Breaking News

ಕಾಂಗ್ರೆಸ್ ನ ದುರಹಂಕಾರ, ದ್ವೇಷದ ಆಡಳಿತದ ಆಯಸ್ಸು ಲೋಕಸಭಾ ಚುನಾವಣೆಯವರೆಗೆ ಮಾತ್ರ: ಮಾಜಿ ಸಿಎಂ ಬೊಮ್ಮಾಯಿ

Spread the love

ಕಾಂಗ್ರೆಸ್ ನ ದುರಹಂಕಾರ, ದ್ವೇಷದ ಆಡಳಿತದ ಆಯಸ್ಸು ಲೋಕಸಭಾ ಚುನಾವಣೆಯವರೆಗೆ ಮಾತ್ರ: ಮಾಜಿ ಸಿಎಂ ಬೊಮ್ಮಾಯಿ

ಬೆಂಗಳೂರು :
ಕಾಂಗ್ರೆಸ್ ನ ದುರಹಂಕಾರ ಮತ್ತು ದ್ವೇಷದ ಆಡಳಿತದ ಆಯಸ್ಸು ಲೋಕಸಭಾ ಚುನಾವಣೆಯವರೆಗೆ ಮಾತ್ರ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನೂತನವಾಗಿ ಸರ್ಕಾರ ರಚನೆ ಆಗಿದೆ. 8 ಜನರು ಕೂಡ ಸಚಿವರು ಆಗಿದ್ದಾರೆ. ಆ ಸಚಿವರು ಮಾತನಾಡುವುದನ್ನು ನೋಡಿದರೆ, ದ್ವೇಷದ, ಸೇಡಿನ ರಾಜಕಾರಣ ಮಾಡಲು ಪ್ರಾರಂಭ ಮಾಡಿದ್ದಾರೆ. ಅಭಿವೃದ್ಧಿಗಿಂತ ಸೇಡು, ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅವರು ಏನೇ ಮಾಡಿದರೂ, ಅದನ್ನು ಎದರಿಸಲು ನಾವು ಸಿದ್ದರಿದ್ದೇವೆ. ಇದನ್ನು ನಾವು ಸಮರ್ಥವಾಗಿ ಎದುರಿಸುವುದಲ್ಲದೇ, ಅವರ ವಿಚಾರವನ್ನು ನಾವು ಹಿಮ್ಮೆಟ್ಟಿಸುತ್ತೇವೆ ಎಂದರು.
ಚುನಾಯಿತ ಸರ್ಕಾರದ ಮುಂದೆ ಜನರ ಸಮಸ್ಯೆಗಳಿವೆ. ಸಮಸ್ಯೆಗಳ ಬಗೆಹರಿಸಲು ತುರ್ತಾದ ನಿರ್ಣಯ ಎಲ್ಲೂ ಕಾಣುತ್ತಿಲ್ಲ. ರಾಜ್ಯದಲ್ಲಿ ಇವತ್ತು ಕುಡಿಯುವ ನೀರಿನ ಸಮಸ್ಯೆ ದೊಡ್ಡದಾಗಿದೆ. ಆದರೆ, ಆ ಸಮಸ್ಯೆ ಬಗೆಹರಿಸುವ ಬಗ್ಗೆ ಗಮನ ಕೊಟ್ಟಿಲ್ಲ. ಕೇವಲ ಸೂಚನೆ ಕೊಡುವುದರಲ್ಲಿ ಕಾಳ ಕಳೆಯುತ್ತಿದ್ದಾರೆ. ಹಣ ಕೂಡ ಬಿಡುಗಡೆ ಮಾಡಿಲ್ಲ. ಬರ ಪೀಡಿತ ತಾಲ್ಲೂಕುಗಳು, ಕುಡಿಯುವ ನೀರಿನ ತಾಲ್ಲೂಕುಗಳ ಬಗ್ಗೆ ಪತ್ತೆ ಹಚ್ಚಿಲ್ಲ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಸಾಕಷ್ಟು ಹಣ ಇದೆ. ಅದನ್ನು ಬಳಸಿಕೊಂಡು ಸಮಸ್ಯೆ ಬಗೆಹರಿಸಿ ಎಂಬ ಸೂಚನೆ ಸಿಎಂ ರಿಂದಲೂ ಹೋಗಿಲ್ಲ ಎಂದರು.
