Breaking News

ಪತ್ರಕರ್ತರಿಗೆ ಸೂಕ್ತ ಭದ್ರತೆ ಕಲ್ಪಿಸಿ ಸರಕಾರಕ್ಕೆ ಮನೋಹರ ಮೇಗೆರಿ ಆಗ್ರಹ.!

Spread the love

ಪತ್ರಕರ್ತರಿಗೆ ಸೂಕ್ತ ಭದ್ರತೆ ಕಲ್ಪಿಸಿ ಸರಕಾರಕ್ಕೆ ಮನೋಹರ ಮೇಗೆರಿ ಆಗ್ರಹ.!


ಗೋಕಾಕ: ಪತ್ರಕರ್ತರ ಮೇಲಿನ ಹಲ್ಲೆ ಖಂಡಿಸಿ ಗೋಕಾಕ ತಾಲೂಕ ಪತ್ರಕರ್ತರ ಸಂಘದ ಸದಸ್ಯರು ಸೋಮವಾರದಂದು ಇಲ್ಲಿಯ ಮಿನಿವಿಧಾನ ಸೌದದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಮನೋಹರ ಮೇಗೇರಿ ಮಾತನಾಡಿ, ರೈತ ಸಂಘಟನೆಯ ಹೆಸರು ಹೇಳಿ ನಕಲಿ ರೈತ ಹೋರಾಟಗಾರ್ತಿ ಮಂಜುಳಾ ಪೂಜಾರ ನ್ಯೂಸ್ ಫಸ್ಟ್ ಟಿವಿ ಮಾಧ್ಯಮ ನಡೆಸಿದ್ದ ಗುಪ್ತ ವರದಿಗಾರಿಕೆಯಲ್ಲಿ ಡೀಲ್‌ಗೆ ಇಳಿದಿದ್ದು ರಾಜ್ಯದ ಜನತೆಗೆ ತಿಳಿಸಿರುವ ವಿಷಯ ಇದನ್ನು ಪ್ರಸಾರ ಮಾಡಿದ ಮಾಧ್ಯಮ ಸಂಸ್ಥೆಯ ವರದಿಗಾರರು ಸೇರಿ ಎಲ್ಲರನ್ನೂ ಅವಾಚ್ಯಶಬ್ದದಿಂದ ನಿಂಧಿಸಿದ್ದಾಳೆ. ನಮ್ಮ ದೇಶದಲ್ಲಿ ಸ್ತಿçÃಯರಿಗೆ ಒಳ್ಳೆಯ ಗೌರವವಿದೆ. ಆದರೆ ಮಂಜುಳಾ ಪೂಜಾರ ಮಾತುಗಳು ಅವರ ವ್ಯಕ್ತಿತ್ವ ಗುರುತಿಸುತ್ತದೆ ಎಂದರು.
ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕೋದ್ಯಮ ಆದರೆ ಪತ್ರಕರ್ತರ ಮೇಲೆಯೇ ಹಲ್ಲೆಗಳು ನಡೆಯುತ್ತಿವೆ. ಹಾವೇರಿಯಲ್ಲಿ ನಕಲಿ ರೈತ ಹೋರಾಟಗಾರ್ತಿ ಮಂಜುಳಾ ತನ್ನ ಸಹಚರರೊಂದಿಗೆ ಟಿವಿ ಮಾಧ್ಯಮದ ಪತ್ರಕರ್ತ ಹಾಗೂ ಕ್ಯಾಮೇರಾಮನ್ ಮೇಲೆ ಹಲ್ಲೆ ನಡೆಸಿದ್ದಾರೆ. ಇಂತಹವರ ಮೇಲೆ ಕ್ರೀಮಿನಲ್ ಮೊಕದ್ದಮೆ ದಾಖಲಿಸಬೇಕು. ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪತ್ರಕರ್ತರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಸರಕಾರಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಭೀಮಶಿ ಭರಮನ್ನವರ, ಉಪಾಧ್ಯಕ್ಷ ಸಾದೀಕ ಹಲ್ಯಾಳ, ಪ್ರದೀಪ ನಾಗನೂರ, ಬಿ ಪ್ರಭಾಕರ, ಲಕ್ಷö್ಮಣ ಖಡಕಭಾಂವಿ, ಮಹಾನಿಂಗ ಕೆಂಚನ್ನವರ, ಶ್ರೀಧರ ಮುತಾಲಿಕದೇಸಾಯಿ, ಅಡಿವೆಪ್ಪ ಪಾಟೀಲ, ಸಂತೋಷ ಖಂಡ್ರಿ, ದುಂಡಪ್ಪ ನಂದಿ, ಸಂತೋಷ ನೋಗನಾಳ, ಸಚೀನ ರಾಹುತ್, ವಿಶ್ವನಾಥ ಡಬ್ಬನವರ, ಸತೀಶ ಕುಂಬಾರ, ಪವನ ಮಹಾಲಿಂಗಪೂರ, ಎಸ್ ಆರ್ ಕುಮರೇಶ, ರಮೇಶ ಅಪ್ಪೋಜಪ್ಪಗೋಳ, ಪ್ರಸಾದ ರಂಗಸುಭೆ ಸೇರಿದಂತೆ ಗೋಕಾಕ ತಾಲೂಕ ಪತ್ರಕರ್ತರ ಸಂಘದ ಸದಸ್ಯರು ಇದ್ದರು.


Spread the love

About Yuva Bharatha

Check Also

ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾರಾಗಿ, ಅಧಿಕಾರಿಗಳಿಗೆ ಶಾಸಕ ರಮೇಶ ಜಾರಕಿಹೊಳಿ ಕರೆ.!

Spread the loveಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾರಾಗಿ, ಅಧಿಕಾರಿಗಳಿಗೆ ಶಾಸಕ ರಮೇಶ ಜಾರಕಿಹೊಳಿ ಕರೆ.! ಗೋಕಾಕ: ಅಧಿಕಾರಿಗಳು ನದಿ ತೀರದ …

Leave a Reply

Your email address will not be published. Required fields are marked *

eleven − 6 =