ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ದೀಪಾ!!
ಗೋಕಾಕ್- ಕಳೆದ ಜುಲೈ ತಿಂಗಳಲ್ಲಿ ಜರುಗಿದ ರಾಷ್ಟ ಮಟ್ಟದ ನೀಟ್ ಪರೀಕ್ಷೆಯಲ್ಲಿ ೭೨೦ ರ ಪೈಕಿ ೬೬೫ ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ.
ತಾಲೂಕಿನ ನಲ್ಲಾನಟ್ಟಿ ಗ್ರಾಮದ ಕೆ.ವೈ. ಕುಳ್ಳೂರ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿನಿಯಾದ ದೀಪಾ, ಕನ್ನಡ ಮಾಧ್ಯಮದ ವಿದ್ಯಾರ್ಥಿನಿ ಎಂಬುದು ವಿಶೇಷ.
ದೀಪಾ ಕುಳ್ಳೂರ ಸಾಧನೆಗೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಕ್ಷೇತ್ರ ಶಿಕ್ಣಣಾಧಿಕಾರಿ ಅಜೀತ ಮನ್ನಿಕೇರಿ, ನಿವೃತ್ತ ಶಿಕ್ಷಕ ಕೆ.ವೈ.ಕುಳ್ಳೂರ ಸೇರಿದಂತೆ ಗ್ರಾಮದ ಹಲವು ಗಣ್ಯರು ಅಭಿನಂದಿಸಿದ್ದಾರೆ.
ದೀಪಾ ಅವಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯ ಶಿಕ್ಷಕ ರಾಜಶೇಖರ ಕುಳ್ಳೂರ ಅವರ ಪುತ್ರಿ.
YuvaBharataha Latest Kannada News
