ಪೈನಾನ್ಸ್ ನ ಆಡಳಿತ ಮಂಡಳಿ
ಮನೆ ಮುಂದೆ ಬೊಬ್ಬೆಹಾಕಿ, ತಮಟೆ, ಪಾತ್ರೆ ಬಾರಿಸಿ ಪ್ರತಿಭಟನೆ!!
ಯುವ ಭಾರತ ಸುದ್ದಿ ಘಟಪ್ರಭಾ : ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಠೇವಣಿ (deposit) ಇಟ್ಟ ಹಣವನ್ನು ಮರಳಿ ಕೊಡದೇ ಒಂದು ಖಾಸಗಿ ಪೈನಾನ್ಸ್ ಕಂಪನಿ ಜನರನ್ನು ಯಾಮಾರಿಸುತ್ತಿದೆ ಎಂದು ಆರೋಪಿಸಿ ಗ್ರಾಹಕರು ಸೋಮವಾರ ಪೈನಾನ್ಸ್ ಕಛೇರಿ ಮುಂದೆ ಸುಮಾರು ಎರಡು ಗಂಟೆಗಳ ಕಾಲ ಧರಣಿ ಸತ್ಯಾಗ್ರಹ ನಡೆಸಿದರು.
ಪಟ್ಟಣದ ನವೋದಯ ಪೈನಾನ್ಸ್ ಮತ್ತು ಜಗಜ್ಯೋತಿ ಸೌಹಾರ್ದ ಪತ್ತಿನ ಸಂಘದಲ್ಲಿ ಠೇವಣಿ ಇಟ್ಟಿರುವ ಗ್ರಾಹಕರು ಹಲಗೆ ಬಾರಿಸಿ, ಬೊಬ್ಬೆ ಹೊಡೆಯುತ್ತ ಆಡಳಿತ ಮಂಡಳಿಯ ಸದಸ್ಯರ ಮನೆಗಳ ಮುಂದೆ ಪ್ರತಿಭಟನೆ (protest) ನಡೆಸಿದರು.
ಬೆಳಿಗ್ಗೆ ಸುಮಾರು 2 ಗಂಟೆಗಳ ಕಾಲ ನವೋದಯ ಪೈನಾನ್ಸ್ ಮುಂದೆ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿ ನಂತರ ಪಟ್ಟಣದ ಮುಖ್ಯರಸ್ತೆಯಲ್ಲಿ ಆಡಳಿತ ಆಡಳಿತ ಮಂಡಳಿಯ ಸದಸ್ಯರ ವಿರುದ್ದ ಘೋಷಣೆ ಕೂಗುತ್ತ ಅಧ್ಯಕ್ಷರ (president) ಮನೆಯ ಮುಂದೆ ವಂಚನೆಗೊಳಗಾದ ಜನರು ಕೆಲ ಕಾಲ ಧರಣಿ ಕುಳಿತರು.
ಇನ್ನೂ ಆಡಳಿತ ಮಂಡಳಿ ಅಧ್ಯಕ್ಷ ಅಣ್ಣಪ್ಪ ಹುಣಗುಂದ ಹಾಗೂ ಸದಸ್ಯರು ಮತ್ತು ಪಿಗ್ಮಿ ಏಜೆಂಟ್ ಪ್ರತಿಭಟನೆಗೆ ಹೆದರಿ ಮನೆ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ.
ನವೋದಯ ಫೈನಾನ್ಸ್, ಜಗಜ್ಯೋತಿ ಸೌಹಾರ್ದ ಸಹಕಾರಿ ಸಂಘ ಸೇರಿ ಅಂದಾಜು 25 ಕೋಟಿವರೆಗೆ ರೈತರಿಗೆ, ಕೂಲಿ ಮಾಡುವ ಕಾರ್ಮಿಕರಿಗೆ ಪಂಗನಾಮ ಹಾಕಿದ್ದಾರೆ ಎಂದು ಗ್ರಾಹಕರು ಆರೋಪಿಸುತ್ತಿದ್ದಾರೆ.
ಅಲ್ಲದೇ ಹಣವನ್ನು ಅಕ್ರಮವಾಗಿ ಬಳಸಿಕೊಂಡು ಗ್ರಾಹಕರ ಠೇವಿನ ಹಣವನ್ನು ಅವರ ಠೇವು ಖಾತೆಯಿಂದ ಬದಲಾಯಿಸಿ S.B. ಖಾತೆಗೆ ವರ್ಗಾಯಿಸಿ (transfer) ದ್ದಾರೆ. ಅಲ್ಲದೆ ಅವರ ಹಣಕ್ಕೆ ಬಡ್ಡಿ ಕೂಡ ಹಾಕದೇ ಗ್ರಾಹಕರ ಹಣ ಗ್ರಾಹಕರಿಗೆ ಕೊಡದೆ ಸತಾಯಿಸುತ್ತಿದ್ದಾರೆ.
ಗ್ರಾಹಕರ ಡಿಪಾಜಿಟ್ ಹಣದಲ್ಲಿ ಆಡಳಿತ ಮಂಡಳಿ ಸದಸ್ಯರು ಬೇರೆ ಕಡೆ ಆಸ್ತಿ ಖರೀದಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.