ಸಾಧಿಸುವ ಛಲ ಇರಲಿ
ಯುವ ಭಾರತ ಸುದ್ದಿ ಬಸವನಬಾಗೇವಾಡಿ : ಸತತ ಪ್ರಯತ್ನ, ಆತ್ಮವಿಶ್ವಾಸ, ಧನಾತ್ಮಕ ಚಿಂತನೆ,ಸ್ಪಷ್ಟ ಗುರಿ,ಸಾಧಿಸುವ ಛಲ ಇದ್ದರೆ ಅಸಾಧ್ಯವೂ ಸಾಧ್ಯವಾಗುತ್ತದೆ ಎಂದು ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಎನ್.ಎಂ.ಬಿರಾದಾರ ಹೇಳಿದರು.
ಸ್ಥಳೀಯ ಅಕ್ಕನಗಮ್ಮ ಬಾಲಕಿಯರ ಸರಕಾರಿ ಪ್ರೌಢಶಾಲೆಯಲಿ ಜರುಗಿದ 2022-23 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾನಾಡುತ್ತಿದ್ದರು. ಎಸೆಸೆಲ್ಸಿ ನಂತರ ಮುಂದೇನು ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಕಲೆ,ವಾಣಿಜ್ಯ,ವಿಜ್ಞಾನ ದ ಹೊರತಾಗಿಯೂ ಬದುಕಿಗೆ ಭದ್ರತೆ ನೀಡುವ ಹಲವಾರು ಕೋರ್ಸುಗಳ ಕುರಿತ ಮಾಹಿತಿ ನೀಡಿದರು.ಸೋಲು ಬದುಕಿನ ಕೊನೆಯಲ್ಲ ಭವ್ಯ ಬದುಕು ಮುಂದೆ ಕಾದು ನಿಂತಿದೆ ತಾಳ್ಮೆ ಇರಲಿ ಎಂದರು.
ಸತ್ಯಜೀತ ಪಾಟೀಲ ಮಾತನಾಡಿ ವಿವೇಕಾನಂದರ ಬದುಕು ಆದರ್ಶವಾಗಲಿ ಎಂದು ಶುಭಹಾರೈಸಿದರು.ವಿರಕ್ತ ಮಠದ ಪೂಜ್ಯಸಿದ್ಧಲಿಂಗ ಶ್ರೀಗಳು ಸಾನಿಧ್ಯ ವಹಿಸಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ p.u.ರಾಠೋಡ,ಬಾಬು ಕೆಂಭಾವಿ ಅಧ್ಯಕ್ಷತೆ ವಹಿಸಿದ್ದರು.ಬಸವರಾಜ.ಪೂಜಾರಿ,ಶ್ರೀಮತಿ C N ಪವಾರ, ಪುರಸಭೆ ಸದಸ್ಯದೇವೇಂದ್ರ ಚವ್ಹಾಣ, ವಿದ್ಯಾರ್ಥಿ ಪ್ರತಿನಿಧಿ ಕುಮಾರಿ ರಕ್ಷಿತಾ ಕೋರಿ,ಶ್ರೀ ಕಿಣಗಿ,ಪಾಲಕರ ಪ್ರತಿನಿಧಿ ಪ್ರಕಾಶ್ ನೆಗಿನಾಳ ಹಾಜರಿದ್ದರು.ಅಶೋಕ ಹಂಚಲಿ ನಿರೂಪಿಸಿದರು.ಶ್ರೀಮತಿ ರೂಪಾ ಆಶ್ರಿತ ಸ್ವಾಗತಿಸಿದರು.ಶ್ರೀಮತಿ ಸ್ನೇಹಾ ಪೂಜಾರ ವಂದಿಸಿದರು.ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು