ಹಿಡ್ಕಲ್ ಡ್ಯಾಂ ಹತ್ತೂ ಗೇಟ್ ಗಳು
ಓಪನ್…
ತೆರೆದ ಹಿಡಕಲ್ ಜಲಾಶಯದಿಂದ
ಹತ್ತು ಗೇಟ್ ಗಳು..!!
ಅಶೋಕ ಚಂದರಗಿ, ಬೆಳಗಾವಿ
ಯುವ ಭಾರತ ಸುದ್ದಿ
ಹಿಡ್ಕಲ್ ಡ್ಯಾಂ ಹತ್ತೂ ಗೇಟ್ ಗಳು
ಓಪನ್: ಹತ್ತು ಸಾವಿರ ಕ್ಯೂಸೆಕ್ಸ
ಬಿಡುಗಡೆ:ಆದರೂ ಸದ್ಯಕ್ಕೆ ನೆರೆಯ
ಆತಂಕವಿಲ್ಲ:ನವಿಲುತೀರ್ಥದಿಂದ
ಒಂದೇ ಸಾವಿರ ಕ್ಯೂಸೆಕ್ಸ ಹೊರಕ್ಕೆ:
ಆಲಮಟ್ಟಿಯಲ್ಲಿ 92.726 ,
ಕೊಯ್ನಾದಲ್ಲಿ 74.44 ಟಿ ಎಮ್ ಸಿ,
ವರುಣನ ಅರ್ಭಟ ತಗ್ಗುತ್ತಿದ್ದು ವಿವಿಧ ಆಣೆಕಟ್ಟುಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲೂ ಗಮನಾರ್ಹವಾಗಿ ಇಳಿಕೆಯಾಗಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ
ತಾಲೂಕಿನ ಹಿಡ್ಕಲ್ ಜಲಾಶಯದ ಒಳಹರಿವು ಇಂದು ಸೋಮವಾರ 20 ಸಾವಿರಕ್ಕೆ ತಗ್ಗಿದೆ.51 ಟಿ ಎಮ್ ಸಿ ಸಾಮರ್ಥ್ಯದ ಆಣೆಕಟ್ಟೆಯಲ್ಲಿ ಈಗ 47.15 ಟಿ ಎಮ್ ಸಿ ನೀರಿನ ಸಂಗ್ರಹವಾಗಿದೆ.
ಆಣೆಕಟ್ಟು ತುಂಬಲು ಇನ್ನು ಮೂರುವರೆ ಟಿ ಎಮ್ ಸಿ ಬಾಕಿ ಉಳಿದಿರುವದರಿಂದ ಇಂದು ಎಲ್ಲ ಹತ್ತೂ ಗೇಟುಗಳನ್ನು ತೆರೆಯಲಾಯಿತು.ಘಟಪ್ರಭಾ ನದಿಗೆ 8 ಸಾವಿರ ಮತ್ತು ಕಾಲುವೆಗಳಿಗೆ ಎರಡು ಸಾವಿರ ಕ್ಯೂಸೆಕ್ಸ ನೀರನ್ನು ಹರಿಬಿಡಲಾಯಿತು.ಇದು ಕಡಿಮೆ ಪ್ರಮಾಣದ ನೀರಾಗಿದ್ದು ಹುಕ್ಕೇರಿ,ಗೋಕಾಕ ಮತ್ತು ಮುಧೋಳ ತಾಲೂಕುಗಳ ನದಿ ತೀರದ ಗ್ರಾಮಗಳಲ್ಲಿ ಸದ್ಯ ಯಾವದೇ ಪ್ರವಾಹದ ಭೀತಿಯಿಲ್ಲ.
( ಹಿಡ್ಕಲ್ ಆಣೆಕಟ್ಟಿನ ಗೇಟುಗಳನ್ನು ತೆರೆದ ತಕ್ಷಣ ಸೆರೆಹಿಡಿದ ಇಂದಿನ ವಿಡಿಯೊ ಹಾಗೂ ಫೋಟೊ ಇಲ್ಲಿ ಹಾಕಲಾಗಿದೆ)
ಸವದತ್ತಿ ಬಳಿಯ ನವಿಲುತೀರ್ಥ
ಆಣೆಕಟ್ಟೆಯಿಂದ ಸೋಮವಾರ ಕೇವಲ ಒಂದೇ ಸಾವಿರ ಕ್ಯೂಸೆಕ್ಸ ಬಿಡುಗಡೆ ಮಾಡಲಾಗುತ್ತಿದೆ.ಒಳಹರಿವು ಕೇವಲ 8 ಸಾವಿರ ಕ್ಯೂಸೆಕ್ಸ ಇದೆ.
ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಕೊಯ್ನಾ ಆಣೆಕಟ್ಟಿನಲ್ಲಿ ಸೋಮವಾರ ಮಧ್ಯಾನ್ಹ 2 ಗಂಟೆಯವರೆಗೆ 74.44 ಟಿ ಎಮ್ ಸಿ ನೀರು ಸಂಗ್ರಹವಾಗಿದೆ.ಒಟ್ಟು ಸಾಮರ್ಥ್ಯ 105 ಟಿ ಎಮ್ ಸಿ.ಕೊಯ್ನಾ ಸುತ್ರಮುತ್ತಲೂ ಮಳೆಯ ಅಬ್ಬರವೂ ಕಡಿಮೆ.
ವಿಜಯಪುರ ಜಿಲ್ಲೆಯ ಆಲಮಟ್ಟಿ ಆಣೆಕಟ್ಟೆಯಲ್ಲಿ ಸೋಮವಾರ ಮಧ್ಯಾನ್ಹ 12 ಗಂಟೆಯವರೆಗೆ 92.726 ಟಿ ಎಮ್ ಸಿ ನೀರು ನಿಂತಿದೆ.ಒಟ್ಟು 519 ಮೀಟರ್ ಎತ್ತರದ ಆಣೆಕಟ್ಟೆಯಲ್ಲಿ 517.64 ಮೀ.ವರೆಗೂ ನೀರು ಸಂಗ್ರಹವಿದೆ.