ಲಕ್ಷ್ಮೀ ಹೆಬ್ಬಾಳಕರ್ ಸೇರಿ ಐವರಿಗೆ ಮಂತ್ರಿಸ್ಥಾನ ಕೊಡಿ; ಕಾಂಗ್ರೆಸ್ ಹಾಗೂ ಬಿಜೆಪಿ ವರಿಷ್ಠರಿಗೆ ಪಂಚಮಸಾಲಿ ರಾಜ್ಯ ಕಾರ್ಯಕಾರಿಣಿಯ 2 ಪ್ರಮುಖ ಒತ್ತಾಯ

Spread the love

ಲಕ್ಷ್ಮೀ ಹೆಬ್ಬಾಳಕರ್ ಸೇರಿ ಐವರಿಗೆ ಮಂತ್ರಿಸ್ಥಾನ ಕೊಡಿ; ಕಾಂಗ್ರೆಸ್ ಹಾಗೂ ಬಿಜೆಪಿ ವರಿಷ್ಠರಿಗೆ ಪಂಚಮಸಾಲಿ ರಾಜ್ಯ ಕಾರ್ಯಕಾರಿಣಿಯ 2 ಪ್ರಮುಖ ಒತ್ತಾಯ

ಬೆಂಗಳೂರು :
ಬೆಂಗಳೂರಿನಲ್ಲಿ (ಮೇ 23 ರಂದು) ಲಿಂಗಾಯತ ಪಂಚಮಸಾಲಿ ನೂತನ ಶಾಸಕರುಗಳ ಅಭಿನಂದನಾ ಸಮಾರಂಭ ಕುರಿತು ಚರ್ಚಿಸುವ ಪೂರ್ವಭಾವಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಿತು. ಸಭೆಯಲ್ಲಿ ಈ ಕೆಳಗಿನ ನಿರ್ಣಾಯ ತೆಗೆದುಕೊಳ್ಳಲಾಯಿತು.

1) ಲಿಂಗಾಯತ ಪಂಚಮಸಾಲಿ ಸಮಾಜದ ಬಂಧುಗಳ ಒತ್ತಾಯದಂತೆ , ಮೀಸಲಾತಿಗಾಗಿ ಮುಂಚೂಣಿಯಲ್ಲಿ ಹೋರಾಡಿದಂತಹ ಹುನಗುಂದ ಶಾಸಕರಾದ ವಿಜಯಾನಂದ ಕಾಶಪ್ಪನವರ್ , ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ , ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಒಳಗೊಂಡಂತೆ ಒಟ್ಟು ಐದು ಶಾಸಕರಿಗೆ ಸಚಿವ ಸ್ಥಾನ ಕಲ್ಪಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ , ಉಪಮುಖ್ಯಮಂತ್ರಿ ಶಿವಕುಮಾರ್ ಹಾಗೂ ಕಾಂಗ್ರೆಸ್ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆಯವರಿಗೆ ಒತ್ತಾಯಿಸಲಾಯಿತು.

2) ಬಿಜೆಪಿ ಪಕ್ಷದ ರಾಜ್ಯ ಅಧ್ಯಕ್ಷ ಅಥವಾ ವಿರೋಧ ಪಕ್ಷದ ಸ್ಥಾನಕ್ಕೆ ಸಮರ್ಥ ಲಿಂಗಾಯತ ಪಂಚಮಸಾಲಿ ಶಾಸಕರಿಗೆ ಅವಕಾಶ ಮಾಡಿಕೊಡಬೇಕೆಂದು ರಾಷ್ಟ್ರೀಯ ಬಿಜೆಪಿ ವರಿಷ್ಠರಿಗೆ ಒತ್ತಾಯಿಸಲಾಯಿತು.

