Breaking News

|ನಿಜವಾದ ಕಾರ್ಮಿಕರಿಗಿಲ್ಲ | “ಕಾರ್ಮಿಕ ಇಲಾಖೆಯ ಆಹಾರ ಕಿಟ್ಟ”..!!

Spread the love

ಮೂಡಲಗಿ ಕಾರ್ಮಿಕ ಇಲಾಖೆಯ ಕರ್ಮಕಾಂಡ ! ಫಲಾನುಭವಿಗಳ ಆಯ್ಕೆ ಇಲ್ಲದೆ ಮನಸ್ಸಿಗೆ ಬಂದ ಹಾಗೆ ಕಿಟ್ಟ ವಿತರಿಸಿದ ಅಧಿಕಾರಿ..
ನಿಜವಾದ ಕಾರ್ಮಿಕರಿಗಿಲ್ಲ “ಕಾರ್ಮಿಕ ಇಲಾಖೆಯ ಆಹಾರ ಕಿಟ್ಟ”

ಯುವ ಭಾರತ ಸುುದ್ದಿ  ಮೂಡಲಗಿ : ಕಳೆದ ನಾಲ್ಕು ತಿಂಗಳಿAದ ಕೊರೋನಾದಿಂದ ಸಂಕಷ್ಟ ಅನುಭವಿಸುತ್ತಿದ್ದು ಬಡಜನತೆ ಜೀವನ ಸಾಗಿಸಲೂ ಕಷ್ಟಪಡುತ್ತಿದ್ದಾರೆ. ಬಡ ಜನರಿಗೆ ಕೆಲಸವಿಲ್ಲದೇ ಪರದಾಟುವ ಸ್ಥಿತಿ ನಿರ್ಮಾಣವಾಗಿದೆ ಇಂತಹ ಸಂದರ್ಭದಲ್ಲಿ ಸರ್ಕಾರದಿಂದ ಸೌಕರ್ಯಗಳು ಇದ್ದರು ಇಲ್ಲಿಯ ಜನರಿಗೆ ಸಿಗದೇ ಬಡ ಜನತೆ ಕಷ್ಟ ಅನುಭವಿಸುತ್ತಿದ್ದಾರೆ ಇದಕ್ಕೆ ಕಾರ್ಮಿಕ ಇಲಾಖೆಯ ಅಧಿಕಾರಿಯ ಬೇಜವಾಬ್ದಾರಿಯೇ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ತಾಲೂಕಿನ ಬಡ ಕಾರ್ಮಿಕರು ಸಂಕಷ್ಟ ಅನುಭವಿಸುತ್ತಿರುವುದು ಕಂಡು ಬಂದರೆ ಅವರಿಗೆ ಸರ್ಕಾರದಿಂದ ಬಂದಿರುವ ಸೌಲಭ್ಯವನ್ನು ಒದಗಿಸಿಕೊಡಬೇಕಾದದ್ದು ಕಾರ್ಮಿಕ ಇಲಾಖೆಯ ಅಧಿಕಾರಿಗಳ ಕರ್ತವ್ಯ. ಆದರೆ ಮೂಡಲಗಿ ಪಟ್ಟಣದಲ್ಲಿ ಕಾರ್ಮಿಕರ ಆಹಾರ ಕಿಟ್ಟಗಳನ್ನು ವಿತರಿಸಿ, ಕಾರ್ಮಿಕರ ಕೆಂಗಣ್ಣಿಗೆ ಗುರಿಯಾದ ಕಾರ್ಮಿಕ ಇಲಾಖೆಯ ನಿರೀಕ್ಷಕ ಅಧಿಕಾರಿ ಎಂ ವಿ ಮಾವರಕರ ಸಾಹೇಬರು.
ಹೌದು ಲಾಕ್ ಡೌನ್ ಸಂದರ್ಭದಲ್ಲಿ ಕಾರ್ಮಿಕರಿಗಾಗಿ ಬಂದಿರುವ ಸುಮಾರು 400 ಆಹಾರ ಕೀಟಗಳನ್ನು ಎರಡು ತಿಂಗಳು ಮಾಯವಾಗಿದ್ದ ಆಹಾರ ಕಿಟ್ಟಗಳು ಇವಾಗ ಹೇಗೆ ಪ್ರತ್ಯಕ್ಷವಾಗಿದ್ದು ಸಾರ್ವಜನಿಕರಲ್ಲಿ ಅನುಮಾನ ಹುಟ್ಟುವಂತೆ ಮಾಡಿದೆ. ಸುಮಾರು ಎರಡು ತಿಂಗಳು ಹಿಂದೆ ಬಂದಿರುವ ಕಿಟ್ಟಗಳನ್ನು ವಿತರಣೆ ಮಾಡದೆ ಹಾಗೆ ಇಟ್ಟಿರುವ ಹಿಂದೆ ಏನಾದರೂ ಕುತಂತ್ರ ಇತ್ತಾ ಆ ದೇವರೇ ಬಲ್ಲ.

