ಯುವ ಭಾರತ ಸುದ್ದಿ, ಗೋಕಾಕ್: ಸಾರಿಗೆ ನೌಕರರನ್ನು ಸರ್ಕಾರಿ ನೌಕರನ್ನಾಗಿ ಘೋಷಿಸಬೇಕೆಂದು ಮುಷ್ಕರ ಹಿನ್ನೆಲೆ ಶುಕ್ರವಾರದಂದು ಬೆಳಿಗ್ಗೆ 9 ಗಂಟೆಯಿಂದ ಕೆಎಸ್‌ಆರ್‌ಟಿಸಿಯ ನಗರ ಘಟಕದ ಸಿಬ್ಬಂದಿ ಬಸ್ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.
ನಗರ ಸಾರಿಗೆ ಘಟಕದ ಸುಮಾರು 1೦೦ ಕ್ಕೂ ಹೆಚ್ಚು ಸಾರಿಗೆ ನೌಕರರು ಧರಣಿ ಸತ್ಯಗ್ರಹ ನಡೆಸುತ್ತಿದ್ದು, 25 ಕ್ಕೂ ಹೆಚ್ಚು ಮಾರ್ಗಗಳಿಗೆ ಸಂಚಿರಿಸುತ್ತಿದ್ದ ಬಸ್ ಸೇವೆ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಪ್ರಯಾಣಿಕರು ಪರದಾಡುವಂತಾಯಿತು. ಬೆಳ್ಳಂಬೆಳಿಗ್ಗೆ ಬಸ್ಸು ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕರು ಬಸ್ಸು ಸಂಚಾರ ಸ್ಥಗಿತಗೊಂಡಿದ್ದನ್ನು ಕಂಡು ಕಾಯ್ದು ಕುಳಿತಿದ್ದು ಸಾಮಾನ್ಯವಾಗಿತ್ತು. ಕೆಲವು ಪ್ರಯಾಣಿಕರ ಹಾಗೂ ಸಾರಿಗೆ ನೌಕರರ ಮಧ್ಯೆ ಗಲಾಟೆಗಳು ಸಹ ಜರುಗಿವೆ.
ರಸ್ತೆಯ ಮೇಲೆ ಊಟ: ಸಾರಿಗೆ ನೌಕರರನ್ನು ಸರ್ಕಾರಿ ನೌಕರನ್ನಾಗಿ ಘೋಷಿಸಬೇಕೆಂದು ಮುಷ್ಕರ ಮಾಡುತ್ತಿರುವ ಸಾರಿಗೆ ನೌಕರರು ರಸ್ತೆಯ ಮೇಲೆ ಊಟ ಸೇವಿಸಿ, ಪ್ರತಿಭಟನೆ ನಡೆಸಿದರು.