ಜೈಲಿನಲ್ಲಿ ಕುಟುಂಬಸ್ಥರನ್ನು ಭೇಟಿಯಾದ ವಿನಯ್ ಕುಲಕರ್ಣಿ

Spread the love

ಜೈಲಿನಲ್ಲಿ ಕುಟುಂಬಸ್ಥರನ್ನು ಭೇಟಿಯಾದ ವಿನಯ್ ಕುಲಕರ್ಣಿ


ಯುವ ಭಾರತ ಸುದ್ದಿ,  ಬೆಳಗಾವಿ: ಧಾರವಾಡದ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶಗೌಡ ಹತ್ಯೆ ಪ್ರಕರಣದಲ್ಲಿ ಹಿಂಡಲಗಾ ಜೈಲಿನಲ್ಲಿ ಕಳೆದ ಒಂದು ತಿಂಗಳಿನಿಂದ ಇರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಗುರುವಾರ ಸಂಜೆ ಅವರ ಕುಟುಂಬಸ್ಥರು ಭೇಟಿಯಾದರು.

ವಿನಯ್ ಕುಲಕರ್ಣಿ ಭೇಟಿ ಮಾಡಿದ ಕುಟುಂಬಸ್ಥರು, ತಾವು ತಂದಿದ್ದ ಆಹಾರವನ್ನು ನೀಡಿದರು. ತಿಂಗಳ ಬಳಿಕ ಮನೆ ಊಟವನ್ನು ವಿನಯ್ ಕುಲಕರ್ಣಿ ಸೇವಿಸಿದರು. ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಅವರ ಪತ್ನಿ ಶಿವಲೀಲಾ ಕುಲಕರ್ಣಿ, ಪುತ್ರಿಯರಾದ ವೈಶಾಲಿ, ದೀಪಾಲಿ ಹಾಗೂ ಪುತ್ರ ಹೇಮಂತ ಭೇಟಿಯಾದರು.

ಧಾರವಾಡದಿಂದ ಸಂಜೆ ನಾಲ್ಕು ಗಂಟೆಗೆ ಆಗಮಿಸಿದ್ದ ಕುಟುಂಬಸ್ಥರು, ಜೈಲಿನೊಳಗೆ ತೆರಳಿ ವಿನಯ್ ಕುಲಕರ್ಣಿ ಅವರನ್ನು ಭೇಟಿಯಾಗಿ ಅವರ ಯೋಗಕ್ಷೇಮ ವಿಚಾರಿಸಿದರು. ಸುಮಾರು ೩೧ ದಿನಗಳ ಬಳಿಕ ಕುಟುಂಬಸ್ಥರನ್ನು ಕಂಡು ವಿನಯ್ ಕುಲಕರ್ಣಿ ಭಾವುಕರಾದರು.

ವಿನಯ್ ಕುಲಕರ್ಣಿ ಭೇಟಿ ಮಾಡಿದ ಕುಟುಂಬಸ್ಥರು, ತಾವು ತಂದಿದ್ದ ಆಹಾರವನ್ನು ನೀಡಿದರು. ತಿಂಗಳ ಬಳಿಕ ಮನೆ ಊಟವನ್ನು ವಿನಯ್ ಕುಲಕರ್ಣಿ ಸೇವಿಸಿದರು. ಒಂದು ಗಂಟೆ ಸಮಯಾವಕಾಶ ಮುಗಿದ ಬಳಿಕ ಕುಟುಂಬಸ್ಥರು ಹೊರ ಬಂದರು.


Spread the love

About Yuva Bharatha

Check Also

೭ನೇ ಬಾರಿಗೆ ಆಯ್ಕೆ ಮಾಡಿ ತಮ್ಮ ಸೇವೆ ಮಾಡಲು ಸಹಕರಿಸಿದ ಗೋಕಾಕ ಮತಕ್ಷೇತ್ರದ ಜನತೆಗೆ ನಾವು ಕೃತಜ್ಞರಾಗಿದ್ದೇವೆ-ಯುವ ಧುರೀಣ ಅಮರನಾಥ ಜಾರಕಿಹೊಳಿ.!

Spread the love೭ನೇ ಬಾರಿಗೆ ಆಯ್ಕೆ ಮಾಡಿ ತಮ್ಮ ಸೇವೆ ಮಾಡಲು ಸಹಕರಿಸಿದ ಗೋಕಾಕ ಮತಕ್ಷೇತ್ರದ ಜನತೆಗೆ ನಾವು ಕೃತಜ್ಞರಾಗಿದ್ದೇವೆ-ಯುವ …

Leave a Reply

Your email address will not be published. Required fields are marked *

18 + 12 =