ಸಚಿವರಿಗೆ ಇನ್ನೂ ಖಾತೆಯೇ ಆಗಿಲ್ಲ. ಅವರಿಗೆ ಇನ್ನೂ ಅಧಿಕಾರನೇ ಸಿಕ್ಕಿಲ್ಲ. ಕೇವಲ ಇವ್ರು ಅಧಿಕಾರಕ್ಕಾಗಿ ಬಡಿದಾಡುತ್ತಿದ್ದಾರೆ. ಸಚಿವರಿಗೆ ಖಾತೆ ಹಂಚಿಕೆ ಬಗ್ಗೆ ವಿಧಾನಸಭೆಯಲ್ಲಿ ಕೇಳಿದ್ದೇನೆ. ನಾನು ನನಗೋಸ್ಕರ ಈ ಮಾತು ಕೇಳಿಲ್ಲ. ಜನರಿಗಾಗಿ ಈ ಮಾತು ಕೇಳಿದ್ದೇನೆ. ಈ ರೀತಿಯ ಆಡಳಿತವನ್ನು ನಾನು ಹಿಂದೆಂದು ನೋಡಿಲ್ಲ ಎಂದರು.
ಜನರನ್ನು ಭಯಪಡಿಸಿ ಆಡಳಿತ ಮಾಡುವ ಭ್ರಮೆ :
ರಾಷ್ಟ್ರದಲ್ಲಿ ಪ್ರತಿಯೊಬ್ಬರಿಗೂ ಸಂವಿಧಾನದ ವಾಕ್ ಸ್ವಾತಂತ್ರ್ಯವಿದೆ. ರಾಜಕೀಯ ಟೀಕೆ ಮಾಡಿದರೆ ಕೇಸ್ ಹಾಕುತ್ತೇವೆ ಎನ್ನುತ್ತಿದ್ದೀರಿ. ಪ್ರತಿ ನಿತ್ಯ ಕೇಸ್ ಹಾಕಲಾಗುತ್ತಿದೆ. ಅಶ್ವಥ್ ನಾರಾಯಣ್, ಹರಿಶ್ ಪೂಂಜಾ ಮೇಲೆ ಹಾಕಿದ್ದಾರೆ. ಇದು ಒಂದು ದುರಹಂಕಾರದ ಆಡಳಿತ, ದ್ವೇಷದ ಆಡಳಿತ. ದಮನಕಾರಿ ಆಡಳಿತ ಪ್ರಾರಂಭದಲ್ಲೇ ಮಾಡಿದ್ದಾರೆ. ಜನರನ್ನು ಭಯಪಡಿಸಿ ಆಡಳಿತ ಮಾಡುವ ಭ್ರಮೆ ಇವರಲ್ಲಿದೆ. ಜನ ಮನ್ನಣೆ ಪಡೆದ ಸರ್ಕಾರ ಕೆಲವೇ ದಿನಗಳಲ್ಲಿ ಜನರ ಆಕ್ರೋಶಕ್ಕೆ ಒಳಗಾಗುತ್ತದೆ ಎಂದರು.
ಆರ್.ಎಸ್.ಎಸ್, ಬಜರಂಗದಳ ಬ್ಯಾನ್ ಮಾಡುವ ಅಧಿಕಾರ ಇಲ್ಲ :
ಆರ್. ಎಸ್. ಎಸ್, ಬಜರಂಗದಳ ಬ್ಯಾನ್ ಬಗ್ಗೆ ಹೇಳುತ್ತಾರೆ. ಅವರಿಗೆ ನಾವು ಸವಾಲು ಹಾಕುತ್ತೇನೆ. ದಯವಿಟ್ಟು ಅವರು ಬ್ಯಾನ್ ಮಾಡಿ ತೋರಿಸಲಿ. ಯಾವುದೇ ಸಂಘ ಸಂಸ್ಥೆಯನ್ನು ಬ್ಯಾನ್ ಮಾಡುವ ಅಧಿಕಾರ ಇವರಿಗಿಲ್ಲ. ಅದನ್ನು ಮಾಡುವುದು ಕೇಂದ್ರ ಸರ್ಕಾರ. ಇದೆಲ್ಲ ಗೊತ್ತಿದ್ದರೂ ಕೂಡ ತುಷ್ಟೀಕರಣ ರಾಜಕಾರಣ ಮಾಡಲು ಹೊರಟ್ಟಿದ್ದಾರೆ. ಯಾರಿಗೆ ತುಷ್ಟೀಕರಣ ಮಾಡುತ್ತಿದ್ದಾರೋ, ಅವರಿಗೂ ಇವರು ಯಾಮಾರಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು, ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ಹೇಳಲಿ ಎಂದು ಪ್ರಶ್ನೆ ಮಾಡಿದರು.
