Breaking News

IT RAID ಬೆಳಗಾವಿ ನಾಲ್ವರು ಉಧ್ಯಮಿ ಮನೆಗಳ ಮೇಲೆ

Spread the love

ಬೆಳಗಾವಿ: ಹೌದು ಬೆಳಗಾವಿ ಇಲ್ಲಿನ ಉದ್ಯಮಿಗಳಾದ ವಿನೋದ್ ದೊಡ್ಡನವರ , ಪುಷ್ಪದಂತ ದೊಡ್ಡಣ್ಣವರ, ಅಜಿತ್ ಪಟೇಲ್‌ ಮತ್ತು ಅಶೋಕ ಹುಂಬರವಾಡಿ ಎಂಬವರ ಮನೆಗಳು ಮತ್ತು ಕಚೇರಿಗಳ ಮೇಲೆ ಇಂದು ಬೆಳಗ್ಗೆ ದಾಳಿ ಮಾಡಿರುವ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಸಕ್ಕರೆ ಕಾರ್ಖಾನೆ, ಕಬ್ಬಿಣ ಹಾಗೂ ಗ್ರಾನೈಟ್ ಉದ್ಯಮಿಯಾಗಿರುವ ದೊಡ್ಡಣ್ಣವರ ಕುಟುಂಬದ ವಿನೋದ್ ದೊಡ್ಡಣ್ಣವರ, ಪುಷ್ಪದಂತ ದೊಡ್ಡಣ್ಣವರ ಅವರು ದೇಶ-ವಿದೇಶಗಳಿಗೆ ಕಬ್ಬಿಣ ಹಾಗೂ ಗ್ರಾನೈಟ್ ರಫ್ತು ಮಾಡುತ್ತಾರೆ. ಅಲ್ಲದೇ, ಕಾಗವಾಡ ತಾಲೂಕಿನಲ್ಲಿ ಎರಡು ಸಕ್ಕರೆ ಕಾರ್ಖಾನೆಗಳನ್ನು ಇವರ ಕುಟುಂಬ ಹೊಂದಿದೆ.

ಅದೇ ರೀತಿ, ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಉದ್ಯಮಿ ಅಜಿತ್‌ ಪಟೇಲ್, ಗಣೇಶಪುರದಲ್ಲಿರುವ ಅಶೋಕ ಐರನ್ ಮಾಲೀಕ ಅಶೋಕ ಹುಂಬರವಾಡಿ ಮನೆಯಲ್ಲೂ ಅಧಿಕಾರಿಗಳು ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಬೆಂಗಳೂರಿನ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ವರದಿ. ಸುನಿಲ ಮುಂಜಾಲೆ


Spread the love

About Yuva Bharatha

Check Also

ವಿಬಿ- ಜೀ ರಾಮ್ ಜೀ ಯೋಜನೆಯನ್ನು ಜಾರಿ ಮಾಡಿದ್ದರಿಂದ ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡುತ್ತಿದ್ದಾರೆ.- ಸುಭಾಸ ಪಾಟೀಲ

Spread the love ಗೋಕಾಕ: ವಿಕಸಿತ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿಯವರು ವಿಬಿ- ಜೀ ರಾಮ್ …

Leave a Reply

Your email address will not be published. Required fields are marked *

three × four =