ವಿದ್ಯಾರ್ಥಿಗಳ ಗಮನ ವಿಜ್ಞಾನ ಕಡೆ ಇರಲಿ- ಪ್ರಭಾಕರ ಬಗಲಿ
ಯುವ ಭಾರತ ಸುದ್ದಿ ಇಂಡಿ : ಇಂದು ವಿಜ್ಞಾನ ತಂತ್ರಜ್ಞಾನ ಯುಗದಲ್ಲಿ ಪ್ರಪಂಚ ನಾಗಾಲೋಟದಲ್ಲಿ ಓಡುತ್ತಿದ್ದು ಕಾಲಕ್ಕೆ ತಕ್ಕಂತೆ ಬದಲಾವಣೆ ಅಗತ್ಯೆ ,ಈಹಿನ್ನಲೆಯಲ್ಲಿ ವಿಧ್ಯಾರ್ಥಿಗಳ ದೃಷ್ಠಿಕೋನ ಹೆಚ್ಚು ವಿಜ್ಞಾನ ಕಡೆ ಇರಲಿ ಎಂದು ಸಂಸ್ಥೆಯ ಕಾರ್ಯದರ್ಶಿ ಪ್ರಭಾಕರ ಬಗಲಿ ಹೇಳಿದರು.
ಪಟ್ಟಣದ ಶ್ರೀ ಶಾಂತೇಶ್ವರ ಶಿಕ್ಷಣ ಸಂಸ್ಥೆ ಅಡಿಯಲ್ಲಿರುವ ಶ್ರೀ ಶಾಂತೇಶ್ವರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಇಂದು ನಡೆದ ವಿಜ್ಞಾನ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಸ್ಪರ್ಧಾಯುಗದಲ್ಲಿ ವಿಜ್ಞಾನ ಮೇಳಗಳಂತಹ ಕಾರ್ಯಕ್ರಮಗಳು ವಿಧ್ಯಾರ್ಥಿಗಳಿಗೆ ಬಹಳ ಅವಶ್ಯಕವಾಗಿದೆ. ವಿಜ್ಞಾನ ನಿನ್ನೇ ಮೋನ್ನೆಯದಲ್ಲ ರಾಮಾಯಣ ಮಹಾಭಾರತ ಕಾಲದಲ್ಲಿ ಕೂಡಾ ಪುಸ್ಪಕ ವಿಮಾನ ಇದೆ ಎಂದಾದರೆ ವಿಜ್ಞಾನ ಜೀವಂತ ಅಂದು ಕೂಡಾ ಇದೆ ಎಂದು ಅರ್ಥ.ವಿಜ್ಞಾನ ಎಂದರೆ ಜ್ಞಾನ-ವಿಜ್ಞಾನಗಳ ಸಂಗಮವೇ ಈ ವಿಜ್ಞಾನಮೇಳವಾಗಿದ್ದು, ವಿದ್ಯಾರ್ಥಿಗಳ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಇಂತಹ ವೈಜ್ಞಾನಿಕ ಮೇಳ ಆಯೋಜಿಸುವುದು ಅವಶ್ಯಕವಾಗಿದೆ. ಶಿಕ್ಷಕರು ಮಕ್ಕಳಿಗೆ ಕಲಿಕೆಯ ಜೊತೆ ವೈಜ್ಞಾನಿಕ ಮನೋಭಾವ ಬೆಳೆಸಬೇಕು. ಪ್ರಚಲಿತ ವೈಜ್ಞಾನಿಕ ವಿದ್ಯಮಾನಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಹಾಗೂ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಈ ವಿಜ್ಞಾನ ಮೇಳ ಉದ್ದೇಶಗಳಲ್ಲಿ ಒಂದಾಗಿದೆ. ವಿಜ್ಞಾನ ವಿಷಯಗಳು ಮಕ್ಕಳಲ್ಲಿ ವಿಸ್ಮಯ ಮೂಡಿಸುತ್ತವೆ. ಮೌಢ್ಯತೆಯನ್ನು ಅಳಿಸಿ ವೈಜ್ಞಾನಿಕ ಚಿಂತನೆಗಳನ್ನು ಬಿತ್ತಿ ಬೆಳೆಸಬೇಕು ಎಂದರು.
ಸಂಸ್ಥೆಯ ಸಹ-ಕಾರ್ಯದರ್ಶಿ ಸಿದ್ದಣ್ಣ ತಾಂಬೆ ಮಾತನಾಡಿ ಮಕ್ಕಳಲ್ಲಿ ವೈಜ್ಞಾನಿಕ ಕೌಶಲ್ಯ ಬೆಳೆಸುವುದು ಇಂದಿನ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಸ್ಪೂರ್ತಿ ತುಂಬುತ್ತದೆ ಹಾಗೂ ವೈಜ್ಞಾನಿಕ ಕಲಿಕೆಗೆ ಪೂರಕವಾಗಿವೆ ಎಂದರು.
ಉಪಾಧ್ಯಕ್ಷ ನೀಲಕಂಠಗೌಡ ಪಾಟೀಲ ಅತಿಥಿ ಸ್ಥಾನ ವಹಿಸಿದರು. ಶಾಲೆ ಮುಖ್ಯಗುರು ಅಶೋಕ.ಬಿ.ಬಿರಾದಾರ, ಸಂಯೋಜಕರಾದ ಶ್ರೀಮತಿ ರ‍್ಹಾ. ರಬ್ಬಾನಿ ಮಾತನಾಡಿದರು. ಶಿಕ್ಷಕ ಎಸ್.ಎಸ್.ಇಂಗಳೇಶ್ವರ, ಐ.ಟಿ.ಐ ಪ್ರಾಂಶುಪಾಲ ಆನಂದ ಗೌಡಗಾವಿ,, ಎ.ಜೆ.ಜಮಾದಾರ, ಶಾಂತಾ ಸಾಸ್ವೇಕರ, ಎಮ್.ಎಸ್.ಖಸ್ಕಿ, ಆಕಾಶ ಜಾಡರ್ ಸರ್ ಹಾಗೂ ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಶಿಕ್ಷಕ ಎಮ್.ಜೆ.ಬಿರಾದಾರ ನಿರೂಪಿಸಿ ,ಶಿಕ್ಷಕಿ ಶಾಂತಲಾ ಮದರಖಂಡಿ ವಂದಿಸಿದರು