನಾಳ
ಚಿಕ್ಕಬಳ್ಳಾಪುರ – ಡಾ.ಕೆ.ಸುಧಾಕರ​​
ಕೋಲಾರ – ವರ್ತೂರು ಪ್ರಕಾಶ್
ಯಲಹಂಕ – ಎಸ್.ಆರ್.ವಿಶ್ವನಾಥ್
ಕೆ.ಆರ್.ಪುರಂ – ಭೈರತಿ ಬಸವರಾಜು
ಯಶವಂತಪುರ – ಎಸ್.ಟಿ.ಸೋಮಶೇಖರ
ರಾಜರಾಜೇಶ್ವರಿನಗರ – ಮುನಿರತ್ನ ನಾಯ್ಡು
ಮಹಾಲಕ್ಷ್ಮೀ ಲೇಔಟ್ – ಕೆ.ಗೋಪಾಲಯ್ಯ
ಮಲ್ಲೇಶ್ವರಂ – ಡಾ.ಸಿ.ಎನ್.ಅಶ್ವತ್ಥ್ ನಾರಾಯಣ
ಗಾಂಧಿನಗರ – ಸಪ್ತಗಿರಿ ಗೌಡ
ಚಾಮರಾಜಪೇಟೆ – ಭಾಸ್ಕರ ರಾವ್(ನಿವೃತ್ತ IPS ಅಧಿಕಾರಿ)
ಬಸವನಗುಡಿ – ರವಿ ಸುಬ್ರಹ್ಮಣ್ಯ
ಪದ್ಮನಾಭನಗರ – ಆರ್.ಅಶೋಕ್​
ಆನೇಕಲ್ – ಹುಲ್ಲಳ್ಳಿ ಶ್ರೀನಿವಾಸ
ಹೊಸಕೋಟೆ – ಎಂಟಿಬಿ ನಾಗರಾಜ್
ರಾಜಾಜಿನಗರ – ಎಸ್.ಸುರೇಶಕುಮಾರ
ಕನಕಪುರ – ಆರ್.ಅಶೋಕ್​
ಚನ್ನಪಟ್ಟಣ – ಸಿ.ಪಿ.ಯೋಗೇಶ್ವರ​
ಕೆ.ಆರ್.ಪೇಟೆ – ಕೆ.ಸಿ.ನಾರಾಯಣಗೌಡ
ಹಾಸನ – ಪ್ರೀತಂ ಗೌಡ
ಚಾಮರಾಜನಗರ – ವಿ. ಸೋಮಣ್ಣ
ವರುಣಾ – ವಿ. ಸೋಮಣ್ಣ
ಬೆಳ್ತಂಗಡಿ – ಹರೀಶ್ ಪೂಂಜಾ
ಬಂಟ್ವಾಳ – ರಾಜೇಶ ನಾಯಕ
ಪುತ್ತೂರು – ಆಶಾ ತಿಮ್ಮಪ್ಪ
ಮಡಿಕೇರಿ – ಅಪ್ಪಚ್ಚು ರಂಜನ್
ವಿರಾಜಪೇಟೆ – ಕೆ.ಜಿ.ಬೋಪಯ್ಯ)
ನಂಜನಗೂಡು – ಡಾ. ಹರ್ಷವರ್ಧನ್


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

18 − 5 =