Breaking News

ಕುರುಬ ಸಮಾಜಕ್ಕೆ 40 ಸ್ಥಾನ ನೀಡಲು ಒತ್ತಾಯ

Spread the love

ಕುರುಬ ಸಮಾಜಕ್ಕೆ 40 ಸ್ಥಾನ ನೀಡಲು ಒತ್ತಾಯ

ಯುವ ಭಾರತ ಸುದ್ದಿ‌ ಬೆಂಗಳೂರು : 2023ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಿಯಲ್ಲಿ ಕುರುಬ ಸಮುದಾಯಕ್ಕೆ ಮೂರು (ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್) ರಾಜಕೀಯ ಪಕ್ಷಗಳು ಕನಿಷ್ಠ 40 ಕ್ಷೇತ್ರಗಳಲ್ಲಿ ಟಿಕೆಟ್ ನೀಡುವಂತೆ ಒತ್ತಾಯ ಕೇಳಿ ಬಂದಿದೆ.

ಕರ್ನಾಟಕದಲ್ಲಿ ಪ್ರಬಲ ಜಾತಿಗಳ ಪೈಕಿ 3ನೇ ಸ್ಥಾನದಲ್ಲಿರುವ ಕುರುಬ ಸಮುದಾಯವು ಸುಮಾರು 75 ಅಧಿಕ ಜನಸಂಖ್ಯೆ ಹೊಂದಿದೆ, ರಾಜ್ಯದ 150 ಕ್ಕೂ ಹೆಚ್ಚಿನ ವಿಧಾನಸಭಾ ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ಮತದಾರರು ಅಭ್ಯರ್ಥಿಗಳನ್ನು ಗೆಲ್ಲಸುವಲ್ಲಿ ನಿರ್ಣಾಯಕರಾಗಿದ್ದಾರೆ. ರಾಜ್ಯದಲ್ಲಿ 40 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕುರುಬ ಸಮಾಜದ ಅಭ್ಯರ್ಥಿಗಳು ಗೆಲ್ಲುವ ಸಾಮರ್ಥ್ಯ ಇದ್ದರೂ ಕಳೆದ ಹಲವು ದಶಕಗಳಂದ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಸೂಕ್ತ ಪ್ರಾತಿನಿಧ್ಯ ನೀಡದೇ ಸಮಾಜವನ್ನು ಕೇವಲ ಮತದಾನಕ್ಕಾಗಿ ಉಪಯೋಗಿಸಿಕೊಳ್ಳುತ್ತಿವೆ. ಸಮಾಜದ ಅಭ್ಯರ್ಥಿಗಳು ಗೆಲ್ಲುವ ಕಡೆಗೂ ಟಿಕೆಟ್ ನೀಡದೇ ಇರುವುದು ನಮ್ಮನ್ನು ಜಾಗೃತಗೊಳಿಸಿದೆ. ಆದ್ದರಿಂದ ಈ ಬಾರಿಯ 2023ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ನಮ್ಮ ಸಮಾಜದ ಕನಿಷ್ಠ 40 ಆಕಾಂಕ್ಷಿಗಳನ್ನ ಗುರುತಿಸಿ ಗೆಲ್ಲುವಂತಹ ಕ್ಷೇತ್ರಗಳಲ್ಲಿ ಟಿಕೆಟ್ ನೀಡಬೇಕು ಎಂದು ಕುರುಬ ಸಮಾಜದ ನಾಯಕರು ಒತ್ತಾಯಿಸಿದ್ದಾರೆ.

ತನ್ನದೇ ರಾಜಕೀಯ ಹಿನ್ನೆಲೆ ಹೊಂದಿರುವ ಸ್ವಾತಂತ್ರ್ಯ ಸಂದರ್ಭದಲ್ಲಿ 1951 ರಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿದ್ದ ಕೊಲ್ಲೂರು ಮಲ್ಲಪ್ಪ ಅವರು ಸುರಪುರ ಕ್ಷೇತ್ರದಿಂದ ಪ್ರಥಮ ಬಾರಿಗೆ ಆಯ್ಕೆಯಾಗುವ ಮೂಲಕ ಕುರುಬ ಸಮುದಾಯವನ್ನು ಪ್ರತಿನಿಧಿಸಿದರು. ಅಲ್ಲಿಂದೀಚೆಗೆ ಮದ್ರಾಸ್ ಪ್ರಾಂತ್ಯದಲ್ಲಿ ನಾಗನಗೌಡ, ಟಿ. ಮರಿಯಪ್ಪ, ವೈ.ರಾಮಚಂದ್ರ, ನಂತರ ಎರಡು ಬಾರಿ ಉಪಮುಖ್ಯಮಂತ್ರಿಯಾಗಿ, ಒಂದು ಬಾರಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರವರೆಗೂ ಹಲವು ಮಂದಿ ರಾಜಕೀಯ ನೇತಾರರು ಕುರುಬ ಸಮುದಾಯದ ಪ್ರಾತಿನಿಧ್ಯ ವಹಿಸಿ, ರಾಜ್ಯಕ್ಕೆ ತಮ್ಮದೇ ಕೊಡುಗೆಗಳನ್ನು ನೀಡಿದ್ದಾರೆ. ಒಟ್ಟಾರೆಯಾಗಿ 1952 ರಿಂದ 2018ರ ವರೆಗೆ 15 ವಿಧಾನಸಭಾ ಚುನಾವಣೆ ಹಾಗೂ ಎರಡು ಉಪಚುನಾವಣೆಗಳಲ್ಲಿ ಕುರುಬ ಸಮಾಜದ ನಾಯಕರು ವಿಧಾನಸಭೆ ಪ್ರವೇಶಿಸಿದ್ದಾರೆ. ಅಲ್ಲದೇ 2019ರ ವರೆಗೆ ಲೋಕಸಭಾ ಚುನಾವಣೆಗೂ ಸ್ಪರ್ಧಿಸಿದ್ದಾರೆ.

