Breaking News

ಗುರುವಿನ ಸೇವೆ ಸ್ಮರಿಸಿ ಗುರುಗಳನ್ನು ಗೌರವಿಸುವುದು ಶ್ರೇಷ್ಠ ಕೆಲಸ-ಗಜಾನನ ಮನ್ನಿಕೇರಿ!!

Spread the love

ಗುರುವಿನ ಸೇವೆ ಸ್ಮರಿಸಿ ಗುರುಗಳನ್ನು ಗೌರವಿಸುವುದು ಶ್ರೇಷ್ಠ ಕೆಲಸ-ಗಜಾನನ ಮನ್ನಿಕೇರಿ!!

ಯುವ ಭಾರತ ಸುದ್ದಿ (ಗೋಕಾಕ)  ಕುಲಗೋಡ: ಗುರುವಿನ ಸೇವೆ ಸ್ಮರಿಸಿ ಗುರುಗಳನ್ನು ಗೌರವಿಸುವುದು ಶ್ರೇಷ್ಠ ಕೆಲಸ ಎಂದು ಧಾರವಾಡದ ಶಿಕ್ಷಣ ಇಲಾಖೆಯ ಸಹ ನಿರ್ದೇಶಕ ಗಜಾನನ ಮನ್ನಿಕೇರಿ ಹೇಳಿದರು.