ಸಿದ್ದರಾಮಯ್ಯ ಅವರು ನಿಮ್ಮ ಸಚಿವರ ಮಾತಿಗೆ ಒಪ್ಪಿಗೆ ಕೊಡ್ತಿರಾ..? ಹೇಗೆ ಎಂದು ರಾಜ್ಯದ ಜನರಿಗೆ ಸ್ಪಷ್ಟ ಪಡಿಸಬೇಕು. ಅದನ್ನು ಬ್ಯಾನ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಬ್ಯಾನ್ ಮಾಡಲು ಹೊರಟವರನ್ನು ಈಗಾಗಲೇ ಮನೆಗೆ ಕಳುಹಿಸಿದ್ದಾರೆ. ಇದನ್ನು ನಾವು ಸವಾಲಾಗಿ ಸ್ವೀಕಾರ ಮಾಡಿ, ರಾಜಕೀಯವಾಗಿ ಎದುರಿಸುತ್ತೇವೆ ಎಂದರು.
ಈ ಸರ್ಕಾರದ ಆಯಸ್ಸು ಲೋಕಸಭಾ ಚುನಾವಣೆವರೆಗೆ ಮಾತ್ರ :
ರಾಜ್ಯ ಸರ್ಕಾರದಲ್ಲಿ ಇಬ್ಬರು ನಾಯಕರ ನಡುವೆ ಭಿನ್ನಾಭಿಪ್ರಾಯ ಇದೆ. ಮೊದಲ ಹಂತದ ಮಂತ್ರಿ ಮಂಡಲಕ್ಕೆ ರಾತ್ರಿ ಮೂರುವರೆಗೂ ಇರುವ ಹಗ್ಗಾ ಜಗ್ಗಾಟ ಮಾಡಿದರು. ಈಗ ಎರಡನೇ ಹಂತದ ಪೈಪೋಟಿ ನಡೆದಿದೆ. ಇದನ್ನೆಲ್ಲ ನೋಡಿದ್ರೆ, ಇದು ಸಮ್ಮಿಶ್ರ ಸರ್ಕಾರ ಇದ್ದಂತಿದೆ.ಕಳೆದ ಬಾರಿ ಎರಡು ಪಕ್ಷಗಳಿಂದ ಸಮ್ಮಿಶ್ರ ಸರ್ಕಾರ ಇತ್ತು. ಆ ಸರ್ಕಾರದ್ದು ಅಧಿಕಾರ ಕಳೆದ ಲೋಕಸಭೆ ವರೆಗೂ ಇತ್ತು. ಹಾಗೇ ಇವಾಗ ಒಂದೇ ಪಕ್ಷ ಇದ್ದರೂ, ಎರಡು ಪಕ್ಷಗಳ ರೀತಿ ಸಮ್ಮಿಶ್ರ ಸರ್ಕಾರ ಇದೆ. ಇದರ ಆಯಸ್ಸು ಕೂಡ ಬರುವ ಲೋಕಸಭೆ ಚುನಾವಣೆ ವರೆಗೆ ಇರುತ್ತದೆ ಎಂದರು.
ರಾಜ್ಯದಲ್ಲಿನ ಟೆಂಡರ್ ಗಳೆನ್ನಲ್ಲ ನಿಲ್ಲಿಸಿದ್ದಾರೆ. ಇದರ ಬಗ್ಗೆ ನಮಗೆ ಯೋಚನೆ ಇಲ್ಲ. ಆದರೆ ಜನರ ಸಮಸ್ಯೆಗಳ ಬಗ್ಗೆ ಸರ್ಕಾರ ಸೂಕ್ತ ಕ್ರಮ ವಹಿಸುತ್ತಿಲ್ಲ. ವ್ಯವಸ್ಥೆ ಎನ್ನುವುದು ರಾಜ್ಯದ ಜನರ ಪರವಾಗಿ ಇರಬೇಕು. ಕನಿಷ್ಠ ಜನರಿಗೆ ಬೇಕಾಗುವ ಕೆಲಸ ಕಾರ್ಯಗಳು ತೊಂದರೆ ಆಗಬಾರದು ಎಂದರು.
ಗ್ಯಾರೆಂಟಿಗಳಿಗೆ ಕಂಡಿಷನ್; ಜನರನ್ನು ಯಾಮಾರಿಸುವ ಕೆಲಸ :