ರಾಜ್ಯದ 30 ಅಂದಾಜಿನಂತೆ ಕುರುಬ ಸಮುದಾಯಕ್ಕೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಇತರೆ ಜಿಲ್ಲೆಗಳ ಪೈಕಿ, ಎಲ್.ಜಿ. ಹಾವನೂರು ವರದಿಯ ರಾಜಕೀಯ ಪಕ್ಷಗಳಿಂದ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಸಿಕ್ಕಿಲ್ಲ. ಈಗಾಗಲೇ ಕೆಲವು ಕ್ಷೇತ್ರಗಳಲ್ಲಿ ಜಯ ಸಾಧಿಸಿರುವ ರಾಜಕೀಯ ನಾಯಕರು ತಮ್ಮ ವರ್ಚಸ್ಸಿನಿಂದಲೇ ಗೆದ್ದು ಬಂದವರಾಗಿದ್ದಾರೆ. ಉಳಿದವರು ಗೆಲ್ಲಲು ಶಕ್ತರಾಗಿದ್ದರೂ ಟಿಕೆಟ್ ವಂಚಿತರಾಗಿ ರಾಜಕೀಯವಾಗಿ ಸ್ಥಾನಮಾನ ಕಳೆದುಕೊಳ್ಳುವಂತಾಗಿದೆ. ಕುರುಬ ಸಮಾಜದ ಮತದಾರರು ರಾಜ್ಯಾದ್ಯಂತ ಹರಡಿರುವುದರಿಂದ 2023 ರ ಚುನಾವಣೆಯಲ್ಲಿ ಈ ಹಿಂದಿನಂತೆ ಅನ್ಯಾಯ ಮುಂದುವರಿಯಬಾರದು.

2008 ರಲ್ಲಿ ಸಿದ್ದರಾಮಯ್ಯರವರು ಸೇರಿ ಒಟ್ಟು 6 ಮಂದಿ ಶಾಸಕರಾಗಿದ್ದರು, 2013 ರಲ್ಲಿ 14 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದರು. 2018 ರಲ್ಲಿ 12 ಮಂದಿ ಆಯ್ಕೆಯಾಗಿದ್ದರು. ಇವರಲ್ಲಿ ಕಾಂಗ್ರೆಸ್‌ನ 8 ಮಂದಿ, ಒಬ್ಬರು ಬಿಜೆಪಿ ಮತ್ತು ಇಬ್ಬರು ಜೆಡಿಎಸ್‌ನಿಂದ ಹಾಗೂ ಪಕ್ಷೇತರರಾಗಿ ಒಬ್ಬರು ಆಯ್ಕೆಯಾಗಿದ್ದರು. 2018 ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ 20 ಮಂದಿ, ಜೆಡಿಎಸ್ ಪಕ್ಷದಿಂದ 11 ಮಂದಿ, ಬಿಜೆಪಿ ಪಕ್ಷದಿಂದ 5 ಮಂದಿಗೆ ಟಿಕೆಟ್ ನೀಡಿದ್ದು, ಅದರಲ್ಲೂ ಕುರುಬರಿಗೆ ಅನ್ಯಾಯವಾಗಿದೆ.

ಮಾಧ್ಯಮಗಳ ವರದಿಗಳ ಪ್ರಕಾರ ಸಿದ್ದರಾಮಯ್ಯರವರ ಅವಧಿಯ ಸರ್ಕಾರದಲ್ಲಿ ನಡೆಸಲಾದ ಜಾತಿ ಗಣತಿ 2016 ರ ಆಧಾರದಲ್ಲಿ ಕುರುಬರ ಸಂಖ್ಯೆ ಬಿಜೆಪಿ, ಜೆಡಿಎಸ್‌ ಪಕ್ಷಗಳಿಂದ ಕನಿಷ್ಠ 40 ಮಂದಿಗೆ ಟಿಕೆಟ್ ನೀಡಬೇಕು ಎಂದು ಪಕ್ಷಾತೀತವಾಗಿ ಕರ್ನಾಟಕ ಪ್ರದೇಶ ಕುರುಬರ ಸಂಘ ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರು ಹಾಗೂ ಮುಖಂಡರನ್ನು ಆಗ್ರಹಿಸಿದೆ.


Spread the love

About Yuva Bharatha

Check Also

ಸಿಎಂ ಆದೇಶ : ಗಾಣಿಗ ಅಭಿವೃದ್ಧಿ ನಿಗಮ ಅಸ್ತಿತ್ವಕ್ಕೆ

Spread the loveಸಿಎಂ ಆದೇಶ : ಗಾಣಿಗ ಅಭಿವೃದ್ಧಿ ನಿಗಮ ಅಸ್ತಿತ್ವಕ್ಕೆ ಯುವ ಭಾರತ ಸುದ್ದಿ ಬೆಂಗಳೂರು : ರಾಜ್ಯದ …

Leave a Reply

Your email address will not be published. Required fields are marked *

two × 1 =