ಇಲ್ಲಿನ ಕೇಳಕರ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿರುವ ಸನ್ 2002- 2003 ನೆಯ ಸಾಲಿನ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಮತ್ತು ಗುರುವಂದನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ತಂದೆ-ತಾಯಿ ಹಾಗೂ ಗುರುವಿನ ಸ್ಮರಣೆ ಮಾಡುವುದರಿಂದ ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಹೊರಹೊಮ್ಮುತ್ತಾರೆ. ಹೀಗಾಗಿ ಗುರುವಿನ ಸ್ಮರಣೆ ಮಾಡುವುದು ಅವಶ್ಯಕವಾಗಿದೆ ಎಂದರು.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯ ಮೂಡಲಗಿ ವಲಯದಲ್ಲಿಯೇ ಕುಲಗೋಡ ವಲಯ ಶೈಕ್ಷಣಿಕವಾಗಿ ಹೆಚ್ಚು ಪ್ರಗತಿಯಾಗಿರುವುದು ಸಂತಸ ತಂದಿದೆ ಎಂದರು.
ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ. ಅಕ್ಷರ ಕಲಿಸಿದ ಗುರುಗಳನ್ನು ಸ್ಮರಿಸುವುದರ ಜೊತೆಗೆ ಎಲ್ಲ ಸ್ನೇಹಿತರನ್ನು ಭೇಟಿ ಮಾಡಿ ಕುಶಲೋಪರಿ ಹಂಚಿಕೊಳ್ಳುವುದು ಒಳ್ಳೆಯ ಬೆಳವಣಿಗೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಂಬಂಧ ಎನ್ನುವುದು ಮರಿಚಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಎಲ್ಲರನ್ನು ಕೂಡಿಸಿ ಕುಶಲೋಪರಿ ಹಂಚಿಕೊಳ್ಳುವುದು ಸಂತಸ ಮೂಡಿಸಿದೆ ಎಂದರು.
ಶಿಕ್ಷಕರಾದ ವ್ಹಿ.ಯು.ರಡ್ಡೇರಟ್ಡಿ. ಹಳೆ ವಿದ್ಯಾರ್ಥಿಗಳಾದ ಹಣಮಂತ ಚನ್ನಾಳ. ಸತೀಶ ಚಂದರಗಿ. ರಂಜನಾ ಯಕ್ಸಂಬಿ ಅನಿಸಿಕೆ ಹಂಚಿಕೊಂಡರು.ಆರಂಭದಲ್ಲಿ ನಿವೃತ್ತ ದೈಹಿಕ ಶಿಕ್ಷಕರು ಹಾಗೂ ಹಿರಿಯರಾದ ಎಸ್.ಬಿ.ಶಿಂಧೆ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ಎಲ್.ಆರ್.ಭಜಂತ್ರಿ ವಹಿಸಿದ್ದರು.ಸಂಸ್ಥೆಯ ಅಧ್ಯಕ್ಷ ಎಸ್.ಜಿ.ಪಂಡಿತ. ಶಿಕ್ಷಕರಾದ ಜಿ.ಎಸ್.ಗಾಣಿಗೇರ. ಎಸ್.ಎ.ಮುತ್ತೇನ್ನವರ. ಎಸ್.ಆರ್.ಕೆಳಗಡೆ. ಟಿ.ಬಿ.ದೇವರ. ಎಲ್.ಕೆ.ಹೊಸಮನಿ. ಬಿ.ಎಲ್.ಜೊತೆನ್ನವರ. ಬಿ.ವೈ.ಭಜಂತ್ರಿ ಶಿಕ್ಷಕರನ್ನು ಸನ್ಮಾನಿಸಲಾಯಿತು.ಮಂಜುನಾಥ ದೇವರ.‌ಅಮಿತ ಚನ್ನಾಳ.‌ಪ್ರಕಾಶ ಪಾಟೀಲ. ಶುಶಾಂತ ನಾಯಿಕ. ಬಸವರಾಜ ಕೊಪ್ಪದ. ಶಿವಲಿಂಗ ಉಗರಗೋಳ. ಆನಂದ ಸಿದ್ದು ಸಿದ್ದು ಮಾಳಿ. ಗಂಗಮ್ಮ ಚಂದರಗಿ. ಜ್ಯೋತಿ ಗಾಣಿಗೇರ.ಕೆ‌.ಟಿ.ಬಾಗಲಕೋಟ. ದುಂಡಪ್ಪ ಕೊಳವಿ. ಜಕ್ಕಪ್ಪ ಗೋಕಾವಿ. ಲಕ್ಷ್ಮಣ ದೇವರ. ಶಶಿಕಲಾ ಕಲಕುಟ್ರಿ. ಪ್ರೇಮಾ ಬಿಜ್ಜಿಗರ. ಮಹಾದೇವಿ ಅವರಾದಿ. ಬಾಳಕ್ಷೀ ಬಡಿಗೇರ ಮುಂತಾದವರು ಇದ್ದರು.ಸ ಚೀನ ಬಾರ್ಕಿ ಸ್ವಾಗತಿಸಿದರು. ಮಹಾದೇವ ಪೂಜೇರಿ ಪ್ರಾಸ್ತಾವಿಕ ಮಾತನಾಡಿದರು. ಸಂಗಪ್ಪ ಪೆಟ್ಲೂರ ಮತ್ತು ಜಯಶ್ರೀ ಅವಟಿಮಠ ನಿರೂಪಿಸಿದರು. ಗಾಳೇಪ್ಪ ಹೆಗಡೆ ವಂದಿಸಿದರು.


Spread the love

About Yuva Bharatha

Check Also

ಗೋಕಾಕ ಮತಕ್ಷೇತ್ರದಲ್ಲಿ ಝಣಝಣ ಕಾಂಚಾಣ ಸದ್ದು, ಕಾಂಗ್ರೇಸ್ ಅಭ್ಯರ್ಥಿಯಿಂದ ಮತದಾರರಿಗೆ ಹಣದ ಆಮಿಷ.!

Spread the loveಗೋಕಾಕನಲ್ಲಿ ಪ್ರತಿ ಮನೆಗೆ 1000, ಅಲ್ಪಸಂಖ್ಯಾತರಿಗೆ 500 ಕಾಂಗ್ರೇಸ್ ಕಾಂಚಾಣ ಸದ್ದು.! ಗೋಕಾಕ: ಲೋಕಸಭಾ ಚುನಾವಣೆ ಇನ್ನು …

Leave a Reply

Your email address will not be published. Required fields are marked *

two × 2 =