Breaking News

ದಲಿತ ಯುವಕನ ಕೊಲೆ ಪ್ರಕರಣದ ಆರೋಪಿಗಳ ಮನೆಗಳ ಮೇಲೆ ದಾಳಿ..!!  

Spread the love

ದಲಿತ ಯುವಕನ ಕೊಲೆ ಪ್ರಕರಣದ ಆರೋಪಿಗಳ ಮನೆಗಳ ಮೇಲೆ ದಾಳಿ..!!

ಯುವ ಭಾರತ ಸುದ್ದಿ,   ಗೋಕಾಕ್:  ಬೆಳಗಾವಿ ಜಿಲ್ಲಾ ಪೋಲಿಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಕಳೆದ ನಾಲ್ಕು ತಿಂಗಳ ಹಿಂದೆ ನಡೆದಿದ್ದ ದಲಿತ ಯುವಕನ ಕೊಲೆ ಪ್ರಕರಣದ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ನಿ‌ನ್ನೆ ರಾತ್ರಿ ಆರೋಪಿಗಳ ಮನೆಗಳ ಮೇಲೆ ಸರ್ಚ್ ವಾರಂಟ್ ಜೊತೆಗೆ ನಡೆಸಿದ ದಾಳಿಯಲ್ಲಿ ಅಪಾರ ಪ್ರಮಾಣದ ನಗದು, ಮಾರಕಾಸ್ತ್ರ, ಮಾದಕ ವಸ್ತು ಸೇರಿದಂತೆ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ಗೋಕಾಕ್ ನಲ್ಲಿ ಸಿದ್ದು ಕನಮಡ್ಡಿ ಎಂಬ ಯುವಕನನ್ನು ಮಾರಕಾಸ್ತಗಳಿಂದ ಕೊಚ್ಚಿ ಕೊಲೆಗೈಲಾಗಿತ್ತು. ಆರೋಪಿಗಳೆಲ್ಲ ಸಧ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ. ಬೆಳಗಾವಿ ಎಸ್ಪಿ ಲಕ್ಷಣ ನಿಂಬರಗಿ, ಎಎಸ್ಪಿ ಅಮರನಾಥ್ ರೆಡ್ಡಿ ನೇತೃತ್ವದಲ್ಲಿ ನಡೆದ ದಾಳಿ ನಡೆದಿದ್ದು ಕೋರ್ಟ್ ವಿಧಿ ವಿಧಾನಗಳು ಮುಗಿದ ನಂತರ ಎಸ್ಪಿ ಲಕ್ಷಣ ನಿಂಬರಗಿ ಅಧಿಕೃತ ಮಾಹಿತಿ ನೀಡಲಿದ್ದಾರೆ.

ಒಂದು ಕೊಲೆ, 9 ಆರೋಪಿಗಳು,30 ಲಕ್ಷಕ್ಕೂ ಹೆಚ್ಚು ಹಣ ವಶ,ಕೊಲೆಯ ಹಿಂದಿನ ದೊಡ್ಡ ಜಾಲದ ಅಕ್ರಮ ದಂಧೆ ಬಯಲು,ಗೋಕಾಕನಲ್ಲಿ ನಡೆದ ಕೊಲೆಗೆ ಇದೆ ಗೋಕಾಕ ಟೈಗರ್ ಗ್ಯಾಂಗ್ ಲಿಂಕ್,ಮೇ 6 ನೇ ತಾರೀಕೂ ನಡೆದಿದ್ದ ಕೊಲೆ ಪ್ರಕರಣದ ಬೆನ್ನು ಬಿದ್ದಿರುವ ಪೊಲೀಸರು,ಪ್ರಕರಣ ಆರೋಪಿಗಳಿಂದ 30 ಲಕ್ಷಕ್ಕೂ ಹೆಚ್ಚಿನ ಹಣ ಪಿಸ್ತೂಲ,20 ಜೀವಂತ ಗುಂಡುಗಳು ವಶಕ್ಕೆ,ಗೋಕಾಕ ನಗರದ ಆದಿಜಾಂಬವ ನಗರದಲ್ಲಿ ನಡೆದಿದ್ದ ಕೊಲೆ ಪ್ರಕರಣ,ಕೊಲೆಗೆ ಸಂಬಂಧಪಟ್ಟವರ ತನಿಖೆಯಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶ,ಸಿದ್ದು ಕನಮಡ್ಡಿ ಎಂಬ ದಲಿತ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ತನಿಖೆ,ತನಿಖೆ ವೇಳೆ ಹತ್ಯೆಗೆ ಬಳಸಿದ್ದ ,ಪಿಸ್ತೂಲ್,ಹಣ ವಶ,ಮಾಧ್ಯಮಗಳಿಗೆ ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿಕೆ,ಸಧ್ಯ ತನಿಖಾ ಹಂತದಲ್ಲಿರುವ ಕೊಲೆ ಪ್ರಕರಣ,ಸಂಪೂರ್ಣ ತನಿಖೆಯ ನಂತರ ಬಯಲಾಗಲಿರುವ ಟೈಗರ್ ಗ್ಯಾಂಗ್ ನ ಕರಾಳತೆ,


Spread the love

About Yuva Bharatha

Check Also

ಬಿಜೆಪಿ ಸದಸ್ಯತ್ವ ಈ ಬಾರಿ ಅತಿ ಹೆಚ್ಚಿನ ಸಾಮಾನ್ಯ ಸದಸ್ಯರನ್ನು ಸೇರ್ಪಡೆಗೊಳಿಸಿ-ರಮೇಶ ಜಾರಕಿಹೊಳಿ.!

Spread the loveಬಿಜೆಪಿ ಸದಸ್ಯತ್ವ ಈ ಬಾರಿ ಅತಿ ಹೆಚ್ಚಿನ ಸಾಮಾನ್ಯ ಸದಸ್ಯರನ್ನು ಸೇರ್ಪಡೆಗೊಳಿಸಿ-ರಮೇಶ ಜಾರಕಿಹೊಳಿ.! ಗೋಕಾಕ: ವಿಶ್ವದಲ್ಲಿ ಅತಿ …

Leave a Reply

Your email address will not be published. Required fields are marked *

six + 14 =