3) ನೂತನ ಶಾಸಕರ ಅಭಿನಂದನಾ ಸಮಾರಂಭವನ್ನು ಹಾಗೂ ಮೀಸಲಾತಿ ಹಕ್ಕೊತ್ತಾಯ ಸಮಾರಂಭವನ್ನು ಕೂಡಲಸಂಗಮದಲ್ಲಿ ಜೂನ್ ತಿಂಗಳಲ್ಲಿ ನೆರವೇರಿಸಲು ತೀರ್ಮಾನಿಸಲಾಯಿತು.

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರುಬಸವ ಜಯಮೃತ್ಯುಂಜಯ ಸ್ವಾಮೀಜಿಯವರ ಸಾನಿಧ್ಯದಲ್ಲಿ ನಡೆದ ಸಭೆಯಲ್ಲಿ ಶ್ರೀಗಳು ಸರ್ಕಾರಕ್ಕೆ ಒತ್ತಾಯಿಸಿದರು.

ರಾಷ್ಟ್ರೀಯ ಅಧ್ಯಕ್ಷ ಹಾಗೂ ಶಾಸಕ ಡಾ. ವಿಜಯಾನಂದ ಕಾಶಪ್ಪನವರ್ ಅಧ್ಯಕ್ಷತೆಯಲ್ಲಿ ಜರುಗಿತು.

ನೂತನ ಶಾಸಕರಾದ ಧಾರವಾಡದ ವಿನಯ ಕುಲಕರ್ಣಿ, ಬೆಳಗಾವಿಯ ಲಕ್ಷ್ಮೀ ಹೆಬ್ಬಾಲ್ಕರ್ , ಕಾಗವಾಡದ ರಾಜುಗೌಡ ಕಾಗೆ , ದೇವರ ಹಿಪ್ಪರಗಿಯ ರಾಜುಗೌಡ ಪಾಟೀಲ್ , ಸಿಂದಗಿಯ ಅಶೋಕ ಮನಗೂಲಿ , ಕಿತ್ತೂರಿನ ಬಾಬಾ ಸಾಹೇಬ್ ಪಾಟೀಲ , ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ , ನಿಗಮದ ಮಾಜಿ ಅಧ್ಯಕ್ಷ ಎಂ ಎಸ್ ರುದ್ರಗೌಡ , ವಿವಿಧ ಜನಪ್ರತಿನಿಧಿಗಳು, ಪಂಚಮಸಾಲಿ – ಗೌಡ – ಮಲೆಗೌಡ ದೀಕ್ಷಾ – ಲಿಂಗಾಯತ ರಾಷ್ಟ್ರೀಯ , ರಾಜ್ಯ , ಜಿಲ್ಲಾ ವಿವಿಧ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಡಾ.ಬಿಎಸ್ ಪಾಟೀಲ್ ಪಂಚಸೇನಾ ರಾಷ್ಟ್ರೀಯ ಅಧ್ಯಕ್ಷರು ಬೆಂಗಳೂರು , ಬೆಂಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಟ್ಟರಾಜ, ರಾಷ್ಟಿಯ ಅಧ್ಯಕ್ಷ ಮಲ್ಲಣಗೌಡರು , ಶಿವಪುತ್ರ ಮಲ್ಲೇವಾಡ್ ನಗರ ಅಧ್ಯಕ್ಷರು , ದಾನಪ್ಪಗೌಡರು , ಕಾಂತೇಶ್ , ಮಲ್ಲಣ ಗೌಡ , ಶೈಲೇಂದ್ರ ಪಾಟೀಲ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಆಧಾರ್ ಕಾರ್ಡ್ ಕುರಿತು ಮಹತ್ವದ ಮಾಹಿತಿ

Spread the loveಆಧಾರ್ ಕಾರ್ಡ್ ಕುರಿತು ಮಹತ್ವದ ಮಾಹಿತಿ ನವದೆಹಲಿ : ಉಚಿತವಾಗಿ ಆಧಾರ್ ಕಾರ್ಡ್ ಅಪ್ ಡೇಟ್ ಮಾಡಲು …

Leave a Reply

Your email address will not be published. Required fields are marked *

4 + 10 =