ಕಾರ್ಮಿಕ ಇಲಾಖೆಯ ಸಾಹೇಬರು ಶನಿವಾರರಂದು ಏಕಾಏಕಿಯಾಗಿ ಕಾರ್ಮಿಕ ಇಲಾಖೆಯ ಆಹಾರ ಕಿಟ್ಟಗಳನ್ನು ಮನಸ್ಸಿಗೆ ಬಂದ ಹಾಗೆ ವಿತರಣೆ ಮಾಡಿದ್ದು ಅಷ್ಟೇ ಅಲ್ಲದೆ ಫಲಾನುಭವಿಗಳ ಆಯ್ಕೆ ಹಾಗೂ ಅವರ ದಾಖಲೆಗಳನ್ನು ಪರಿಶೀಲಿಸದೆ ಆಹಾರ ಕಿಟ್ಟ ವಿತರಣೆ ಮಾಡಿದ್ದು ಎಷ್ಟು ಸರಿ ಎಂಬುವುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ ?

ಈ ಅಧಿಕಾರಿಗೆ ಯಾವ ರೀತಿಯಾಗಿ ಹಂಚಿಕೆ ಮಾಡಬೇಕೆಂಬ ಇಲಾಖೆಯ ಅಧಿಸೂಚನೆ ಇಲ್ಲವೇ, ಹಾಗೇ ಕಿಟ್ಟ ಹಂಚಿಕೆ ಮಾಡಬೇಕಾದರೇ ಮೊದಲೇ ಕಾರ್ಮಿಕರಿಗೆ ಮಾಹಿತಿ ನೀಡಬೇಕೆಲ್ಲವೇ, ಇವುಗಳನ್ನು ಯಾವುದು ಮಾಡದೆ ಏಕಾಏಕಿಯಾಗಿ ಬಂದು ತನ್ನಷ್ಟಕ್ಕೆ ತಾನೆ ಕಿಟ್ಟಿಗಳನ್ನು ವಿತರಣೆ ಮಾಡಿದ್ದು ಖಂಡನೀಯ.

ಇಷ್ಟು ದಿನ ವಿತರಣೆ ಮಾಡದೇ ಇರುವ ಆಹಾರ ಕಿಟ್ಟುಗಳನ್ನು ಇಷ್ಟು ಅವಸರವಾಗಿ ವಿತರಣೆ ಮಾಡಿರುವ ಹಿಂದೆ ಏನಾದರೂ ಕುತಂತ್ರ ಇರಬಹುದಾ ಅಥವಾ ಅಧಿಕಾರಿ ತಮ್ಮ ಇಲಾಖೆಯ ಕರ್ತವ್ಯ ನಿಯಮಗಳನ್ನು ಮೀರಿ ಕಾಣದ ಕೈಗಳ ಕೆಳಗೆ ಕರ್ತವ್ಯ ನಿರ್ವಹಿಸುವಂತೆ ಭಾಸವಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಅದು ಅಲ್ಲದೆ ಮೂಡಲಗಿ ಪಟ್ಟಣದಲ್ಲಿ ಕಾರ್ಮಿಕರಿಗೆ ಅಷ್ಟೇ ಕಿಟ್ಟ ವಿತರಿಸಿದ ಕಾರ್ಮಿಕ ಇಲಾಖೆಯ ಅಧಿಕಾರಿ ಹಾಗಾದರೆ ಮೂಡಲಗಿ ಪಟ್ಟಣದಲ್ಲಿ ಅಷ್ಟೇ ಕಾರ್ಮಿಕರು ಇದ್ದಾರಾ ಅಥವಾ ಬೇರೆ ಹಳ್ಳಿಗಳಲ್ಲಿ ಇಲ್ವಾ ಎಂಬ ಪ್ರಶ್ನೆಯು ಕೂಡ ಉದ್ಭವಿಸಿದೆ.
ಮೂರು ತಿಂಗಳ ಹಿಂದೆ ಬಂದಿರುವ ಕಿಟ್ಟಗಳನ್ನು ಇಷ್ಟು ದಿನ ಯಾವ ಕಾರಣಕ್ಕಾಗಿ ವಿತರಣೆ ಮಾಡಲಿಲ್ಲ, ಹಾಗೂ ಏಕಾಏಕಿಯಾಗಿ ವಿತರಣೆ ಮಾಡಿದ ಫಲಾನುಭವಿಗಳ ಆಯ್ಕೆ ಯಾವ ತರನಾಗಿ ಮಾಡಿದರು ಎಂಬುದರ ಬಗ್ಗೆ ಮಾತ್ರ ಅಧಿಕಾರಿ ಬಾಯಿಬಿಟ್ಟಿಲ್ಲ.

