ಹರ್ಷನ ಹತ್ಯೆಯನ್ನು ಖಂಡಿಸಿ-ಶ್ರೀ ರಾಮ ಸೇನೆಯಿಂದ ಸರಕಾರಕ್ಕೆ ಮನವಿ!!
ಯುವ ಭಾರತ ಸುದ್ದಿ ಗೋಕಾಕ: ಶಿವಮೊಗ್ಗದಲ್ಲಿ ನಡೆದ ಹಿಂದು ಕಾರ್ಯಕರ್ತ ಹರ್ಷನ ಹತ್ಯೆಯನ್ನು ಖಂಡಿಸಿ ಇಲ್ಲಿನ ಶ್ರೀ ರಾಮ ಸೇನೆ ಕರ್ನಾಟಕ ಕಾರ್ಯಕರ್ತರು ಮಂಗಳವಾರದAದು ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗದಲ್ಲಿ ಹಿಂದು ಕಾರ್ಯಕರ್ತ ಹರ್ಷ ಎಂಬಾತನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಕಳೆದ ಹಲವಾರು ವರ್ಷಗಳಿಂದ ಆ ಯುವಕನಿಗೆ ಎಸ್.ಡಿ.ಪಿ.ಐ,ಪಿ.ಎಫ್.ಐ, ಸಿ.ಎಫ್.ಐ ಸಂಘಟನೆಗಳು ಹತ್ಯೆಗೆ ಪ್ರಯತ್ನ ನಡೆಸಿದ್ದರು ರಕ್ಷಣೆ ನೀಡದಿರುವುದು ಸರಕಾರದ ನಾಚಿಕೆಗೇಡಿ ಸಂಗತಿಯಾಗಿದೆ. ಹಿಂದುಗಳ ಹತ್ಯೆ ಅವ್ಯಾಹತವಾಗಿ ನಡೆದಿದ್ದರೂ ಸರಕಾರ ದಿವ್ಯ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದು, ವಿರೋಧ ಪಕ್ಷದಲ್ಲಿದ್ದಾಗ ಈ ಸಂಘಟನೆಗಳನ್ನು ನಿಷೇಧಿಸುವದಕ್ಕೆ ಆಗ್ರಹಿಸಿ ಈಗ ಅಧಿಕಾರದಲ್ಲಿದ್ದರೂ ನಿಷೇಧಿಸದಿರುವದು ಸರಕಾರದ ಮೇಲೆ ಸಂಶಯ ಮೂಡುತ್ತಿದೆ.ತಕ್ಷಣ ಈ ಸಂಘಟನೆಗಳನ್ನು ನಿಷೇಧಿಸಬೇಕು ಹತ್ಯೆ ಆರೋಪಿಗಳನ್ನು ತಕ್ಷಣ ಬಂಧಿಸಿ ಉಗ್ರ ಶಿಕ್ಷೆ ನೀಡಬೇಕು. ಮೃತನ ಕುಟುಂಬಕ್ಕೆ ರೂ ೨೫ ಲಕ್ಷ ಪರಿಹಾರ ನೀಡಬೇಕು. ಹಿಂದು ಕಾರ್ಯಕರ್ತರಿಗೆ, ಹಿಂದು ನಾಯಕರಿಗೆ ಸೂಕ್ತ ಭದ್ರತೆ ನೀಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಈ ಸಂದರ್ಭದಲ್ಲಿ ಶ್ರೀ ರಾಮ ಸೇನೆ ಕರ್ನಾಟಕ ತಾಲೂಕು ಅಧ್ಯಕ್ಷ ರವಿ ಪೂಜೇರಿ, ಮುಖಂಡರಾದ ಶಿವು ಹಿರೇಮಠ, ಸಂತೋಷ ನಾಯಿಕ, ರಮೇಶ ಸಂಗಪಾಳೆ, ಪ್ರವಿಣ ಬೆಕ್ಕೇರಿ, ಪ್ರವಿಣ ಹೂವನ್ನವರ, ಶಿವು ಪೂಜೇರಿ, ರಾಮು ತೋಳಿ ಸೇರಿದಂತೆ ಅನೇಕರು ಇದ್ದರು.