Breaking News
?????????????????????????????????

ಸಿದ್ಧಾರೂಢ ಮಠಕ್ಕೆ ಫೆ.26 ರಂದು ಬೆಟಗೇರಿ ಸದ್ಭಭಕ್ತರಿಂದ ಪಾದಯಾತ್ರೆ!!

Spread the love

 

ಸಿದ್ಧಾರೂಢ ಮಠಕ್ಕೆ ಫೆ.26 ರಂದು ಬೆಟಗೇರಿ ಸದ್ಭಭಕ್ತರಿಂದ ಪಾದಯಾತ್ರೆ!!

ಯುವ ಭಾರತ ಸುದ್ದಿ  ಗೋಕಾಕ: ಬೆಟಗೇರಿ ಗ್ರಾಮದ ಸದ್ಗುರು ಸಿದ್ಧಾರೂಢರ ಸದ್ಭಕ್ತರು ಹುಬ್ಬಳ್ಳಿ ಶ್ರೀ ಸಿದ್ಧಾರೂಢರ ಮಠದಲ್ಲಿ ಜರುಗಲಿರುವ ಮಹಾಶಿವರಾತ್ರಿ ಜಾತ್ರೆಗೆ ಪಾದಯಾತ್ರೆ ಮೂಲಕ ಪ್ರಯಾಣ ಬೆಳಸಲಿರುವ ಪ್ರಯುಕ್ತ ಫೆ.೨೬ ರಂದು ಮುಂಜಾನೆ ೯ ಗಂಟೆಗೆ ಸ್ಥಳೀಯ ಶ್ರೀ ಬಸವೇಶ್ವರ ವೃತ್ತದಲ್ಲಿ ೬ನೇ ವರ್ಷದ ಪಾದಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಲಿದೆ.
ಬೆಟಗೇರಿ ಗ್ರಾಮದ ಪ್ರವಚನಕಾರ ಪುಂಡಲೀಕಪ್ಪ ಪಾರ್ವತೇರ ಅಧ್ಯಕ್ಷತೆ, ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ ಸಾನಿಧ್ಯ, ಶರಣರಾದ ಮಲ್ಲಪ್ಪ ಪಣದಿ, ಸಿದ್ದಪ್ಪ ಹೊರಟ್ಟಿ, ಭಾಳಪ್ಪ ಕನೋಜಿ ನೇತೃತ್ವ ವಹಿಸಲಿದ್ದು, ಸ್ಥಳೀಯ ಸದ್ಗುರು ಶ್ರೀ ಸಿದ್ಧಾರೂಢರ ಪಾದಯಾತ್ರೆ ವ್ಯವಸ್ಥಾಪಕ ಸಮಿತಿ ಸಂಚಾಲಕ ಈಶ್ವರ ಬಳಿಗಾರ, ತಾಪಂ ಮಾಜಿ ಸದಸ್ಯ ಬಸವಂತ ಕೋಣಿ ಪಾದಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶರಣರಾದ ಸುಭಾಷ ಕರೆಣ್ಣವರ, ಮಾಯಪ್ಪ ಬಾಣಸಿ ಮುಖ್ಯತಿಥಿಗಳಾಗಿ, ಸ್ಥಳೀಯ ಗಣ್ಯರು, ಮುಖಂಡರು, ವಿವಿಧ ಸಂಘ, ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು ಅತಿಥಿಗಳಾಗಿ ಆಗಮಿಸಲಿದ್ದಾರೆ.
ಬೆಟಗೇರಿ ಗ್ರಾಮದಿಂದ ಫೆ.೨೬ ರಂದು ಪಾದಯಾತ್ರೆ ಆರಂಭವಾಗಿ ಅಕ್ಕಿಸಾಗರ ಮಾರ್ಗವಾಗಿ ಯರಗಟ್ಟಿ, ಸವದತ್ತಿ, ಅಮ್ಮಿನಬಾವಿ, ಚಂದನಮಟ್ಟಿ ಗ್ರಾಮಗಳಲ್ಲಿ ವಾಸ್ತವ್ಯ ಮಾಡಿ, ಫೆ.೧ ರಂದು ಪಾದಯಾತ್ರೆ ಹುಬ್ಬಳ್ಳಿ ಸದ್ಗುರು ಶ್ರೀ ಸಿದ್ಧಾರೂಢರ ಮಠ ತಲುಪಲಿದೆ. ಪಾದಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಇದೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಮೊಬೈಲ್ ನಂ: ೯೯೮೦೭೦೫೧೨೩, ೯೯೦೧೧೩೯೦೯೧, ೯೯೦೨೦೮೧೯೯೦ ಸಂಪರ್ಕಿಸಬೇಕೆAದು ಸ್ಥಳೀಯ ಸದ್ಗುರು ಶ್ರೀ ಸಿದ್ಧಾರೂಢರ ಪಾದಯಾತ್ರೆ ವ್ಯವಸ್ಥಾಪಕ ಸಮಿತಿ ಸಂಚಾಲಕ ಈಶ್ವರ ಬಳಿಗಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love

About Yuva Bharatha

Check Also

ವಿಕಲತೆ ಹೊಂದಿರುವ ಅಂಗವಿಕಲ ಮಕ್ಕಳನ್ನು ಸಮಾನತೆ ಹಾಗೂ ಮಾನವಿಯತೆಯಿಂದ ನೋಡಿ-ಸರ್ವೋತ್ತಮ ಜಾರಕಿಹೊಳಿ.!

Spread the loveವಿಕಲತೆ ಹೊಂದಿರುವ ಅಂಗವಿಕಲ ಮಕ್ಕಳನ್ನು ಸಮಾನತೆ ಹಾಗೂ ಮಾನವಿಯತೆಯಿಂದ ನೋಡಿ-ಸರ್ವೋತ್ತಮ ಜಾರಕಿಹೊಳಿ.! ಗೋಕಾಕ: ವಿಕಲತೆ ಹೊಂದಿರುವ ಅಂಗವಿಕಲ …

Leave a Reply

Your email address will not be published. Required fields are marked *

2 × 3 =