ಅದು ಏನೇ ಆಗಲಿ ಹೀಗೆ ಮೂರು ತಿಂಗಳಿAದ ವಿತರಿಸದೆ ಇರುವ ಕಿಟ್ಟಗಳಲ್ಲಿ ಇರುವ ದಿನಸಿ ವಸ್ತು ಹಾಳಾಗಿ ಹೋಗಿದಿಯಾ ಅಥವಾ ಚೆನ್ನಾಗಿದಿಯಾ ಎಂಬುವುದು ಯಾರು ಬಲ್ಲವರು.

ಇನ್ನಾದರೂ ಇದಕ್ಕೆ ಸಂಬAಧಪಟ್ಟ ಮೇಲಾಧಿಕಾರಿಗಳು ಅಧಿಕಾರಿ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಂಡು ಕಿಟ್ಟ ವಿತರಣೆಯಲ್ಲಿಯಾದ ಅವ್ಯವಹಾರವನ್ನು ಸರಿ ಪಡಿಸಿ. ಸರಿಯಾದ ಕ್ರಮ ಕೈಗೊಳ್ಳುತ್ತಾರಾ ಎಂದು ಕಾದು ನೋಡಬೇಕು ಅಷ್ಟೇ.

ಸಾರ್ವಜನಿಕರ ಆಗ್ರಹ : ಶನಿವಾರರಂದು ವಿತರಣೆಯಾದ ಕಾರ್ಮಿಕರ ಇಲಾಖೆಯ ಆಹಾರ ಕಿಟ್ಟಗಳು ನಿಜವಾದ ಕಾರ್ಮಿಕರಿಗೆ ತಲುಪಿಲ್ಲ ಅದು ಇಲಾಖೆಯ ಅಧಿಕಾರಿಗಳ ಲಂಚದ ಆಟಕ್ಕೆ ಹೆಸರಿಗೆ ಮಾತ್ರ ಸರ್ಕಾರ ದಾಖಲೆಯಲ್ಲಿ ಕಾರ್ಮಿಕರಾಗಿರುವ ಜನರ ಕೈಗೆ ಆಹಾರ ಕಿಟ್ಟುಗಳು ತಲುಪಿವೆ. ಆದರಿಂದ ಮೇಲಾಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕು. ನಂತರ ನಿಜವಾದ ಕಾರ್ಮಿಕರಿಗೆ ಆಹಾರ ಕಿಟ್ಟಗಳನ್ನು ತಪುಲಿಸುವಂತ ಕೆಲಸ ಮಾಡಬೇಕು.


Spread the love

About Yuva Bharatha

Check Also

31 ವಿವೇಕ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 4.37 ಕೋಟಿ ರೂ. ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love31 ವಿವೇಕ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 4.37 ಕೋಟಿ ರೂ. ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ …

Leave a Reply

Your email address will not be published. Required fields are marked *

ten + 18 =