ಗ್ಯಾರಂಟಿಗಳ ಬಗ್ಗೆ ಜನರ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಬೊಮ್ಮಾಯಿ, ಜನ ಸ್ವಯಂಪ್ರೇರಿತವಾಗಿ ತೀರ್ಮಾನ ಮಾಡುತ್ತಿದ್ದಾರೆ. ಅವರ ಪರವಾಗಿ ನಾವು ನಿಲ್ಲಬೇಕಾಗುತ್ತದೆ. ಎರಡನೇ ಕ್ಯಾಬಿನೆಟ್ ವರೆಗೂ ಅವರು ಯಾಕೆ ಕಾಯಬೇಕು. ಎಲ್ಲಾ ಮಹಿಳೆಯರಿಗೆ ನೀಡುತ್ತೇವೆ ಎಂದಿದ್ದರು. ಇಂದು ಕಂಡಿಷನ್ ಅಂತಿದ್ದಾರೆ ಯಾಕೆ ಎನ್ನುತ್ತಿದ್ದಾರೆ. ಇದು ಕೇವಲ ಜನರನ್ನು ಯಾಮಾರಿಸುವ ಕೆಲಸ. ತಮಿಳುನಾಡಿನಿಂದ ಬಂದವರಿಗೆ ಹೇಗೆ ಗುರುತಿಸುತ್ತಾರೆ. ಒಲ್ಲದ ಗಂಡನಿಗೆ ನೂರಾರು ಕುಂಟು ನೆಪ ಎನ್ನುವ ಹಾಗೇ ಕಾಂಗ್ರೆಸ್ ಕಥೆಯಾಗಿದೆ ಎಂದರು.
ವಿರೋಧ ಪಕ್ಷದ ನಾಯಕ ವಿಚಾರ; ಕಾಂಗ್ರೆಸ್ ಗೆ ಬೊಮ್ಮಾಯಿ ತಿರುಗೇಟು :
ಬಿಜೆಪಿಯಲ್ಲಿ ಮೊದಲು ವಿರೋಧ ಪಕ್ಷದ ನಾಯಕ ಆಯ್ಕೆಯಾಗಲಿ ಎಂಬ ಕಾಂಗ್ರೆಸ್ ಟೀಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ನಮ್ಮ ಬಗ್ಗೆ ಅವರಿಗೆ ಯಾಕೆ ಇಷ್ಟು ಚಿಂತೆ? ಅವರನ್ನು ಜನರು ಗೆಲ್ಲಿಸಿದ್ದಾರೆ. ಮೊದಲು ಅವರು ಜನರ ಕೇಳುತ್ತಿರುವ ಬೇಡಿಕೆ ಈಡೇರಿಸಲಿ. ವಿರೋಧ ಪಕ್ಷದ ನಾಯಕ ನೇಮಕ ಯಾವಾಗ ಮಾಡಬೇಕು ಎಂದು ನಮಗೆ ಗೊತ್ತಿದೆ. ಬರುವ ಅಸೆಂಬ್ಲಿ ಒಳಗೆ ವಿರೋಧ ಪಕ್ಷದ ನಾಯಕ ಯಾರೆಂದು ಆಯ್ಕೆ ಆಗುತ್ತದೆ. ಹೀಗಾಗಿ ನಮ್ಮ ಬಗ್ಗೆ ಬಿಡಿ, ನೀವು ನಿಮ್ಮ ಕೆಲಸ ಮಾಡಿ ಎಂದು ಕಾಂಗ್ರೆಸ್ ಗೆ ತಿರುಗೇಟು ನೀಡಿದರು.


Spread the love

About Yuva Bharatha

Check Also

ಹಿರೇಬೂದನೂರ : ಭಕ್ತರ ಸನ್ಮಾನ

Spread the loveಹಿರೇಬೂದನೂರ : ಭಕ್ತರ ಸನ್ಮಾನ ಮುರಗೋಡ : ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ದೇವಸ್ಥಾನದ …

Leave a Reply

Your email address will not be published. Required fields are marked *

nineteen + nine =