Breaking News

ಮೋದಿ..ಮೋದಿ..ಘೋಷಣೆ ನಡುವೆ ಲಂಬಾಣಿಯಲ್ಲೇ ಭಾಷಣ ಆರಂಭಿಸಿ ಮನ ಗೆದ್ದ ಮೋದಿ !

Spread the love

ಮೋದಿ..ಮೋದಿ..ಘೋಷಣೆ ನಡುವೆ ಲಂಬಾಣಿಯಲ್ಲೇ ಭಾಷಣ ಆರಂಭಿಸಿ ಮನ ಗೆದ್ದ ಮೋದಿ !

ಯುವ ಭಾರತ ಸುದ್ದಿ ಕಲಬುರಗಿ:
2023 ರ ಜನವರಿ ತಿಂಗಳು ಬಂಜಾರ ಸಮುದಾಯದವರಿಗೆ ಮರೆಯಲಾಗದು. ಈ ಪವಿತ್ರವಾದ ತಿಂಗಳಲ್ಲಿ ಸರಕಾರ ನಿಮ್ಮೆಲ್ಲರಿಗೂ ಹಕ್ಕು ಪತ್ರ ವಿತರಿಸಿ ಸಾಮಾಜಿಕ ನ್ಯಾಯ ನೀಡಿದೆ. ಹಕ್ಕುಪತ್ರ ಪಡೆದ ನಿಮ್ಮೆಲ್ಲರಿಗೂ ಅಭಿನಂದನೆಗಳು. ಬಸವಣ್ಣನವರು ಸಾಮಾಜಿಕ ನ್ಯಾಯ ನೀಡಿದರು. ಅವರ ಆಶಯದಂತೆ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಪ್ರಯತ್ನಿಸಲಾಗುತ್ತದೆ. 1994 ರ ವಿಧಾನಸಭಾ ಚುನಾವಣೆಯಲ್ಲಿ ನಾನು ಇಲ್ಲಿಗೆ ಬಂದಿದ್ದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಸ್ಮರಿಸಿಕೊಂಡರು.
ಕನ್ನಡ ಮತ್ತು ಲಂಬಾಣಿ ಭಾಷೆಯಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಕರ್ನಾಟಕ ರಾಜ್ಯದ ತಾಂಡಾದ ಬಂಜಾರ, ನಾಯಕ, ಕಾರಬಾರಿ, ಗುಮಂತು ಸಮುದಾಯದವರಿಗೆ ಕೈ ಮುಗಿಯುವೆ’ ಎಂದರು.
ಜೈ ಸೇವಾಲಾಲ್ ಮಹಾರಾಜ್ ಎಂದು ಮೂರು ಬಾರಿ ಘೋಷಣೆ ಹಾಕಿದರು.

ನಂತರ ಬಸವೇಶ್ವರ, ಗಾಣಗಾಪುರ ದತ್ತಾತ್ರೇಯ ಸ್ವಾಮಿ, ರಾಷ್ಟ್ರಕೂಟರ ರಾಜಧಾನಿ ಮತ್ತು ಕರ್ನಾಟಕದ ಸಮಸ್ತ ಜನರಿಗೆ ನಮಸ್ಕಾರಗಳು’ ಎಂದು ಭಾಷಣ ಮುಂದುವರಿಸಿದರು.

ಸೇಡಂ ತಾಲ್ಲೂಕಿನ ಮಳಖೇಡನಲ್ಲಿ ಗುರುವಾರ ನಡೆದ ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ಪ್ರಧಾನಿ ನರೇಂ‌ದ್ರ ಮೋದಿ ಅವರು ಸಾಂಕೇತಿಕವಾಗಿ 5 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದರು.

ಬಳಿಕ ಅವರು ಭಾಷಣಕ್ಕೆ ಮುಂದಾದ ಕೂಡಲೇ ಸಭಿಕರು ಜೋರಾಗಿ ‘ಮೋದಿ.. ಮೋದಿ’ ಎಂದು ಕೂಗಿ ಜೈಕಾರ ಹಾಕಿದರು. ಚಪ್ಪಾಳೆಗಳನ್ನು ತಟ್ಟಿ ಸಂಭ್ರಮಿಸಿದರು.

