Breaking News

ಮತ್ತಷ್ಟು ತುರುಸಾದ ಪ್ರತಿಭಟನೆ-ರಮೇಶ್ ಜಾರಕಿಹೊಳಿ ಪ್ರಕರಣ!

Spread the love

ಮತ್ತಷ್ಟು ತುರುಸಾದ ಪ್ರತಿಭಟನೆ-ರಮೇಶ್ ಜಾರಕಿಹೊಳಿ ಪ್ರಕರಣ!

ಯುವ ಭಾರತ ಸುದ್ದಿ  ಗೋಕಾಕ : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಅವರ ಅಭಿಮಾನಿಗಳು ಪ್ರತಿಭಟನೆ ನಡೆಸಿ, ರಸ್ತೆ ತಡೆ ನಡೆಸಲು ನಿರ್ಧರಿಸಿದ್ದಾರೆ.

ನಕಲಿ ಸಿಡಿ ತಯಾರಿಸಿ ರಮೇಶ್ ಜಾರಕಿಹೊಳಿ ಅವರ ತೆಜೋವಧೆ ಮಾಡಲಾಗಿದೆ ಎಂದು ಆರೋಪಿಸಿರುವ ಅವರ ಅಭಿಮಾನಿಗಳು ಈ ಸಂಬಂಧ ದಿನೇಶ ಕಲ್ಲಹಳ್ಳಿ ವಿರುದ್ಧ ಶುಕ್ರವಾರ  ಪ್ರತಿಭಟನೆ ನಡೆಸಲಿದ್ದಾರೆ.

ತಾಲೂಕಿನ ಕೊಣ್ಣೂರ ಪುರಸಭೆ ಆವರಣ(ಮರಡಿಮಠ ಕ್ರಾಸ್)ದಿಂದ ಬೆಳಿಗ್ಗೆ 9ಗಂಟೆಗೆ ಸಾವಿರಾರು ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ (ಪಾದಯಾತ್ರೆ) ಮೂಲಕ ಡಿವೈಎಸ್ ಪಿ ಕಾರ್ಯಾಲಯದವರೆಗೆ ಆಗಮಿಸಿ ಮನವಿ ಸಲ್ಲಿಸಲಿದ್ದಾರೆ.

ಅಭಿಮಾನಿಗಳ ಇನ್ನೊಂದು ಗುಂಪು ತಾಲೂಕಿನ ಮಾಲದಿನ್ನಿ (ಬೆಳಗಾವಿ ಕ್ರಾಸ್) ಕ್ರಾಸ್ ಬಳಿ ಬೆಳಿಗ್ಗೆ 10ಗಂಟೆಗೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಿದ್ದಾರೆ.

ಬುಧವಾರ ಗೋಕಾಕಲ್ಲಿ, ಗುರುವಾರ ಬೆಳಗಾವಿಯಲ್ಲಿ ಹಾಗೂ ಕೌಜಲಗಿಯಲ್ಲಿ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ.

ಈ ಮಧ್ಯೆ ರಮೇಶ ಜಾರಕಿಹೊಳಿ ಯಾವುದೇ ರೀತಿಯ ಹಿಂಸಾತ್ಮಕ ಪ್ರತಿಭಟನೆ ನಡೆಸದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ ಎಂದು ಬಿಜೆಪಿ ಗೋಕಾಕ ನಗರಾಧ್ಯಕ್ಷ ಭೀಮಶಿ ಭರಮಣ್ಣವರ್ ತಿಳಿಸಿದ್ದಾರೆ.


Spread the love

About Yuva Bharatha

Check Also

ತಮ್ಮ ಮಕ್ಕಳಲ್ಲೂ ನಮ್ಮ ಸಂಸ್ಕೃತಿಯ ಜಾಗೃತಿ ಮೂಢಿಸಿ-ಸಂಸದ ಜಗದೀಶ ಶೆಟ್ಟರ!!

Spread the loveತಮ್ಮ ಮಕ್ಕಳಲ್ಲೂ ನಮ್ಮ ಸಂಸ್ಕೃತಿಯ ಜಾಗೃತಿ ಮೂಢಿಸಿ-ಸಂಸದ ಜಗದೀಶ ಶೆಟ್ಟರ!!   ಗೋಕಾಕ: ಭಾರತೀಯ ಸಂಸ್ಕೃತಿಗೆ ಜಾಗತಿಕ …

Leave a Reply

Your email address will not be published. Required fields are marked *

5 × 1 =