Breaking News

||ಬಾಲ್ಯ ಸ್ನೇಹಿತ, ಎಸ್. ಎ. ಕೊತ್ವಾಲ್  ನಿಧನಕ್ಕೆ!!|| ಸಚಿವರಾದ ರಮೇಶ್ ಜಾರಕಿಹೊಳಿ ಸಂತಾಪ.|| ಸ್ನೇಹಿತನನ್ನು‌ ನೆನೆದು ಕಣ್ಣೀರಿಟ್ಟ ಸಚಿವ ರಮೇಶ್!

Spread the love

 

||ಬಾಲ್ಯ ಸ್ನೇಹಿತ, ಎಸ್. ಎ. ಕೊತ್ವಾಲ್  ನಿಧನಕ್ಕೆ||

ಸಚಿವರಾದ ರಮೇಶ್ ಜಾರಕಿಹೊಳಿ ಸಂತಾಪ.||

ಬಾಲ್ಯದ ಸ್ನೇಹಿತ ಎಸ್ ಎ ಕೋತ್ವಾಲ ಅವರ ನಿಧನದ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಿದ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ‌.

ಚಿವರ ಗೃಹ ಕಚೇರಿಯಲ್ಲಿ ನಡೆದ ಶ್ರದ್ಧಾಂಜಲಿ ಸಭೆ.

ಸ್ನೇಹಿತನನ್ನು‌ ನೆನೆದು ಕಣ್ಣೀರಿಟ್ಟ ಸಚಿವ ರಮೇಶ್

 

 

ಯುವ ಭಾರತ ಸುದ್ದಿ  ಗೋಕಾಕ:  ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಬಾಲ್ಯ ಸ್ನೇಹಿತ, ಗೋಕಾಕ ನಗರ ಸಭೆಯ ಸದಸ್ಯ ಎಸ್. ಎ. ಕೊತ್ವಾಲ್ ಅನಾರೋಗ್ಯದಿಂದ ಭಾನುವಾರ ನಿಧನರಾಗಿದ್ದಾರೆ.
ಬಹು ಅಂಗಾಗಗ ವೈಫಲ್ಯದಿಂದ ಬಳಲುತ್ತಿದ್ದ ಕೊತ್ವಾಲ್ ಹಲವು ದಿನಗಳಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಗೋಕಾಕನಲ್ಲಿ ಕೊತ್ವಾಲ್ ಗೌಡರು ಎಂದೇ ಖ್ಯಾತಿ ಹೊಂದಿದ್ದರು. ಬಾಲ್ಯದಿಂದಲೂ ಕೊತ್ವಾಲ್ ಹಾಗೂ ಸಚಿವ ರಮೇಶ್ ಜಾರಕಿಹೊಳಿ ಒಡನಾಡಿಗಳಾಗಿದ್ದರು. ರಮೇಶ್ ಜಾರಕಿಹೊಳಿ ಉತ್ತುಂಗಕ್ಕೇರಲು ಕೊತ್ವಾಲ್ ಶ್ರಮಿಸಿದ್ದರು.
ಸತತ 6 ಬಾರಿ ನಗರಸಭೆ ಸದಸ್ಯರಾಗಿ ಆಯ್ಕೆ ಆಗಿದ್ದ ಕೊತ್ವಾಲ್ ಮುಸ್ಲಿಂ ಸಮುದಾಯದ ಪ್ರಮುಖ ನಾಯಕರಾಗಿದ್ದರು.

ಇದೀಗ ಸ್ನೇಹಿತನ ಅಕಾಲಿಕ ನಿಧನದಿಂದ ರಮೇಶ್ ಜಾರಕಿಹೊಳಿ ಸಂತಾಪ ಸೂಚಿಸಿದ್ದಾರೆ.
ನನ್ನ ರಾಜಕೀಯ ಪ್ರಗತಿಯಲ್ಲಿ ಹೆಜ್ಜೆ ಹೆಜ್ಜೆಗೂ ನನ್ನೊಂದಿಗೆ ನಿಂತು ಜಯಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದ್ದರು.

