- ಮೂಡಲಗಿ : ಹಿಡಕಲ್ ಜಲಾಶಯ ಬರ್ತೀಯಾ ಗೊತ್ತಿರುವುದರಿಂದ ಆಣೆಕಟ್ಟಿನ ಹೊತ್ತು ಬಾಗಿಲುಗಳ ಮೂಲಕ ನೀರು ಹರಿಬಿಟ್ಟ ಪರಿಣಾಮ ಗೋಕಾಕ ತಾಲೂಕಿನ ಪ್ರಸಿದ್ಧ ಶ್ರೀ ಉದಗಟ್ಟಿ ಗ್ರಾಮದ ಉದ್ದಮ್ಮ ದೇವಸ್ಥಾನ ಮಂಗಳವಾರ ಘಟಪ್ರಭಾ ನದಿ ಪ್ರವಾಹದಿಂದಾಗಿ ಜಲಾವೃತವಾಗಿದೆ.
ಹೌದು ಕಳೆದ ವಾರದಿಂದ ಮಹಾರಾಷ್ಟ್ರ ಮತ್ತು ಬೆಳಗಾವಿ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಘಟಪ್ರಭಾ ನದಿ ತುಂಬಿ ಹರಿಯುತ್ತಿದ್ದು, ಗೋಕಾಕ ತಾಲೂಕಿನ ಹಲವಾರು ಗ್ರಾಮಗಳು ಮುಳುಗಡೆಯ ಆತಂಕವನ್ನು ಎದುರಿಸುತ್ತಿವೆ.
ಈ ಹಿನ್ನೆಲೆಯಲ್ಲಿ ಉದಗಟ್ಟಿ ಉದ್ದಮ್ಮನ ದೇವಸ್ಥಾನ ಸಂಪೂರ್ಣವಾಗಿ ಮುಳುಗಡೆಯಾಗುವ ಆತಂಕವಿದೆ.
ಸುಣಧೋಳಿ ಜಡಿಸಿದ್ದೇಶ್ವರ ದೇವಸ್ಥಾನ ಜಲಾಮೃತ ಹಾಗೂ ದೇವಸ್ಥಾನ ಜಲಾವೃತಗೊಂಡರು ಪೂಜೆ ನಿರಂತರ : ಮೂಡಲಗಿ ಸಮೀಪದ ಸುಣಧೋಳಿ ಗ್ರಾಮದ ಪ್ರಸಿದ್ಧ ಶ್ರೀ ಜಡಿಸಿದ್ದೇಶ್ವರ ದೇವಸ್ಥಾನಕ್ಕೆ ಮತ್ತೆ ಜಲ ಕಂಟಕ ಎದುರಾಗಿದೆ.
ಮಳೆ ಪ್ರಮಾಣ ಹೆಚ್ಚಾಗಿದ್ದರಿಂದ ಘಟಪ್ರಭಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಜಡಿಸಿದ್ದೇಶ್ವರ ದೇವಸ್ಥಾನದ ಸುತ್ತಲೂ ನೀರು ಆವರಿಸಿದ್ದು, ದೇವಸ್ಥಾನದ ಪೂಜಾರಿಗಳು ಮಾತ್ರ ವಿಗ್ರಹ ಪೂಜೆಯನ್ನು ನಿರಂತರವಾಗಿ ಮಾಡುತ್ತಿದ್ದಾರೆ.
ಮೂಡಲಗಿ ಮಾರ್ಗವಾಗಿರುವ ಸುಣಧೋಳಿ ಗ್ರಾಮದ ಸೇತುವೆ ಕೂಡ ಸಂಪೂರ್ಣವಾಗಿ ಮುಳುಗಡೆಯಾಗಿದ್ದು ಸಂಚಾರ ಸ್ಥಗಿತಗೊಂಡಿದೆ ಇದರಿಂದ ಸುಣಧೋಳಿ ಜನತೆಯಲ್ಲಿ ಮತ್ತೆ ಪ್ರವಾಹ ಎದುರಾಗಬಹುದು ಆತಂಕದ ಛಾಯೆ ಮೂಡಿದೆ.
ಯಾದವಾಡ ಗೋಕಾಕ್ ರಸ್ತೆಯ ತಿಗಡಿ ಸೇತುವೆ ಸಂಪೂರ್ಣ ಮುಳುಗಡೆ : ಮೂಡಲಗಿ ತಾಲೂಕಿನ ಸಮೀಪದ ಯಾದವಾಡ ಗೋಕಾಕ್ ರಸ್ತೆಯ ತಿಗಡಿ ಸೇತುವೆ ಜಲಾವೃತಗೊಂಡಿದ್ದು ಸಂಚಾರ ಸ್ಥಗಿತಗೊಂಡಿದೆ.
ಇನ್ನು ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿದ್ದರೆ ನದಿತೀರದ ಜನ ತುಂಬಾ ತೊಂದರೆಗೆ ಸಿಲುಕುವ ಸಾಧ್ಯತೆ ಇದೆ.