ಗುಜನಾಳ ಗ್ರಾಮದಲ್ಲಿ ಸರಳ ರೀತಿಯಲ್ಲಿ ಗಣೇಶನ ಬಿಳ್ಕೊಡುಗೆ.!
ಯುವ ಭಾರತ ಸುದ್ದಿ, ಗೋಕಾಕ್: ತಾಲೂಕಿನ ಗುಜನಾಳ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಗಣೇಶೋತ್ಸವ ಆಚರಿಸುತ್ತ ಬಂದಿರುವ ಗ್ರಾಮಸ್ಥರು ಪ್ರತಿ ವರ್ಷದಂತೆ ಈ ವರ್ಷವು ಸಾಮೂಹಿಕವಾಗಿ ಗಣೇಶ ವಿಸರ್ಜನೆ ನಡೆಸಿ ಸಂಭ್ರಮಿಸಿದರು.
ಮಂಗಳವಾರಂದು 11ನೇ ದಿನದ ಗಣೇಶ ವಿಸರ್ಜಣೆಯಲ್ಲಿ ಗುಜನಾಳ ಗ್ರಾಮಸ್ಥರು ಸಾಮಾಜಿಕ ಅಂತರ ಕಾಯ್ದುಕೊಂಡು ಗಣೇಶನ ವಿಸರ್ಜನೆಯಲ್ಲಿ ಭಾಗಿಯಾದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಭೀಮನಗೌಡ ಪೋಲಿಸಗೌಡರ, ಅಡಿವೆಪ್ಪ ನಾವಲಗಟ್ಟಿ, ಮಾಜಿ ತಾಪಂ ಅಧ್ಯಕ್ಷ ಸುಭಾಸ ಪಂದಲಿ, ಬಸು ದಾಸನವರ, ವೀರುಪಾಕ್ಷ ಅಂಗಡಿ, ಮಾರುತಿ ಗುತ್ತಿ, ಸೇರಿದಂತೆ ಅನೇಕರು ಇದ್ದರು.