 

‘ಸಂವಿಧಾನದ ಅಂಶಗಳನ್ನು ಅನುಷ್ಠಾನಕ್ಕೆ ತರಲಾದ ಜನವರಿಯ ಪವಿತ್ರ ತಿಂಗಳಲ್ಲಿ ಕರ್ನಾಟಕದ ಸರ್ಕಾರವು ಸಾಮಾಜಿಕ ನ್ಯಾಯದ ವಿಷಯದಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಇಂದು ಬಂಜಾರ ಸಮುದಾಯದವರಿಗೆ ದೊಡ್ಡ ದಿನವಾಗಿದೆ. 51 ಸಾವಿರ ಕುಟುಂಬದವರಿಗೆ ಮೊದಲ ಬಾರಿಗೆ ಅವರ ಮನೆಯ ಹಕ್ಕುಪತ್ರ ಸಿಗಲಿದೆ. ಇದು ಕರ್ನಾಟಕದ ತಾಂಡಾದ ನಿವಾಸಿಗಳಿಗೆ ಭದ್ರತೆ ಕಲ್ಪಿಸುತ್ತದೆ. ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಯವರಿಗೆ ಅಭಿನಂದನೆಗಳು’ ಎಂದರು.

‘ರಾಜ್ಯದ 3000 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ಮಹತ್ವದ ಕಾರ್ಯ ರಾಜ್ಯ ಸರ್ಕಾರ ಕೈಗೊಂಡಿದೆ. ಬೊಮ್ಮಾಯಿ ಮತ್ತು ಅವರ ತಂಡಕ್ಕೆ ಅಭಿನಂದಿಸುವೆ. ಈ ಕ್ಷೇತ್ರವು ನನಗೆ ಹೊಸದಲ್ಲ. ಬಂಜಾರ ಸಮುದಾಯ ನನಗೆ ಹೊಸದಲ್ಲ. ಬಂಜಾರ ಸಮುದಾಯದವರು ರಾಷ್ಟ್ರವಿಕಾಸದ ಹೆಸರಿನಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಲೇ ಇದ್ದಾರೆ. ಅವರೊಂದಿಗೆ ದೇಶ ಕಟ್ಟುವ ಕಾರ್ಯದಲ್ಲಿ ನಾನು ನಿರತನಾಗಿದ್ದು, ಇದು ತುಂಬಾ ಖುಷಿ ಕೊಟ್ಟಿದೆ ಎಂದರು.

‘ಎಲ್ಲರ ಸಹಭಾಗಿತ್ವ, ವಿಕಾಸ, ಪ್ರಯಾಸದಿಂದ ಮಾತ್ರ ದೇಶವನ್ನು ಪ್ರಗತಿಪಥದಲ್ಲಿ ಒಯ್ಯಲು ಸಾಧ್ಯವಾಗುತ್ತದೆ. ಬಂಜಾರ ಸಮುದಾಯದವರು ಹಲವು ಸಂಕಷ್ಟ ಅನುಭವಿಸಿದ್ದಾರೆ. ಅವರ ಬದುಕು ಸುಧಾರಿಸಲೆಂದೇ ಹಲವು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲೆಂದೇ ಬಂಜಾರ ಸಮುದಾಯದ ಯುವಜನರಿಗೆ ಉಚಿತ ತರಬೇತಿ ನೀಡಲಾಗುವುದು ಎಂದರು.

‘ಹಕ್ಕುಪತ್ರದ ವಿತರಣೆಯ ಜೊತೆಗೆ ತಾವು ವಾಸಿಸುವ ಪ್ರದೇಶದ ಅಭಿವೃದ್ಧಿಗೆ ಆದ್ಯತೆ ಕೊಡಲಾಗುವುದು. ಡಬ್ಬಲ್ ಎಂಜಿನ್ ಸರ್ಕಾರವು ಹಿಂದುಳಿದವರಿಗೆ, ಅವಕಾಶ ವಂಚಿತರಿಗೆ ಸೇರಿದಂತೆ ಎಲ್ಲಾ ವರ್ಗದವರಿಗೆ ಮನೆ, ವಿದ್ಯುತ್, ನೀರು, ಅಡುಗೆ ಅನಿಲ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಎಲ್ಲವೂ ದೊರೆಯಲಿದೆ ಎಂದರು.

ಮಧ್ಯಾಹ್ನ 2.50ಕ್ಕೆ ಭಾಷಣ ಆರಂಭಿಸಿದ ಮೋದಿಯವರು 3.20ರ ಸುಮಾರಿಗೆ ಭಾಷಣ ಕೊನೆಗೊಳಿಸಿದರು. ಎಲ್ಲರಿಗೂ ಮತ್ತೊಮ್ಮೆ ಶುಭ ಹಾರೈಸಿದರು.


Spread the love

About Yuva Bharatha

Check Also

ಹಿರೇಬೂದನೂರ : ಭಕ್ತರ ಸನ್ಮಾನ

Spread the loveಹಿರೇಬೂದನೂರ : ಭಕ್ತರ ಸನ್ಮಾನ ಮುರಗೋಡ : ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ದೇವಸ್ಥಾನದ …

Leave a Reply

Your email address will not be published. Required fields are marked *

two × five =