ಪೊಲೀಸರ ಯಶಸ್ವಿ ಕಾರ್ಯಾಚರಣೆ : ಖಾನಾಪುರ ಬಳಿ ಗೋವಾ ಮದ್ಯ ವಶ
ಯುವ ಭಾರತ ಸುದ್ದಿ ಬೆಳಗಾವಿ :
ದಿನಾಂಕ: 07/03/2023 ರಂದು ಡಾ. ವೈ. ಮಂಜುನಾಥ, ಅಬಕಾರಿ ಅಪರ ಆಯುಕ್ತರು (ಅಪರಾಧ), ಕೇಂದ್ರಸ್ಥಾನ ಬೆಳಗಾವಿ, ಪಿರೋಜ್ ಖಾನ್ ಖಿಲ್ಲೇದಾರ, ಅಬಕಾರಿ ಜಂಟಿ ಆಯುಕ್ತರು, ಬೆಳಗಾವಿ ವಿಭಾಗರವರ ಆದೇಶದಂತೆ ಎಂ. ವನಜಾಕ್ಷಿ, ಅಬಕಾರಿ ಉಪ ಆಯುಕ್ತರು, ಬೆಳಗಾವಿ (ದಕ್ಷಿಣ) ಜಿಲ್ಲೆ, ರವಿ ಎಂ. ಮುರಗೋಡ, ಅಬಕಾರಿ ಉಪ ಅಧೀಕ್ಷಕರು, ಬೆಳಗಾವಿ ಉಪ ವಿಭಾಗರವರ ಮಾರ್ಗದರ್ಶನದಲ್ಲಿ ಮುಂಬರುವ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ 2023ರ ನಿಮಿತ್ತ ಅಬಕಾರಿ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಖಾನಾಪುರ ವಲಯ ವ್ಯಾಪ್ತಿಯ ಜಾಂಬೋಟಿ-ಖಾನಾಪುರ ಎಸ್.ಎಚ್-31 ರಸ್ತೆಯ ಮೋದೆಕೊಪ್ಪ ಕ್ರಾಸ್ ಹತ್ತಿರ ಖಚಿತ ಬಾತ್ಮಿಯ ಮೇರೆಗೆ ಮಧ್ಯಾಹ್ನ 2:05 ಪಿ.ಎಂ. ಗಂಟೆಗೆ ಅಬಕಾರಿ ನಿರೀಕ್ಷಕ ದಾವಲಸಾಬ ಶಿಂದೋಗಿ, ಅಬಕಾರಿ ಉಪ ನಿರೀಕ್ಷಕ ಜಯರಾಮ ಜಿ. ಹೆಗಡೆ ಮತ್ತು ಸಿಬ್ಬಂದಿಯವರಾದ ಮಂಜುನಾಥ ಬಳಗಪ್ಪನವರ, ಪ್ರಕಾಶ ಡೋಣಿರವರು ಕೂಡಿಕೊಂಡು ರಸ್ತೆಗಾವಲು ಮಾಡುವ ಸಂದರ್ಭದಲ್ಲಿ ಒಂದು ಕಂದು ಬಣ್ಣದ ಭಾರತ ಬೆಂಜ್ ಗೂಡ್ಸ್ ಕ್ಯಾರಿಯರ್ 12 ಚಕ್ರದ ಕಂಟೆನರ್ ವಾಹನ ಸಂಖ್ಯೆ: ಜಿಜೆ-10/ಟಿಟಿ-8276ರಲ್ಲಿ ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟಕ್ಕಿರುವ 180ಎಮ್.ಎಲ್. ಅಳತೆಯ 21696 ಇಂಪಿರಿಯಲ್ ಬ್ಲ್ಯೂ ವಿಸ್ಕಿ ಬಾಟಲಿಗಳನ್ನು (ಒಟ್ಟು 3905.28 ಲೀ. ಗೋವಾ ಮದ್ಯ) ಸಾಗಾಟ ಮಾಡುತ್ತಿದ್ದಾಗ ದಾವಲಸಾಬ ಶಿಂದೋಗಿ, ಅಬಕಾರಿ ನಿರೀಕ್ಷಕರು, ಖಾನಾಪುರ ವಲಯದವರು ಜಪ್ತು ಮಾಡಿಕೊಂಡು ಒಬ್ಬ ಆರೋಪಿತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣವನ್ನು ದಾಖಲಿಸಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿಯನ್ನು ಸಲ್ಲಿಸಲಾಗಿರುತ್ತದೆ. ಸದರಿ ಪ್ರಕರಣದಲ್ಲಿ ಜಪ್ತಾದ ಮುದ್ದೆಮಾಲಿನ ಒಟ್ಟು ಅಂದಾಜು ಮೌಲ್ಯ ರೂ. 67,73,120/- ರಷ್ಟಿರುತ್ತದೆ.