ಮರಾಠಿ ಭಾಷಿಕರಿಗೆ ಟಿಕೆಟ್ ಕೊಡಿ..!

Spread the love

ಮರಾಠಿ ಭಾಷಿಕರಿಗೆ ಟಿಕೆಟ್ ಕೊಡಿ..!

ವರದಿ : ಹರ್ಷವರ್ಧನ್

ಯುವ ಭಾರತ ವಿಶೇಷ ಬೆಳಗಾವಿ:  ಮಹಾನಗರ ಪಾಲಿಕೆಯಲ್ಲಿ ಮರಾಠಿ ಭಾಷಿಕರು ಮೇಯರ್ ಮತ್ತು ಉಪಮೇಯರ್ ಆಯ್ಕೆಯಾದ ನಂತರ ಈಗ ಎಂಎಲ್ಎ ಮೇಲೆ ಮರಾಠಿಗರ ಕಣ್ಣು ಬಿದ್ದಿದೆ.

ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಮೇಲಾಗಿ ಈಗಿನ ಶಾಸಕ ಅಭಯ ಪಾಟೀಲರ ಕಾರ್ಯವೈಖರಿ ಬಗ್ಗೆ ಬಹುತೇಕರಿಗೆ ಅಸಮಾಧಾನವಿದೆ.ಹೀಗಾಗಿ ಬೆಳಗಾವಿ ದಕ್ಷಿಣ ಕ್ಷೇತ್ರದ ಲ್ಲಿ ವಿಧಾನಸಭೆಗೆ ಮರಾಠಿ‌ಭಾಷಿಕರಿಗೆ ಪ್ರಾಮುಖ್ಯತೆ ನೀಡಬೇಕು ಎಂಬ ಒತ್ತಡ ಕೇಳಿ ಬರುತ್ತಿದೆ.

ಕಿರಣ ಜಾಧವ ಸೇರಿದಂತೆ ನಿತಿನ್ ಜಾಧವ ಅವರೂ ಟಿಕೆಟ್ ಗೆ ಬೇಡಿಕೆ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ದಿನ ಅವರು ಸುಮಾರು 4೦೦ ಜನರಿಗೆ ಪಾರ್ಟಿ ಸಹ ಕೊಟ್ಟರು ಎಂದು ಗೊತ್ತಾಗಿದೆ.ಬೆಳಗಾವಿ ದಕ್ಷಿಣದಲ್ಲಿ ಜೈನ ಸಮುದಾಯ ಅತ್ಯಂತ ಕಡಿಮೆ ಇದರ.

ಹೀಗಾಗಿ ಮರಾಠಿ ಭಾಷಿಕರಿಗೆ ಟಿಕೆಟ್ ಕೊಡಬೇಕು ಎನ್ನುವ ಬೇಡಿಕೆಯನ್ನು ಹೈ‌ಕಮಾಂಡ ಮತ್ತು ಸಂಘ ಪರಿವಾರದವರ ಮುಂದೆ ಇಟ್ಟಿದ್ದಾರೆಂದು ಗೊತ್ತಾಗಿದೆ.ಇದರ ಜೊತೆಗೆ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಯನ್ನು ಮರಾಠಿಗರಿಗೆ ಕೊಡಬೇಕು ಎನ್ನುವ ಬೇಡಿಕೆಯನ್ನು ಇಡಲಾಗಿದೆ ಎಂದು ಗೊತ್ತಾಗಿದೆ.


Spread the love

About Yuva Bharatha

Check Also

ವೀರಶೈವ-ಲಿಂಗಾಯತ ಸಮುದಾಯದ ಸಭೆಯಲ್ಲಿ ಮತಯಾಚಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಮತ್ತೋಮ್ಮೆ ಆಶೀರ್ವದಿಸಿ-ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ: ಕರ್ನಾಟಕ ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮಾಜ …

Leave a Reply

Your email address will not be published. Required fields are marked *

twenty + 9 =