Breaking News

ವಿಷಯಗಳ ಬಗ್ಗೆ ಪ್ರಾಶಸ್ತ್ಯ ನೀಡಿ ಓದಿದರೆ ಉತ್ತಮ ಸಾಧನೆ ಮಾಡಲು ಸಾಧ್ಯ.- ಕನ್ನಡತಿ ಧಾರಾವಾಹಿ ಕಿರುತೆರೆ ನಟಿ ರಂಜನಿ ರಾಘವನ್.!

Spread the love

ವಿಷಯಗಳ ಬಗ್ಗೆ ಪ್ರಾಶಸ್ತ್ಯ ನೀಡಿ ಓದಿದರೆ ಉತ್ತಮ ಸಾಧನೆ ಮಾಡಲು ಸಾಧ್ಯ.- ಕನ್ನಡತಿ ಧಾರಾವಾಹಿ ಕಿರುತೆರೆ ನಟಿ ರಂಜನಿ ರಾಘವನ್.!

ಗೋಕಾಕ: ವಿದ್ಯಾರ್ಥಿ ಜೀವನದಲ್ಲಿ ಅಂದುಕೊAಡಿದ್ದನ್ನು ಸಾಧಿಸಲು ಪರಿಶ್ರಮಪಟ್ಟು ಏಕಾಗ್ರತೆಯಿಂದ ಓದುಬೇಕು ಎಂದು ಕನ್ನಡತಿ ಧಾರಾವಾಹಿ ಕಿರುತೆರೆ ನಟಿ ರಂಜನಿ ರಾಘವನ್ ಹೇಳಿದರು.
ಬುಧವಾರದಂದು ನಗರದ ಶ್ರೀ ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ಆವರಣದಲ್ಲಿ ಜರುಗಿದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ಹಾಗೂ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಸಂಯುಕ್ತ ಪದವಿ ಪೂರ್ವ ಕಾಲೇಜನ ವಾರ್ಷಿಕ ಸ್ನೇಹ ಸಮ್ಮೇಳನದ ಕೊನೆಯ ದಿನದ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿಕ್ಷಕರು ತರಗತಿಗಳಲ್ಲಿ ಹೇಳುವ ಪಾಠಗಳನ್ನು ವಿದ್ಯಾರ್ಥಿಗಳು ಏಕಾಗ್ರತೆಯಿಂದ ಆಲಿಸುವದರ ಜೊತೆಗೆ ತಮಗೆ ಏನು ಬೇಕು ಎಂಬ ವಿಷಯಗಳ ಬಗ್ಗೆ ಪ್ರಾಶಸ್ತ್ಯ ನೀಡಿ ಓದಬೇಕು. ಪರೀಕ್ಷೆಗಳನ್ನು ಎದುರಾದಾಗ ಅವುಗಳನ್ನು ಧೈರ್ಯದಿಂದ ಎದುರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ವಿಷಯಗಳ ಬಗ್ಗೆ ಪ್ರಾಶಸ್ತ್ಯ ನೀಡಿ ಓದಿದರೆ ಉತ್ತಮ ಸಾಧನೆ ಮಾಡಲು ಸಾಧ್ಯ. ನಾವು ಮಾಡುವ ಕಾರ್ಯದಲ್ಲಿ ಸ್ಥಿರತೆ ಇರಬೇಕು ಇದು ವಿದ್ಯಾರ್ಥಿ ಜೀವನದಲ್ಲಿ ಬಹುಮುಖ್ಯ ಪಾತ್ರವಹಿಸಿದೆ ಎಂದು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿಲೀಪ್ ಕುರಂವಾಡೆ ಮಾತನಾಡಿ, ಶಿಕ್ಷಕರು ಮತ್ತು ಪಾಲಕರು ಜೊತೆಯಾಗಿ ಕಾರ್ಯ ನಿರ್ವಹಿಸಿದರೆ ಮಕ್ಕಳ ಭವಿಷ್ಯವನ್ನು ಉತ್ತಮ ಗೋಳಿಸಲು ಸಾಧ್ಯವಾಗಿದ್ದು, ವಿದ್ಯಾರ್ಥಿ ಜೀವನದಲ್ಲಿ ನಯವಿಯನ ಇರಬೇಕು ಅಂದಾಗ ಮಾತ್ರ ಗೆಲ್ಲಲು ಸಾಧ್ಯ. ತಮ್ಮ ಮಕ್ಕಳ ಏನಾಗಬೇಕು ಎಂಬುದನ್ನು ಪಾಲಕರು ನಿರ್ಧರಿಸುವ ಜೊತೆಗೆ ಮಕ್ಕಳಲ್ಲಿ ನೈತಿಕತೆಯನ್ನು ತುಂಬಬೇಕಾಗಿದೆ. ಮಕ್ಕಳು ಕೌರವರಾಗಬೇಕು ಅಥವಾ ಪಾಂಡವರಾಗಬೇಕು ಎಂಬುದನ್ನು ನಿರ್ಧರಿಸುವ ಜವಾಬ್ದಾರಿ ಪಾಲಕರ ಮೇಲಿದೆ. ವಿದ್ಯಾರ್ಥಿಗಳು ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಪಾಲಕರು ಪಾತ್ರ ಕೂಡಾ ಬಹುದೊಡ್ಡದಾಗಿದೆ ಅದನ್ನು ಅರಿತು ಪಾಲಕರು ಮಕ್ಕಳನ್ನು ರೂಪಿಸುವ ಕಾರ್ಯ ಮಾಡಬೇಕಾಗಿದೆ ಅಂದಾಗ ಮಾತ್ರ ಮಕ್ಕಳನ್ನು ಉತ್ತಮ ನಾಗರಿಕರಾಗಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಾರ್ಷಿಕ ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿ/ ವಿದ್ಯಾರ್ಥಿನೀಯರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷೆ ಶ್ರೀಮತಿ ಸುವರ್ಣ ಜಾರಕಿಹೊಳಿ, ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ, ಆಡಳಿತಾಧಿಕಾರಿ ಬಿ ಕೆ ಕುಲಕರ್ಣಿ, ಅರುಣ್ ಪೂಜೇರ, ಆರ್. ಎಂ ದೇಶಪಾಂಡೆ, ಎಚ್.ವ್ಹಿ ಪಾಗನಿಸ, ಪಿ.ವ್ಹಿ.ಚಚಡಿ ಇದ್ದರು.


Spread the love

About Yuva Bharatha

Check Also

ಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.!

Spread the loveಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.! ಗೋಕಾಕ: ವಿಜಯಪುರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯ ಹಿಂದು ಧಾರ್ಮಿಕ …

Leave a Reply

Your email address will not be published. Required fields are marked *

nineteen − 4 =