ಗೋಕಾಕ್ ನಗರಸಭೆಗೆ ಸತತ ಆರನೇ ಬಾರಿ ಆಯ್ಕೆ ಯಾಗಿದ್ದರು ಮತ್ತು ನಗರಸಭೆಯ ಅಧ್ಯಕ್ಷರಾಗಿ ನಗರದ ಅಭಿವೃದ್ಧಿಗೆ ಕಾರಣಕರ್ತರಾಗಿದ್ದರು.ಜಾತ್ಯಾತೀತ ವ್ಯಕ್ತಿಯಾಗಿದ್ದ ಕೋತ್ವಾಲ್, ಗೋಕಾಕ್ ನಗರದ ಅಂಜುಮನ್ ಇಸ್ಲಾಂ ಸಮಿತಿ ಮತ್ತು ತಂಜೀA ಶಿಕ್ಷಣ ಸಂಸ್ಥೆ ಯ ಅಧ್ಯಕ್ಷರಾಗಿ, ಊರದೇವತೆಯಾದ ಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವ ಆಚರಣೆ ಯ ಸಮಿತಿ ಸದಸ್ಯರಾಗಿ ಜಾತ್ರೆಯನ್ನು ಯಶಸ್ವಿಗೊಳಿಸುತ್ತಿದ್ದರು.
ಭಾ.ಜ.ಪ.ದ ಬಗ್ಗೆ ಅಲ್ಪಸಂಖ್ಯಾತ ಸಮುದಾಯದಲ್ಲಿ ವಿಶೇಷ ಪ್ರೀತಿ ಮೂಡಿಸಿ ಮುಸ್ಲಿಂ ಸಮುದಾಯದ ಮತದಾರರು ಬಿಜೆಪಿಗೆ ಬೆಂಬಲ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದಾಗ ನನ್ನೊಂದಿಗೆ ನಿಂತು, ಜನಜಾಗೃತಿ ಮೂಡಿಸಿದ್ದ ಕೋತ್ವಾಲ್, ಅವಿರತವಾಗಿ ಕೊರೋನಾ ಹರಡುವಿಕೆಯ ವಿರುದ್ಧ ಹೋರಾಡಿದ್ದರು.
ಕೋತ್ವಾಲ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಮತ್ತು ಅವರ ಕುಟುಂಬದ ಸದಸ್ಯರಿಗೆ, ಅವರ ಅಭಿಮಾನಿಗಳಿಗೆ ಅಗಲಿಕೆಯ ಶೋಕ ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಚಿವ ಜಾರಕಿಹೊಳಿ ಸಂತಾಪ ಸೂಚಿಸಿದ್ದಾರೆ.


Spread the love

About Yuva Bharatha

Check Also

ಡಾ.ಅಪ್ಪಾಸಾಹೇಬ್ ನಾಯ್ಕಲ್‌ಗೆ ಉತ್ತಮ ಗ್ರಂಥಪಾಲಕ ರಾಜ್ಯಪ್ರಶಸ್ತಿ.!

Spread the loveಡಾ.ಅಪ್ಪಾಸಾಹೇಬ್ ನಾಯ್ಕಲ್‌ಗೆ ಉತ್ತಮ ಗ್ರಂಥಪಾಲಕ ರಾಜ್ಯಪ್ರಶಸ್ತಿ.! ಬೆಳಗಾವಿ: ಭಾರತ ಗ್ರಂಥಾಲಯ ವಿಜ್ಞಾನ ಪಿತಾಮಹ, ಪದ್ಮಶ್ರೀ ಡಾ.ಎಸ್.ಆರ್.ರಂಗನಾಥನ್ ೧೩೧ನೇ …

Leave a Reply

Your email address will not be published. Required fields are marked *

fifteen + 12 =