ಮೇ 29 ರಿಂದ ಲಕ್ಷ್ಮೀದೇವಿ ನೂತನ ದೇವಸ್ಥಾನ ಉದ್ಘಾಟನೆ
ಮೂಡಲಗಿ:
ಪಟ್ಟಣದ ಗಾಂಧಿ ಚೌಕ ಹತ್ತಿರ ಢವಳೇಶ್ವರ ಓಣಿಯಲ್ಲಿರುವ ನೂತನವಾಗಿ ನಿರ್ಮಿಸಿದ ಶ್ರೀ ಲಕ್ಷ್ಮೀದೇವಿ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಹಾಗೂ ಜಾತ್ರಾ ಮಹೋತ್ಸವ ಮೇ.೨೯ ಮತ್ತು ೩೦ ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಾತ್ರಾ ಕಮಿಟಿ ತಿಳಿಸಿದ್ದಾರೆ.
ಮೇ.೨೯ ರಂದು ಮುಂಜಾನೆ ಪಟ್ಟಣದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಿಂದ ಕುಂಭ ಮೇಳ, ಸಕಲ ವಾದ್ಯಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಜರುಗುವುದು. ನಂತರ ಹೋಮ-ಹವನದೊಂದಿಗೆ ಶ್ರೀ ಲಕ್ಷ್ಮೀದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಮಧ್ಯಾಹ್ನ ಮಹಾಪ್ರಸಾದ ಜರುಗಲಿದೆ.
ಸಮಾರಂಭದ ಸಾನ್ನಿಧ್ಯವನ್ನು ಪಟ್ಟಣದ ಶ್ರೀ ದತ್ತಾತ್ರೇಯ ಬೋಧ ಸ್ವಾಮೀಜಿ, ಶ್ರೀಧರಭೋದ ಸ್ವಾಮೀಜಿ ಮತ್ತು ಸುಣಧೋಳಿಯ ಶ್ರೀ ಶಿವಾನಂದ ಸ್ವಾಮಿಜಿ ವಹಿಸುವರು, ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಸುಭಾಸ ಢವಳೇಶ್ವರ ಉದ್ಘಾಟಿಸುವರು. ಅಂದು ರಾತ್ರಿ 9 ಘಂಟೆಗೆ ಹಳ್ಳೂರ, ರಾಜಾಪೂರ ತಂಡದಿಂದ ಡೊಳ್ಳಿನ ಪದಗಳು ಜರಗುವವು.
ಮೇ.೩೦ ರಂದು ಮುಂಜಾನೆ 8 ಕ್ಕೆ ಶ್ರೀ ಲಕ್ಷ್ಮೀದೇವಿ ಗೆ ಅಭಿಷೇಕ ನಂತರ ಉಡಿ ತುಂಬುವು ಮತ್ತು ಮಧ್ಯಾಹ್ನ ಮಹಾಪ್ರಸಾದ ಜರುಗಲಿದೆ ಜಾತ್ರಾ ಕಮೀಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.