ಅಕ್ರಮ ಕುಕ್ಕರ್ ವಶ

ಯುವ ಭಾರತ ಸುದ್ದಿ ಬೆಳಗಾವಿ :
ಸವದತ್ತಿ ತಾಲೂಕು ತೆಗ್ಗಿಹಾಳ ಗ್ರಾಮದ ಬಳಿ ಸವದತ್ತಿ ಮತ್ತು ರಾಮದುರ್ಗ ತಾಲೂಕುಗಳ ಗಡಿ ಅಂಚಿನ ತೋಟದ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ಕುಕ್ಕರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶನಿವಾರ ಮಧ್ಯಾಹ್ನ ತೋಟದ ಮನೆಯ ತಗಡಿನ ಶೀಟ್ ನಲ್ಲಿ ಇದ್ದ 1600 ಕುಕ್ಕರ್ ಗಳನ್ನು ಪೊಲೀಸರು ಹಾಗೂ ಎಸ್ ಟಿ ಎಫ್ ತಂಡ ಪತ್ತೆ ಮಾಡಿ ವಶಪಡಿಸಿಕೊಂಡಿದೆ. ಜಿಲ್ಲಾ ಚುನಾವಣಾ ಅಧಿಕಾರಿ, ಜಿಲ್ಲಾಧಿಕಾರಿ ನಿತೀಶ ಪಾಟೀಲ ಅವರ ನಿರ್ದೇಶನದ ಮೇರೆಗೆ ಅಧಿಕಾರಿಗಳ ತಂಡ ಈ ದಾಳಿ ನಡೆಸಿದೆ.
YuvaBharataha Latest Kannada News