ಕಪ್ಪೆ ಚಿಪ್ಪು ಹೆಕ್ಕಲು ಹೋಗಿದ್ದ ನಾಲ್ವರು ಸಾವು
ಯುವ ಭಾರತ ಸುದ್ದಿ ಉಡುಪಿ:
ಬ್ರಹ್ಮಾವರ ಸಮೀಪದ ಹೂಡೆಯ ಕಿಣಿಯಾರ ಕುದ್ರುವಿನಲ್ಲಿ (ಹೊಳೆ) ಭಾನುವಾರ ಕಪ್ಪೆ ಚಿಪ್ಪು ಹೆಕ್ಕಲು ಹೋಗಿದ್ದ ನಾಲ್ವರು ನೀರು ಪಾಲಾಗಿದ್ದಾರೆ.
7 ಜನ ನದಿಗೆ ಇಳಿದಿದ್ದಾರೆ. ಅವರು ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ನಾಲ್ವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ. ಉಳಿದ ಮೂವರು ದಡ ಸೇರಿದ್ದಾರೆ. ಮೂವರ ಶವ ಪತ್ತೆಯಾಗಿದ್ದು ಒಬ್ಬರ ಶೋಧ ಕಾರ್ಯ ಮುಂದುವರಿದಿದೆ. ಮೃತರು ಸ್ಥಳೀಯರು ಹಾಗೂ ಶೃಂಗೇರಿ ತಾಲೂಕಿನವರು ಎಂಬ ಮಾಹಿತಿ ಲಭ್ಯವಾಗಿದೆ ಎಂದು ಬ್ರಹ್ಮಾವರ ಠಾಣೆ ಪೊಲೀಸರು ತಿಳಿಸಿದ್ದಾರೆ.