
ಗೋಕಾಕ ತಾಲೂಕಿನ ಖನಗಾಂವ ಗ್ರಾಮದ ಸರಕಾರಿ ಆದರ್ಶ ಶಾಲೆ (ಆರ್.ಎಂ.ಎಸ್.ಎ ) ಯಲ್ಲಿ ಗೋಕಾಕ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ರಮೇಶ ಜಾರಕಿಹೊಳಿ ಅವರ ಸತತ ಪ್ರಯತ್ನದಿಂದ ಕಳೆದ ವರ್ಷ ಆರ್ಟ್ಸ್ ವಿಭಾಗದ ಪಿ.ಯು ತರಗತಿ ಮಂಜೂರಾತಿ ದೊರೆತು ಪ್ರಾರಂಭವಾಗಿದ್ದು ಸಾಹುಕಾರ ಪ್ರಯತ್ನದಿಂದ ಈ ವರ್ಷ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ಪಿ.ಯು ಕಾಲೇಜು ಮಂಜೂರಾತಿ ದೊರೆತು ಪ್ರಸಕ್ತ ವರ್ಷ ಪ್ರವೇಶಾತಿ ಪ್ರಾರಂಭವಾಗಲಿರುವ ಹಿನ್ನೆಲೆ ಇಂದು ಖನಗಾಂವ ಸೇರಿದಂತೆ ಎಂಟುರೂ ಗ್ರಾಮಸ್ಥರು ಗುರು ಹಿರಿಯರು ಇಂದು ಸಾಹುಕಾರ ಗೃಹ ಕಛೇರಿಗೆ ಭೇಟಿ ನೀಡಿ ಶಾಸಕರಾದ ಸಾಹುಕಾರ ಶ್ರೀ ರಮೇಶ ಜಾರಕಿಹೊಳಿ ಅವರಿಗೆ ಗೌರವ ಪೂರ್ವಕ ಸತ್ಕರಿಸಿ ಕೃತಜ್ಞತೆ ಸಲ್ಲಿಸಿದರು.ಈ ಸಂಧರ್ಭದಲ್ಲಿ ಟಿ.ಆರ್ ಕಾಗಲ,ಖನಗಾಂವ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ನಂದವ್ವ ಮಾಳಗಿ,ಮಿಡಕನಹಟ್ಟಿ ಗ್ರಾ.ಪಂ ಅಧ್ಯಕ್ಷರಾದ ಮಂಜು ಚಿಂಚಿ,ಹಿರಿಯರಾದ ಸಿದ್ದಗೌಡ ಪಾಟೀಲ,ಬಸಪ್ಪ ಹಮ್ಮಿಣಿ,ಪುಂಡಲೀಕ ವಣ್ಣೂರ,ಸಿದ್ದಪ್ಪ ದೇಸಾಯಿ,ಶಂಕರ ನಾಯ್ಕ,ಮಹಾಂತೇಶ ಬಡಿಗೇರ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶಿವಾನಂದ ಪಾಟೀಲ,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಬಿ ಬಳಗಾರ ಸೇರಿದಂತೆ ಎಂಟುರೂ ಮುಖಂಡರು, ಗುರು ಹಿರಿಯರು ಉಪ.
YuvaBharataha Latest Kannada News