Breaking News

ವಿಎಚ್‌ಪಿ ಹಾಗೂ ಬಜರಂಗ ದಳದ ದಿಂದ ಸರ್ಕಾರಕ್ಕೆ ಮನವಿ!!

Spread the love

ವಿಎಚ್‌ಪಿ ಹಾಗೂ ಬಜರಂಗ ದಳದ ದಿಂದ ಸರ್ಕಾರಕ್ಕೆ ಮನವಿ!!

ಯುವ ಭಾರತ ಸುದ್ದಿ  ಗೋಕಾಕ: ಶಿವಮೊಗ್ಗದಲ್ಲಿ ಬಜರಂಗ ದಳದ ಕಾರ್ಯಕರ್ತ ಹರ್ಷಾ ಎಂಬಾತನನ್ನು ಹತ್ಯೆಗೈದ ಇಸ್ಲಾಂ ಮೂಲಭೂತವಾದಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಹಾಗೂ ಇದರಲ್ಲಿ ಶಾಮಿಲಾಗಿರುವ ಇಸ್ಲಾಂ ಮೂಲಭೂತವಾದಿ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಇಲ್ಲಿಯ ವಿಎಚ್‌ಪಿ ಹಾಗೂ ಬಜರಂಗ ದಳದ ಕಾರ್ಯಕರ್ತರು ತಹಶೀಲದಾರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಬುಧವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ನೂರಾರು ಕಾರ್ಯಕರ್ತರು, ಹತ್ಯೆಯ ಘಟನೆಯನ್ನು ಖಂಡಿಸಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡಿಸಿ ನಂತರ ಅಲ್ಲಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಮಿನಿ ವಿಧಾನಸೌಧಕ್ಕೆ ತೆರಳಿ ಅಲ್ಲಿ 5 ನಿಮಿಷಗಳ ಕಾಲ ಮೌನಾಚಾರಣೆ ಮಾಡಿ ನಂತರ ತಹಶೀಲದಾರಿಗೆ ಮನವಿ ಸಲ್ಲಿಸಿದರು.

ಶಿವಮೊಗ್ಗದ ಬಜರಂಗ ದಳದ ಕಾರ್ಯಕರ್ತ ಹರ್ಷಾ ಎಂಬಾತನನ್ನು ಬರ್ಬರವಾಗಿ ಹತ್ಯೆಗೈದಿರುವ ಇಸ್ಲಾಂ ಮೂಲಭೂತವಾದಿಗಳು ನೇರವಾಗಿ ಸನಾತನ ಹಿಂದೂ ಧರ್ಮದ ಮೇಲೆ ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಅಮಾಯಕ ಹಿಂದೂ ಯುವಕರ ಮೇಲೆ ನಿರಂತರ ದಾಳಿಗಳು ನಡೆಯುತ್ತಲ್ಲಿವೆ. ಇಂತಹ ಘಟನೆಗಳ ಹಿಂದೆ ಇಸ್ಲಾಂ ಮೂಲಭೂತವಾದಿಗಳ ಸಂಘಟನೆಗಳಾದ ಪಿಎಫ್‌ಐ, ಎಸ್‌ಡಿಪಿಐ ಕೈವಾಡವಿರುವುದು ಸೃಷ್ಟವಾಗಿದೆ. ಇವುಗಳನ್ನು ನಿಷೇಧಿಸಬೇಕು. ಅಪದಾಧಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಹರ್ಷಾನ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ಕೂಡಲೇ ಪರಿಹಾರ ನೀಡಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಬಜರಂಗದಳದ ವಿಭಾಗೀಯ ಸಂಚಾಲಕ ಸದಾಶಿವ ಗುದಗಗೋಳ, ನ್ಯಾಯವಾದಿಗಳಾದ ಬಲದೇವ ಸಣ್ಣಕ್ಕಿ, ವಿಠ್ಠಲ ಡಬ್ಬನವರ, ಶಿವಾನಂದ ಗೋಟುರ, ಪುರುಷೋತ್ತಮ ವಡೇಯರ, ಶಶಿಧರ ಬೊರಶೆಟ್ಟಿ, ಪರಶುರಾಮ ತಪಾಸೆ, ದಯಾನಂದ ಮಾವರಕರ, ಲಕ್ಷö್ಮಣ ಭಾಗೋಜಿ, ಶಿವು ಮಾಯಗೊಂಡ, ಕಲ್ಲಪ್ಪ ಹೊನಕುಪ್ಪಿ, sಸೆರೀದಂತೆ ಅನ್ನೆಕರು ಹಿಂzದೂ ಸಮಾಜ ಬಾಂಧವರು ಇದ್ದರು.


Spread the love

About Yuva Bharatha

Check Also

ಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ದೊಡ್ಡದು.- ರಮೇಶ ಜಾರಕಿಹೊಳಿ.!

Spread the loveಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ದೊಡ್ಡದು.- ರಮೇಶ ಜಾರಕಿಹೊಳಿ.! ಗೋಕಾಕ: ಪತ್ರಿಕೆಗಳನ್ನು ಮನೆಗಳಿಗೆ ಸರಿಯಾದ …

Leave a Reply

Your email address will not be published. Required fields are marked *

three + 1 =